ತೊಗರಿ ನಾಡಲ್ಲಿ ಹಾರಿದ ಲೋಹದ ಹಕ್ಕಿ

ಕಲಬುರಗಿ ನಿಲ್ದಾಣದಲ್ಲಿ ವಿಮಾನ ಇಳಿಯುತ್ತಿದ್ದಂತೆ ಜಲಫಿರಂಗಿಯಿಂದ ಅದ್ಧೂರಿ ಸ್ವಾಗತ

Team Udayavani, Nov 23, 2019, 11:03 AM IST

23-November-1

ಕಲಬುರಗಿ: ಬಿಸಿಲೂರಿನ ಸೂರ್ಯ ನೆತ್ತಿ ಮೇಲೆ ಬಂದು ನಿಂತು ಚುರು-ಚುರು ಸುಡಲು ಆರಂಭಿಸಿದ್ದ. ಸೂರ್ಯನ ಪ್ರತಾಪ ಲೆಕ್ಕಿಸದೆ ಸಾವಿರಾರು ಕಣ್ಣುಗಳು ಬಾನಿನತ್ತಲೇ ನೆಟ್ಟಿದ್ದವು. ಆಕಾಶದಲ್ಲಿ ಮಿಂಚಿನಂತೆ ಲೋಹದ ಹಕ್ಕಿ ಮೂಡುತ್ತಿದ್ದಂತೆ ಎಲ್ಲೆಲ್ಲೂ ಹರ್ಷೋದ್ಘಾರ…ಕಿವಿಗಡಚಿಕ್ಕುವ ಚಪ್ಪಾಳೆಯದ್ದೇ ಸದ್ದು… ನಾಲ್ಕು ದಶಕಗಳಿಂದ ಕಾತುರದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ಕ್ಷಣ ಕಣ್ಣು ತುಂಬಿಸಿಕೊಂಡ ಸಂಭ್ರಮ.

ತೊಗರಿ ಕಣಜ ನೆಲಕ್ಕೆ ಲೋಹದ ಹಕ್ಕಿ ಮುತ್ತಿಕ್ಕುತ್ತಿದ್ದಂತೆ ನೆಲ ಮೇಲೆ ನಿಂತಿದ್ದ ಜನರು ಕುಣಿದು ಕುಪ್ಪಳಿಸಿ ಗಾಳಿಯಲ್ಲಿ ತೇಲಾಡಿದರು. ಇದು ಇಲ್ಲಿಂದ 15 ಕಿ.ಮೀ. ದೂರದಲ್ಲಿರುವ ನೂತನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಲೋಹದ ಹಕ್ಕಿ ಇಳಿಯುತ್ತಿದ್ದ ಸಂದರ್ಭದಲ್ಲಿ ಕಂಡಂತಹ ದೃಶ್ಯ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಟಾರ್‌ ಏರ್‌ ಸಂಸ್ಥೆಯ ಒಜಿ-117 ಸಂಖ್ಯೆಯ ವಿಮಾನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವರು ಗಣ್ಯರು ಮತ್ತು ನಾಗರಿಕರನ್ನು ಹೊತ್ತು ತಂದಿತು.

ಬೆಂಗಳೂರಿನಿಂದ ಮಧ್ಯಾಹ್ನ ಸರಿಯಾಗಿ 12:24ಕ್ಕೆ ಹೊರಟ ವಿಮಾನ 1:40ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು. ಪ್ರಥಮ ವಾಣಿಜ್ಯ ಸಂಚಾರವಾಗಿ ವಿಮಾನ ಇಳಿಯುತ್ತಿದ್ದಂತೆ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ಪ್ರಯಾಣಿಕರಿಗೆ ವಾಟರ್‌ ಸಲ್ಯೂಟ್‌ ನೀಡಿದ್ದು ವಿಶೇಷವಾಗಿತ್ತು.

ನೂತನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ, ಜನಪ್ರತಿನಿಧಿಗಳು ಹಾಗೂ ನಾಗರಿಕರಲ್ಲಿ ಹರ್ಷದ ಹೊನಲು ಹರಿಯಿತು. ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬಸವರಾಜ ಬೊಮ್ಮಾಯಿ, ಪ್ರಭು ಚವ್ಹಾಣ, ಸಂಸದರಾದ ಡಾ| ಉಮೇಶ ಜಾಧವ, ಭಗವಂತ ಖೂಬಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ. ಮುರಳಿಧರರಾವ್‌, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ ಹಾಗೂ ನಗರದ ಉದ್ಯಮಿಗಳು, ಗಣ್ಯರ ಸಮೇತ ಸಾಮಾನ್ಯ ನಾಗರಿಕರು ವಿಮಾನದಲ್ಲಿ ಬಂದರು.

ವಿಮಾನ ಭೂಸ್ಪರ್ಶ ಮಾಡುವುದನ್ನು ನೋಡಲು ನಿಲ್ದಾಣದ ಆವರಣದಲ್ಲಿ ನೆರದಿದ್ದ ಜನರು ಶಿಳ್ಳೆ, ಕೇಕೆ, ಜಯ ಘೋಷಣೆಗಳ ಕರತಾಡನ ಮೊಳಗಿಸಿ ಸಡಗರಪಟ್ಟರು. ವಿಮಾನದಿಂದ ಬಂದಿಳಿದ ನಂತರ ಮುಖ್ಯಮಂತ್ರಿಗಳು ಸಂಭ್ರಮದ ಅಂಗವಾಗಿ ಸ್ಟಾರ್‌ ಏರ್‌ ಸಂಸ್ಥೆಯ ಕೇಕ್‌ ಕತ್ತರಿಸಿದರು.

ನಂತರದಲ್ಲಿ ಕಾರ್ಯಕ್ರಮ ವೇದಿಕೆ ಮೇಲೆ ಗುಂಡಿ ಒತ್ತುವ ಮೂಲಕ ವಿಮಾನ ನಿಲ್ದಾಣವನ್ನು ಅಧಿಕೃತವಾಗಿ ಉದ್ಘಾಟಿಸಿದರು. ತದನಂತರ ಅದೇ ಸ್ಟಾರ್‌ ಏರ್‌ ಸಂಸ್ಥೆಯ ಒಜಿ-118 ವಿಮಾನದ ಮೂಲಕವೇ ಬೆಂಗಳೂರಿಗೆ ಜನ ಸಾಮಾನ್ಯರೊಂದಿಗೆ ಮರಳಿ ಪ್ರಯಾಣ ಬೆಳೆಸಿದರು.

ಟಾಪ್ ನ್ಯೂಸ್

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rain

ಹೆಸ್ಕಾತ್ತೂರು: ಭೀಕರ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ

ajri

ಆಜ್ರಿ: ಮಲ್ಲಿಗೆ ಕೃಷಿಯಲ್ಲಿ ಖುಷಿ ಕಂಡ ಕನಕಕ್ಕ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

hulu

ಉಪ್ಪಿನಂಗಡಿ: ಚರಂಡಿ ಹೂಳೆತ್ತುವಿಕೆ ಆರಂಭ

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

rain

ಹೆಸ್ಕಾತ್ತೂರು: ಭೀಕರ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ

ajri

ಆಜ್ರಿ: ಮಲ್ಲಿಗೆ ಕೃಷಿಯಲ್ಲಿ ಖುಷಿ ಕಂಡ ಕನಕಕ್ಕ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

hulu

ಉಪ್ಪಿನಂಗಡಿ: ಚರಂಡಿ ಹೂಳೆತ್ತುವಿಕೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.