- Wednesday 11 Dec 2019
ಪುತ್ರನನ್ನು ಗೆಲ್ಲಿಸುವಲ್ಲಿ ಖರ್ಗೆ-ಧರ್ಮಸಿಂಗ್ ಹಿಂದಿಕ್ಕಿದ ಜಾಧವ್
•ಉಪಚುನಾವಣೆಯಲ್ಲಿ ಸೋತಿದ್ದರು ಪ್ರಿಯಾಂಕ್ ಖರ್ಗೆ, ಡಾ| ಅಜಯಸಿಂಗ್•ಚಿಂಚೋಳಿಯಲ್ಲಿ ಡಾ| ಅವಿನಾಶ ಗೆದ್ದು ಇತಿಹಾಸ ನಿರ್ಮಾಣ
Team Udayavani, May 24, 2019, 9:39 AM IST
ಕಲಬುರಗಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ತಮ್ಮ ಪುತ್ರನನ್ನು ಪ್ರಥಮ ಸಲ ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದರು.
ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅದನ್ನು ಮಗನಿಗೆ ಬಿಟ್ಟುಕೊಟ್ಟಿದ್ದಲ್ಲದೇ ಮಗನನ್ನು ಗೆಲ್ಲಿಸುವುದರ ಮುಖಾಂತರ ಡಾ| ಉಮೇಶ ಜಾಧವ್ ಒಂದು ಕೈ ಮೇಲುಗೈ ಸಾಧಿಸಿದ್ದಾರೆ.
2008ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಮುಂದೆ 2009ರಲ್ಲಿ ಲೋಕಸಭಾ ಚುನಾವಣೆಗೆ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಚುನಾಯಿತರಾದರು. ತದನಂತರ ಚಿತ್ತಾಪುರ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತದನಂತರ ನಡೆದ ಚಿತ್ತಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆಗ ಬಿಜೆಪಿಯ ವಾಲ್ಮೀಕಿ ನಾಯಕ ಎದುರು ಪ್ರಿಯಾಂಕ್ ಖರ್ಗೆ ಸೋಲು ಅನುಭವಿಸಿದರು.
ಅದೇ ರೀತಿ 2010ರಲ್ಲಿ ನಡೆದ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಡಾ| ಅಜಯಸಿಂಗ್ ಸ್ಪರ್ಧಿಸಿ ಜೆಡಿಎಸ್‌ನ ಅರುಣಾ ಪಾಟೀಲ್ ರೇವೂರ ಎದುರು ಪರಾಭವಗೊಂಡರು. ಹೀಗೆ ಪ್ರಿಯಾಂಕ್ ಖರ್ಗೆ ಹಾಗೂ ಡಾ| ಅಜಯಸಿಂಗ್ ವಿಧಾನಸಭೆ ಪ್ರವೇಶಾತಿಯ ಅದರಲ್ಲೂ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಮುಂದೆ 2013ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಏಕಕಾಲಕ್ಕೆ ಇಬ್ಬರೂ ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದರು.
ಈಗ ಚಿಂಚೋಳಿ ಉಪಚುನಾವಣೆಯಲ್ಲಿ ಡಾ| ಅವಿನಾಶ ಜಾಧವ್ ಗೆಲ್ಲುವ ಮುಖಾಂತರ‰ ಡಾ| ಅಜಯಸಿಂಗ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಹಿಂದಿಕ್ಕಿದಂತಾಗಿದೆ. ಮೊದಲ ಸಲ ಸ್ಪರ್ಧಿಸಿದ್ದ ಉಪಚುನಾವಣೆಯಲ್ಲೇ ಅಮೋಘ ಗೆಲುವು ಸಾಧಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಡಾ| ಉಮೇಶ ಜಾಧವ್ ತಾವು ಗೆದ್ದ ಚಿಂಚೋಳಿ ಕ್ಷೇತ್ರದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವಾದ ಚಿಂಚೋಳಿ ಕ್ಷೇತ್ರಕ್ಕೆ ತಮ್ಮ ಮಗನಾದ ಡಾ| ಅವಿನಾಶ ಜಾಧವ್‌ಗೆ ಸ್ಪರ್ಧಿಸಲು ಅವಕಾಶ ಕೊಟ್ಟು ಅಗ್ನಿ ಪರೀಕ್ಷೆಗೆ ಮುಂದಾಗಿದ್ದರು. ಈಗ ಅಗ್ನಿ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಮಕ್ಕಳ ರಾಜಕೀಯದಲ್ಲಿ ಖರ್ಗೆ-ಧರ್ಮಸಿಂಗ್ ಅವರಿಗಿಂತ ಡಾ| ಉಮೇಶ ಜಾಧವ್ ಒಂದು ಮೇಲುಕೈ ಸಾಧಿಸಿದಂತಾಗಿದೆ.ಮಹಾನ್ ನಾಯಕರ ಪುತ್ರರೇ ಪ್ರಥಮ ಯತ್ನದ ವಿಧಾನಸಭಾ ಉಪಚುನಾವಣೆಯಲ್ಲಿಯೇ ಸೋತಿರುವಾಗ ಇನ್ನೂ ಡಾ| ಉಮೇಶ ಜಾಧವ್ ಪುತ್ರ ಗೆದ್ದಿರುವುದು ಒಂದು ದಾಖಲೆಯೇ ಸರಿ. ಒಟ್ಟಾರೆ ಚಿಂಚೋಳಿ ಉಪಚುನಾವಣೆ ಹಲವು ದೃಷ್ಟಿಗಳಿಂದ ಮಹತ್ವ ಪಡೆದುಕೊಂಡಿತು.
ಬಿಜೆಪಿ ಸರ್ಕಾರ ರಚನೆಗೆ ನಾಂದಿಯಾಗುವುದೇ?
ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುತ್ತದೆ ಎಂಬುದಾಗಿ ಇತಿಹಾಸ ನಿರೂಪಿಸುತ್ತದೆ. ಈಗ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ನಾಂದಿಯಾಗುವುದೇ? ಎಂಬುದರ ಕುರಿತು ಸ್ವಾರಸ್ಯಕರ ಚರ್ಚೆ ನಡೆದಿದೆ. ಕ್ಷೇತ್ರದ ಮಾಜಿ ಶಾಸಕ, ಕಲಬುರಗಿ ನೂತನ ಸಂಸದ ಡಾ| ಉಮೇಶ ಜಾಧವ್, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲೆಂದೇ ಚಿಂಚೋಳಿ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ ಎಂದಿದ್ದಾರಲ್ಲದೇ ಎಂಟು ದಿನದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್.ಯಡಿಯೂಪ್ಪ ಮುಖ್ಯಮಂತ್ರಿಯಾಗುತ್ತಾರೆ ಎಂದು ಗುರುವಾರ ಸಂಸದರಾಗಿ ಗೆದ್ದ ನಂತರ ಹೇಳಿದ್ದಾರೆ. ಒಟ್ಟಾರೆ ಮುಂದಿನ ರಾಜಕೀಯ ಬೆಳವಣಿಗೆಗಳು ಚಿಂಚೋಳಿ ಕ್ಷೇತ್ರದ ಇತಿಹಾಸ ಸಾಬೀತುಪಡಿಸುತ್ತದೆಯೋ ಇಲ್ಲವೇ ಸುಳ್ಳು ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ.
ರಾಜಕೀಯವಾಗಿ ಚರ್ಚೆ
2009ರಲ್ಲಿ ತಾವು ಪ್ರತಿನಿಧಿಸುತ್ತಿದ್ದ ಚಿತ್ತಾಪುರ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ತಂದು ಉಪಚುನಾವಣೆಗೆ ನಿಲ್ಲಿಸಿದ್ದರೆ 2010ರಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡು ಮುಂದೆ ಬೀದರ ಕ್ಷೇತ್ರದಿಂದ ಸಂಸದರಾಗಿದ್ದ ವೇಳೆಯಲ್ಲಿ ಪುತ್ರ ಡಾ| ಅಜಯಸಿಂಗ್‌ರನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಇಬ್ಬರೂ ಪರಾಭವಗೊಂಡರು. ಹಿರಿಯ ನಾಯಕರು ತಮ್ಮ ಮಕ್ಕಳಿಗೆ ವಿಧಾನಸಭೆ ಪ್ರವೇಶದ ಪ್ರಥಮ ಯತ್ನದ ಚುನಾವಣೆಯಲ್ಲಿಯೇ ಸೋಲು ಎದುರು ನೋಡುವಂತಾಯಿತು. ಆದರೆ ಚಿಂಚೋಳಿಯಲ್ಲಿ ಡಾ| ಉಮೇಶ ಜಾಧವ್ ತಮ್ಮ ಉತ್ತರಾಧಿಕಾರಿಯಾಗಿ ಪುತ್ರ ಡಾ| ಅವಿನಾಶಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಗೆಲ್ಲಿಸಿರುವುದು ರಾಜಕೀಯದಲ್ಲಿ ಬಹಳ ಅರ್ಥಪೂರ್ಣವಾಗಿ ವಿವರಿಸಲಾಗುತ್ತಿದೆ.
ಹಣಮಂತರಾವ ಭೈರಾಮಡಗಿ
ಈ ವಿಭಾಗದಿಂದ ಇನ್ನಷ್ಟು
-
ಧಾರವಾಡ: ಮೂರು ವರ್ಷಗಳ ಹಿಂದೆ ತೀವ್ರ ಸ್ವರೂಪ ಪಡೆದುಕೊಂಡು ಪೊಲೀಸರ ಕಠಿನ ಕ್ರಮದಿಂದ ಕ್ಷೀಣಿಸಿದ್ದ ಹೆಣ್ಣು ಮಕ್ಕಳ ಮಾರಾಟ ಜಾಲ ಉತ್ತರ ಕರ್ನಾಟಕದಲ್ಲಿ ಮತ್ತೆ...
-
ಉಡುಪಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಉಡುಪಿ, ಶಿಕ್ಷಣ ಕಾಶಿ ಖ್ಯಾತಿಯ ಮಣಿಪಾಲ ಮತ್ತು ಕರಾವಳಿ ಕರ್ನಾಟಕದ ಪ್ರಮುಖ ಬಂದರು ಹೊಂದಿರುವ ಮಲ್ಪೆಗಳನ್ನು "ಸ್ಮಾರ್ಟ್...
-
ಮಹಾನಗರ: ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರಿನಲ್ಲಿ ಆಯೋಜನೆಗೊಂಡು ನಿರೀಕ್ಷೆಗೂ ಮೀರಿ ಜನ ಸ್ಪಂದನೆ ಪಡೆದಿದ್ದ ನದಿ ಉತ್ಸವವನ್ನು ಈ ಬಾರಿಯೂ ನಡೆಸುವ ಉತ್ಸುಕತೆಗೆ...
-
ಉಡುಪಿ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ದಿನೇದಿನೇ ಹೆಚ್ಚಳವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಧಾರ್ಮಿಕ ಕ್ಷೇತ್ರಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ...
-
19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
ಹೊಸ ಸೇರ್ಪಡೆ
-
ಸದ್ಯ ನಟ ಗೋಲ್ಡನ್ ಸ್ಟಾರ್ ಗಣೇಶ್ "ಗಾಳಿಪಟ-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಗಣೇಶ್ ಅಭಿನಯಿಸಲಿರುವ ಮುಂಬರುವ ಚಿತ್ರದ ಕುರಿತಾದ...
-
ನಟ ಶ್ರೀಮುರುಳಿ ಅಭಿನಯದ "ಮದಗಜ' ಚಿತ್ರ ಆರಂಭದಿಂದಲೂ ನಾನಾ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದೆ. ಮುಖ್ಯವಾಗಿ ಚಿತ್ರದ ನಾಯಕಿಯರ ಕುರಿತಾಗಿ ಸುದ್ದಿಯಾಗಿದ್ದೇ...
-
ಇಲ್ಲಿಯವರೆಗೆ ತನ್ನ ಹಾಟ್ ಆ್ಯಂಡ್ ಬೋಲ್ಡ್ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ "ಗಂಡ ಹೆಂಡತಿ' ಖ್ಯಾತಿಯ ನಟಿ ಸಂಜನಾ ಗಲ್ರಾನಿ ಈಗ ರೆಟ್ರೋ ಲುಕ್ನಲ್ಲಿ,...
-
ಕನ್ನಡದಲ್ಲಿ "ಗಣಪ' ಹಾಗು "ಕರಿಯ 2' ಸಿನಿಮಾಗಳ ನಂತರ ಸಂತೋಷ್ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ...
-
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜಯನಗರದ ಹಳೆಯ ಮನೆಯ ಜಾಗದಲ್ಲಿ ಹೊಸ ಮನೆ ತಲೆ ಎತ್ತಲಿದೆ! ಹೌದು, ಡಾ.ವಿಷ್ಣುವರ್ಧನ್ ಕುಟುಂಬ ಅವರ ಹಳೆಯ ಮನೆಯ ಜಾಗದಲ್ಲೇ ಹೊಸ...