ಮಣ್ಣಿನ ಗಣಪನ ಮೋಡಿ

Team Udayavani, Sep 1, 2019, 9:54 AM IST

ಕಲಬುರಗಿ:'ಸ್ವಗ್ರಾಮ' ತಂಡದ ಅಭಿಯಾನದಲ್ಲಿ ಮಕ್ಕಳು ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು.

ರಂಗಪ್ಪ ಗಧಾರ
ಕಲಬುರಗಿ:
ಗಣಪತಿ ಹಬ್ಬಕ್ಕೆಂದು ಎಲ್ಲೆಡೆ ಗಮನ ಸೆಳೆಯುತ್ತಿದ್ದ ಬಣ್ಣಬಣ್ಣದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳು ತಲೆ ಎತ್ತಿದ್ದರೂ, ಇದಕ್ಕೆ ಮೀರಿಸುವಂತೆ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಮನೆ-ಮನೆಗೂ ತಲುಪಲು ಸಜ್ಜಾಗಿವೆ.

ಪಿಒಪಿ ಗಣೇಶ ಮೂರ್ತಿ ನಿಷೇಧಿಸಲು ಸರ್ಕಾರದ ಆದೇಶವಿದೆ. ಆದರೆ, ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಪಿಒಪಿ ಮೂರ್ತಿಗಳು ನಗರದ ಪ್ರಮುಖ ರಸ್ತೆಗಳಲ್ಲೂ ವಿಜೃಂಭಿಸುತ್ತಿವೆ.

ಇದರ ನಡುವೆ ಸ್ವದೇಶಿ ಚಿಂತನೆ ಮತ್ತು ಪರಿಸರ ಕಾಳಜಿಯುಳ್ಳ ‘ಸ್ವಗ್ರಾಮ’ ಎನ್ನುವ ಸಮಾನ ಮನಸ್ಕರ ಯುವಕರ ತಂಡ ಮಣ್ಣಿನ ಗಣೇಶನ ಮೂರ್ತಿಗಳ ಪ್ರತಿಷ್ಠಾಪನೆ ಬಗ್ಗೆ ಜನರಲ್ಲಿ ಅರಿವು ಮತ್ತು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ.

ಪ್ರಭು ಪಾಟೀಲ, ಸಂಗಮೇಶ ಮಡಿವಾಳ, ಸುನೀಲ ಕಣ್ಣಿ, ಕೃಷ್ಣ ಕೆಂಭಾವಿ, ಮಹೇಶ ಚವ್ಹಾಣ, ಅನಿಲ ತಂಬಾಕೆ ಹೀಗೆ ಅನೇಕ ಯುವಕರು ನಗರದಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ಮಾರಾಟ ಮಾಡುತ್ತಿದ್ದಾರೆ.

280ರಿಂದ 30 ಸಾವಿರಕ್ಕೆ ಏರಿದ ಮಾರಾಟ: ಕಳೆದ ನಾಲ್ಕು ವರ್ಷದಿಂದ ‘ಸ್ವಗ್ರಾಮ’ ತಂಡದ ಯುವಕರು ಮಣ್ಣಿನ ಗಣಪನನ್ನು ಪಸರಿಸುವಲ್ಲಿ ನಿರತರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದಿಂದ ಶುದ್ಧ ಮಣ್ಣಿನ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಮೊದಲ ವರ್ಷ ಕೇವಲ 280 ಗಣೇಶ ಮೂರ್ತಿಗಳು ಮಾರಾಟವಾಗಿದ್ದವು. ಎರಡನೇ ವರ್ಷ ಮೂರು ಸಾವಿರ ಹಾಗೂ ಮೂರನೇ ವರ್ಷದಲ್ಲಿ ಹತ್ತು ಸಾವಿರ, ಪ್ರಸ್ತಕ ವರ್ಷ ಈಗಾಗಲೇ ಸುಮಾರು 30 ಸಾವಿರ ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ.

ಈ ಬಾರಿ ‘ಮನೆ ಮನೆಗೂ ಮಣ್ಣಿನ ಗಣಪ’ ಎನ್ನುವ ಅಭಿಯಾನ ಹಮ್ಮಿಕೊಂಡಿದ್ದೇವೆ. ಜತೆಗೆ ನಮ್ಮೊಂದಿಗೆ ಧರಣಿ ಸ್ವದೇಶಿ ಕೇಂದ್ರ, ಸ್ವಾಭಿಮಾನಿ ಸ್ವದೇಶಿ ಕೇಂದ್ರ, ಗಂಗಾಧರ ವಿಶ್ವಕರ್ಮ ಅವರ ಸಂತೋಷ ಟ್ರೆಡರ್ ನವರು ಕೈ ಜೋಡಿಸುತ್ತಿದ್ದಾರೆ. ಪ್ರಸ್ತಕ ವರ್ಷ ಜಿಲ್ಲಾದ್ಯಂತ 60 ಕಡೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ತಂಡದ ಪ್ರಮುಖ ಪ್ರಭು ಪಾಟೀಲ.

ಕಲಬುರಗಿ ನಗರದಲ್ಲೇ 22 ಸಾವಿರ ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ. ಸೇಡಂ-1,000, ಚಿತ್ತಾಪುರ-700, ಆಳಂದ, ಅಫಜಲಪುರ, ಜೇವರ್ಗಿಯಲ್ಲಿ ಸುಮಾರು 500 ಮಣ್ಣಿನ ಮೂರ್ತಿಗಳು ಮಾರಾಟವಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ನಮ್ಮಲ್ಲಿ ದೊರಕುತ್ತವೆ ಎನ್ನುತ್ತಾರೆ ಸಂಗಮೇಶ ಮಡಿವಾಳ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಆದಿವುಡುಪಿ- ಮಲ್ಪೆ ಮುಖ್ಯರಸ್ತೆಯ ಕಲ್ಮಾಡಿಯಿಂದ ಮಲ್ಪೆ ಬಸ್ಸು ನಿಲ್ದಾಣದ ವರೆಗೆ ಸುಮಾರು ಒಂದೂವರೆ ಕಿ. ಮೀ. ಅಂತರದ ಕಾಂಕ್ರೀಟ್‌...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

  • ನೀರಿನ ಕೊರತೆ, ವಿದ್ಯುತ್‌ ಸಮಸ್ಯೆಯನ್ನು ಮೀರಿ ಬಿಸಿಲ ನಾಡಿನ ರೈತ ಕಲ್ಲಪ್ಪನವರು ಕಡಿಮೆ ಖರ್ಚಿನಲ್ಲಿ 2500 ಬಾಳೆ ಸಸಿಗಳನ್ನು ಬೆಳೆದಿದ್ದಾರೆ. ಒಂದು ಕಡೆ ಬರಗಾಲ,...

  • ಒಂದು ರಾಜ್ಯದ ಆಡಳಿತದ ಕೇಂದ್ರವಾದ ರಾಜಧಾನಿ ಕಟ್ಟುವಾಗ ನೀರಿಗೆ ಮೊದಲ ಗಮನ. ರಾಜಪರಿವಾರ, ಅಧಿಕಾರಿಗಳು, ಸೈನಿಕರು, ಕುದುರೆ ಕಾಲಾಳುಗಳಿಗೆ ನೀರಿನ ಸೌಲಭ್ಯ ಬೇಕು....

  • ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರ ಕೃಷಿಕಾರ್ಯಗಳಿಗೆ ಬೇಕಾಗುವ ಯಂತ್ರಗಳನ್ನು ರೂಪಿಸುವುದಕ್ಕೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆದ್ಯತೆ ನೀಡಿದೆ. ಈ ದೆಸೆಯಲ್ಲಿ...