327 ಪ್ರಕರಣ ಇತ್ಯರ್ಥ-6.41 ಕೋಟಿ ಪರಿಹಾರ

Team Udayavani, Jul 14, 2019, 2:39 PM IST

ಕಲಬುರಗಿ: ರಾಷ್ಟ್ರೀಯ ಮೆಗಾ ಲೋಕ ಅದಾಲತ್‌ ಅಂಗವಾಗಿ ನ್ಯಾಯಮೂರ್ತಿ ಕೆ.ಎನ್‌. ಫ‌ಣೀಂದ್ರ, ನ್ಯಾ| ಅಶೋಕ ಜಿ. ನಿಜಗಣ್ಣನವರ್‌, ನ್ಯಾ| ಶಾಮಪ್ರಸಾದರ ಏಕಸದಸ್ಯ ಪೀಠವು 327 ಪ್ರಕರಣಗಳನ್ನು ಇತ್ಯರ್ಥಪಡಿಸಿತು.

ಕಲಬುರಗಿ: ರಾಷ್ಟ್ರೀಯ ಮೆಗಾ ಲೋಕಅದಾಲತ್‌ ಅಂಗವಾಗಿ ನಗರದ ಹೈಕೋರ್ಟ್‌ ಪೀಠದಲ್ಲಿ ವಿಮಾ ಪ್ರಕರಣ, ರಸ್ತೆ ಅಪಘಾತ, ಕೌಟುಂಬಿಕ, ಸಿವಿಲ್ ಸೇರಿದಂತೆ ಇನ್ನಿತರ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಲಯವು ರಾಜಿ ಸಂಧಾನದ ಮೂಲಕ 327 ಪ್ರಕರಣ ಇತ್ಯರ್ಥಪಡಿಸಿ 6.41 ಕೋಟಿ ರೂ. ಪರಿಹಾರ ಮೊತ್ತ ಪಾವತಿಸುವಂತೆ ಆದೇಶ ನೀಡಿದೆ.

ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ, ನ್ಯಾಯಮೂರ್ತಿ ಅಶೋಕ ಜಿ. ನಿಜಗಣ್ಣನವರ್‌ ಹಾಗೂ ನ್ಯಾಯಮೂರ್ತಿ ಶ್ಯಾಮ್‌ ಪ್ರಸಾದ್‌ ಅವರುಗಳ ಏಕ ಸದಸ್ಯ ಪೀಠವು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿತು.

ರಾಷ್ಟ್ರೀಯ ಲೋಕ ಅದಾಲತ್‌ ನಿಮಿತ್ಯ ಕಳೆದ ಜು. 1 ರಿಂದ ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು ಶನಿವಾರ ಅಂತಿಮ ಆದೇಶ ಪ್ರಕಟಿಸಿದರು. ಲೋಕ ಅದಾಲತ್‌ನಲ್ಲಿ ದಾಖಲಾದ ಒಟ್ಟಾರೆ 452 ಪ್ರಕರಣಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು 327 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಇದರಲ್ಲಿ ವಾಹನ ಅಫಘಾತದ 321 ಪ್ರಕರಣಗಳಲ್ಲಿ 6,41,51,610 ರೂ. ಪರಿಹಾರ ಮೊತ್ತ ಪಾವತಿಸುವಂತೆ ಸಂಬಂಧಿಸಿದ ವಿಮಾ ಸಂಸ್ಥೆಗಳಿಗೆ ಆದೇಶ ಮಾಡಿದೆ.

ಮೂರು ಸಿವಿಲ್ ಪ್ರಕರಣಗಳು, ಒಂದು ರಿಟ್ ಪಿಟಿಷನ್‌ ಸೇರಿದಂತೆ ಎರಡು ವಿಚ್ಚೇದನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿ ಸತಿ-ಪತಿಗಳನ್ನು ನ್ಯಾಯಲಯವು ಒಂದು ಮಾಡಿದೆ.

ದಾಖಲೆ ಪ್ರಮಾಣದಲ್ಲಿ ಪ್ರಕರಣಗಳ ಇತ್ಯರ್ಥ: ಅದಾಲತ್‌ನಲ್ಲಿ ದಾಖಲಾದ ಪ್ರಕರಣಗಳ ಕುರಿತು ತೀರ್ಪು ನೀಡುವ ಮುನ್ನ ವಕೀಲರು ಮತ್ತು ಕಕ್ಷಿದಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಲೋಕ ಅದಾಲತ್‌ ಅಂಗವಾಗಿ ಕಲಬುರಗಿ ಪೀಠದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಎರಡು ಪಟ್ಟು ಹೆಚ್ಚಿನ ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಗೊಳಿಸಲಾಗಿದೆ ಎಂದರು.

ರಾಜಿ ಸಂಧಾನ ಮೂಲಕ ಶೀಘ್ರವಾಗಿ ನ್ಯಾಯ ಒದಗಿಸುವುದೇ ಮೆಗಾ ಅದಾಲತ್‌ ಮುಖ್ಯ ಉದ್ದೇಶವಾಗಿದೆ. ತಾವು ಕಳೆದ ಆರೂವರೆ ವರ್ಷದಿಂದ ಈ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ರಾಜಿ ಸಂಧಾನದ ಇತ್ಯರ್ಥಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳು, ಮೆಗಾ ಅದಾಲತ್‌ಗೆ ಸಹಕಾರ ನೀಡಿದ ನ್ಯಾಯವಾದಿಗಳಿಗೆ ಮತ್ತು ಕಕ್ಷಿದಾರರಿಗೆ ಅಭಾರಿಯಾಗಿದ್ದೇನೆ ಎಂದರು.

ಉಚ್ಛ ನ್ಯಾಯಾಲಯದ ಹೆಚ್ಚುವರಿ ರಿಜಿಸ್ಟ್ರಾರ್‌ ಜನರಲ್ ಕೆ.ವಿ.ಅಸೋಡೆ, ನ್ಯಾಯಿಕ ರಿಜಿಸ್ಟ್ರಾರ್‌ ಶ್ರೀನಿವಾಸ ಸುವರ್ಣಾ, ಕಲಬುರಗಿ ಹೈಕೋರ್ಟ್‌ ಪೀಠದ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಗೋಮತಿ ರಾಘವೇಂದ್ರ, ಹೈಕೋರ್ಟ್‌ ಘಟಕದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣ ಕುಮಾರ ಕಿಣ್ಣಿ, ಉಪಾಧ್ಯಕ್ಷ ಸುಧೀರಸಿಂಗ್‌ ವಿಜಯಪುರ, ಕಾರ್ಯದರ್ಶಿ ಬಿ.ಸಿ. ಜಾಕಾ ಹಾಗೂ ನೂರಾರು ಸಂಖ್ಯೆಯಲ್ಲಿ ನ್ಯಾಯವಾದಿಗಳು, ಕಕ್ಷಿದಾರರು, ನ್ಯೂ ಇಂಡಿಯಾ ಇನುÏರೆನ್ಸ್‌, ಓರಿಯಂಟಲ್ ಇನ್ಸೂರೆನ್ಸ್‌, ಯುನೈಟೆಡ್‌ ಇಂಡಿಯಾ ಇನುÏರೆನ್ಸ್‌, ಎನ್‌.ಇ.ಕೆ.ಆರ್‌.ಟಿ.ಸಿ. ಅಧಿಕಾರಿಗಳು, ಹೈಕೋರ್ಟ್‌ ಸಿಬ್ಬಂದಿ ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳು ಸೇರಿದಂತೆ ಇದೂವರೆ 374 ಪುಸ್ತಕ ಮತ್ತು 198 ವಾಣಿಜ್ಯ ಸೇರಿದಂತೆ ಒಟ್ಟು...

  • ಶಹಾಬಾದ: ಪೌರತ್ವ ಕಾಯ್ದೆ ಮೂಲಕ ದೇಶದ ಅಲ್ಪಸಂಖ್ಯಾತ ಸಮುದಾಯದವರನ್ನು ದೇಶದಿಂದ ಹೊರಹಾಕಲಾಗುತ್ತಿದೆ ಎಂದು ಕಾಂಗ್ರೆಸ್‌ ಸುಳ್ಳು ಸುದ್ದಿ ಹಬ್ಬಿಸುತ್ತಿದೆ...

  • ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆ. 5, 6 ಮತ್ತು 7ರಂದು ನಡೆಯುತ್ತಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ನಗರವನ್ನು ಸಿಂಗರಿಸಲಾಗುತ್ತಿದೆ...

  • ಶಹಾಬಾದ: ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ಪರಕೀಯರ ವಿರುದ್ಧ ತೊಡೆ ತಟ್ಟಿ ನಿಂತು ಭಾರತ ಮಾತೆಯನ್ನು ದಾಸ್ಯದಿಂದ ಪಾರು ಮಾಡುವ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡದ ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ...

ಹೊಸ ಸೇರ್ಪಡೆ