ಸಿಎಂ ಗ್ರಾಮ ವಾಸ್ತವ್ಯ ಯಶಸ್ವಿಗೊಳಿಸಿ

ಜನತಾದರ್ಶನದಿಂದ ಸಮಸ್ಯೆಗೆ ಪರಿಹಾರ•ನೆರಳಿಗಾಗಿ ಅರ್ಜಿದಾರರಿಗೆ ಶಾಮಿಯಾನ

Team Udayavani, Jun 20, 2019, 11:00 AM IST

ಕಲಬುರಗಿ: ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಲಾಖಾವಾರು ಅಧಿಕಾರಿಗಳ ಸಭೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೂ. 22ರಂದು ತಾಲೂಕಿನ ಹೇರೂರ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಿದ್ದ ಇಲಾಖಾವಾರು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನತಾ ದರ್ಶನ ಕಾರ್ಯಕ್ರಮ ಮುಖ್ಯಮಂತ್ರಿಗಳಿಗೆ ಪ್ರೀಯವಾದದ್ದಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮಹತ್ವದ ಕಾರ್ಯಕ್ರಮವಾಗಿದೆ. ಸುಮಾರು ಎಂಟØತ್ತು ಸಾವಿರ ಜನರು ಸೇರುವ ನಿರೀಕ್ಷೆ ಇದ್ದು, ಸುವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಮಳೆ ಬಂದರೂ, ಯಾವುದೇ ತೊಂದರೆಯಾಗದಂತೆ ಜನತಾ ದರ್ಶನ ನಡೆಯುವ ಕಾರ್ಯಕ್ರಮ ಸ್ಥಳವನ್ನು ವಾಟರ್‌ ಪ್ರೂಪ್‌ ವ್ಯವಸ್ಥೆಯಿಂದ ನಿರ್ಮಿಸಲಾಗಿದೆ. ಅರ್ಜಿದಾರರು ಬಿಸಿಲಿನಿಂದ ಪರಿತಪಿಸದಂತೆ ಪಕ್ಕದಲ್ಲೇ ಶಾಮಿಯಾನ ಹಾಕಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರ ವಾಹನಗಳು ಹಾಗೂ ಗಣ್ಯರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ನಿಗದಿತ ಸ್ಥಳಗಳಲ್ಲ್ಲಿ ಸಾರ್ವಜನಿಕರು ತಮ್ಮ ವಾಹನಗಳ ನಿಲುಗಡೆ ಮಾಡಬೇಕು. ಯಾವುದೇ ಗೊಂದಲವಾಗದಂತೆ ಗಣ್ಯರು, ಅಧಿಕಾರಿಗಳು, ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಭೋಜನಾ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೇ, ಸಾರ್ವಜನಿಕರಿಗಾಗಿ 50 ಕಡೆ ಊಟದ ಸ್ಟಾಲ್ ವ್ಯವಸ್ಥೆ ಮಾಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇಂಜಿನಿಯರ್‌ಗೆ ಸೂಚಿಸಿದರು.

ಅಂಗವಿಕಲರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದ್ದು, ಮುಖ್ಯಮಂತ್ರಿಗಳ ಭೇಟಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. 20ಕ್ಕೂ ಹೆಚ್ಚು ವ್ಹೀಲ್ ಚೇರ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇಲಾಖಾವಾರು ಸುಮಾರು 40 ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗುತ್ತಿದ್ದು, ಇವುಗಳ ಮೂಲಕ ಸಾರ್ವಜನಿಕರಿಗೆ ಆಯಾ ಇಲಾಖೆಗಳಲ್ಲಿ ಇರುವ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಅರ್ಜಿ ಸಲ್ಲಿಕೆ ವಿಧಾನ ಮುಂತಾದವುಗಳ ಬಗ್ಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.

ಜನತಾ ದರ್ಶನಕ್ಕೆ ಬರುವ ಸಾರ್ವಜನಿಕರಿಗಾಗಿ ಹೆಲ್ಪ್ ಡೆಸ್ಕ್, ಅರ್ಜಿ ಸ್ವೀಕೃತಿ ಕೌಂಟರ್‌ ಹಾಗೂ ರಿಜಿಸ್ಟ್ರೇಷನ್‌ ಕೌಂಟರ್‌ ತೆರೆಯಲಾಗಿದೆ. ರಿಜಿಸ್ಟ್ರೇಷನ್‌ ಕೌಂಟರ್‌ನಲ್ಲಿ ನೀಡುವ ಟೋಕನ್‌ ನಂಬರ್‌(ರೆಫೆರೆನ್ಸ್‌ ಸಂಖ್ಯೆ) ಇದ್ದಲ್ಲಿ ಮಾತ್ರ ಸಿಎಂ ಜನತಾ ದರ್ಶನಕ್ಕೆ ಅವಕಾಶವಿರುತ್ತದೆ. ರೆಫೆರೆನ್ಸ್‌ ಸಂಖ್ಯೆಯಿಂದ ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿ-ಗತಿ ತಿಳಿಯಬಹುದಾಗಿದೆ ಎಂದರು.

ಆಯಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಮಾಹಿತಿ ಇಟ್ಟುಕೊಂಡಿರಬೇಕು. ಜನತಾ ದರ್ಶನ ಸಂದರ್ಭದಲ್ಲಿ ತಮ್ಮ ಇಲಾಖೆಗಳ ಬಗ್ಗೆ ಅರ್ಜಿದಾರರು ಸಮಸ್ಯೆಗಳ ಬಗ್ಗೆ ಅರ್ಜಿ ನೀಡುವಾಗ ಸಂಬಂಧಪಟ್ಟ ಅಧಿಕಾರಿಗಳು ವೇದಿಕೆ ಮೇಲೆ ಬಂದು ಸಮಸ್ಯೆಗಳ ಕುರಿತು ವಿವರಣೆ ನೀಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಅಪರ ಜಿಲ್ಲಾಧಿಕಾರಿ ಬಿ. ಶರಣಪ್ಪ, ಸಹಾಯಕ ಆಯುಕ್ತ ರಾಹುಲ್ ಪಾಂಡ್ವೆ ಹಾಗೂ ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಜನತಾ ದರ್ಶನಕ್ಕೂ ಮುನ್ನ ಸುಮಾರು ಅರ್ಧ ಗಂಟೆ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಚೆಕ್‌, ವಾಹನಗಳ ಕೀಲಿ ಕೈ ಮುಂತಾದವುಗಳ ಮುಂತಾದ ಹಲವು ಸವಲತ್ತುಗಳನ್ನು ವಿತರಿಸಲಾಗುತ್ತಿದೆ. ಈ ಸಂಬಂಧ ಫಲಾನುಭವಿಗಳನ್ನು ಆಯಾ ಇಲಾಖೆಗಳು ಕರೆತರಬೇಕು. ಜಿಲ್ಲಾ ಪಂಚಾಯತಿಯಿಂದ 264 ಫಲಾನುಭವಿಗಳಿಗೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಹೊಲಿಗೆ ಯಂತ್ರ, ಅಂಗವಿಕಲರಿಗೆ ಝೆರಾಕ್ಸ್‌ ಮಷಿನ್‌ ವಿತರಣೆ, ಕೃಷಿ ಇಲಾಖೆಯಿಂದ 100 ಜನಕ್ಕೆ ಕೃಷಿ ಭಾಗ್ಯ, 25 ಜನಕ್ಕೆ ಡಿಜಿಟಲ್ ಇಂಜಿನ್‌, ಕೃಷಿ ಯಂತ್ರ ಟ್ರ್ಯಾಕ್ಟರ್‌, ಕೃಷಿ ಸಲಕರಣೆ ಮುಂತಾದವುಗಳನ್ನು ಮುಖ್ಯಮಂತ್ರಿಗಳು ವಿತರಿಸುವರು.
ಆರ್‌. ವೆಂಕಟೇಶಕುಮಾರ,
  ಜಿಲ್ಲಾಧಿಕಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಹೊರಡಿಸಿದ ಸುತ್ತೋಲೆಯ ಕೈಪಿಡಿಯಲ್ಲಿ ಸಂವಿಧಾನವನ್ನು ಅಂಬೇಡ್ಕರ್‌ ಅವರೊಬ್ಬರೇ ರಚಿಸಿಲ್ಲ ಎಂದು ನಮೂದಿಸಿ...

  • „ಶಶಿಕಾಂತ ಬಂಬುಳಗೆ ಬೀದರ: ಗಡಿ ನಾಡು ಬೀದರ ಚಾರಿತ್ರಿಕ ಕೋಟೆ ಕೊತ್ತಲುಗಳು, ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಐತಿಹಾಸಿಕ ಪ್ರವಾಸಿ ನಗರ. ಇಲ್ಲಿನ ವೈಭವ ಕಣ್ತುಂಬಿಕೊಳ್ಳಲು...

  • „ರಂಗಪ್ಪ ಗಧಾರ ಕಲಬುರಗಿ: ಜಿಲ್ಲಾದ್ಯಂತ ಕಳೆದ ಮೂರು ತಿಂಗಳಿಂದ ಸಾಂಕ್ರಾಮಿಕ ರೋಗಗಳ ಆರ್ಭಟ ಹೆಚ್ಚಾಗಿದೆ. ಮಕ್ಕಳಿಂದ ಹಿಡಿದು ಯುವಕರು, ವಯೋವೃದ್ಧರು ಮಹಾಮಾರಿ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುತ್ತಿದೆ. ವಿಮಾನಯಾನದ ಕನಸು ಇನ್ನೊಂದು ವಾರದೊಳಗೆ ಸಾಕಾರಗೊಳ್ಳುತ್ತಿದೆ. ಕೊಲ್ಲಾಪುರದ ಪ್ರಖ್ಯಾತ...

  • ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣ ನ.22 ರಂದು ಲೋಕಾರ್ಪಣೆ ಆಗಲಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ತಿಳಿಸಿದ್ದಾರೆ. ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆಯಲ್ಲಿ...

ಹೊಸ ಸೇರ್ಪಡೆ