ಶರಣಬಸವ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ

ಏಕಕಾಲಕ್ಕೆ ಟಾಟಾ ಮೋಟರ್ಗೆ 54 ವಿದ್ಯಾರ್ಥಿಗಳ ಆಯ್ಕೆ

Team Udayavani, Apr 25, 2019, 10:24 AM IST

ಲಬುರಗಿ: ಟಾಟಾ ಮೋಟರ್ ಕಂಪನಿಗೆ ಆಯ್ಕೆಯಾದ ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅಭಿನಂದಿಸಿದರು.

ಕಲಬುರಗಿ: ನಗರದ ಪ್ರತಿಷ್ಠಿತ ಶರಣಬಸವ ವಿಶ್ವವಿದ್ಯಾಲಯದ 54 ವಿದ್ಯಾರ್ಥಿಗಳು ಏಕಕಾಲಕ್ಕೆ ಒಂದೇ ಕಂಪನಿಗೆ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.

ಇತ್ತೀಚೆಗೆ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್‌ ಆಯ್ಕೆಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಅನೇಕ ಇಂಜಿನಿಯರಿಂಗ್‌ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಟಾಟಾ ಮೋಟರ್ ಒಟ್ಟು 73 ಹುದ್ದೆಗಳಿಗೆ ಸಂದರ್ಶನ ನಡೆಸಿತ್ತು. ಅದರಲ್ಲಿ 54 ವಿದ್ಯಾರ್ಥಿಗಳು ಶರಣಬಸವ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಾಗಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯದ ನಿತೇಶ ರೆಡ್ಡಿ, ಮಹ್ಮದ್‌ ಅಲಿ, ಶೃತಿಕಾ ತುರೆ, ಶಿವಕುಮಾರ ಪಾಟೀಲ, ಆನಂದ ಮೈಲಾಪುರ, ಸುರೇಶ ಮಾಡಬೂಳಕರ್‌, ಸಿದ್ಧರಾಮೇಶ್ವರ ಕಲ್ಲಹಂಗರಗಾ, ಸಾಯಿರೆಡ್ಡಿ ಚಮಲೆ, ರೋಹನ ಬಾಲಚೇಡ್‌, ಸಂಗೀತಾ ಬಂಗಾರ, ಸಂತೋಷ ತುಳೇರ, ಸ್ವಾತಿ ಛತ್ರಸಾಲ, ಸುನೀಲ ಚವ್ಹಾಣ, ಆಕಾಶ ಮಿಶ್ರಾ, ಸೀಮಾ ಕಲ್ಕೇರಿ, ಗುರುರಾಜ ಕುಲಕರ್ಣಿ, ಯಶ ವಜ್ರಮಟ್ಟಿ, ಎಸ್‌. ಕುಮಾರ, ಜಯಶ್ರೀ ಕರೆಡ್ಡಿ, ಅಭಿಷೇಕ ಚಿಂಚೂರೆ, ಮಹ್ಮದ್‌ ಅಲ್ತಾಫ್‌ ಹುಸೇನ್‌, ಸತ್ಯಾನಂದ ಹಿರೇಮಠ, ಪರ್ವೇಜ್‌ ಅಹ್ಮದ್‌, ವರ್ಷಾ ತ್ರಿಮಾಳ, ಮಹ್ಮದ್‌ ಖಾನ್‌, ಚೆನ್ನವೀರ ಮಾಲಿಪಾಟೀಲ, ಮೋನಿಕಾ ಕಲ್ಯಾಣ, ಮಹೇಶ ಸಂಗೋಳಗಿ, ಶೃತಿ ಪೂಜಾರಿ, ಚೀರಂಜೀವಿ ಹೂಗಾರ, ವಿರೇಶ ಬಿರಾದಾರ, ಮಹ್ಮದ್‌ ಫಸೀಯುದ್ದೀನ್‌, ರವೀಂದ್ರ ಸಾವ್ಕಾರ್‌, ಸಾಗರ ತಾಂದಳೆ, ಕಲ್ಯಾಣಿ ಕಂದಗೂಳ, ಬಸಯ್ಯಸ್ವಾಮಿ ಚಿಕ್ಕಮಠ, ಮಹ್ಮದ್‌ ಮೀರಾಜ, ಸಂಕಲ್ಪ ಮೂಲಿಮನಿ, ಅಖೀಲಾಂಡ ಭಟ ಜೋಶಿ, ನಿಖೀಲ ಶೆಟ್ಟಗಾರ್‌, ಮಹ್ಮದ್‌ ಯಾಸೀನ್‌, ನಿಖೀಲ್ ಹಿರೇಮಠ, ಮಹಾಲಿಂಗ ಪಾಟೀಲ, ಗುರುರಾಜ ಆಡಕಿ, ಕೋಮಲ ಕಲ್ಯಾಣಿ, ಗುರುಪಾದಪ್ಪ ಶರಣ, ಶಿವರಾಜ ಜಿಲ್ಲಳ್ಳಿ, ಸೋಮಶೇಖರ ಗಡ್ಡಿಮಿಡಿ, ಮಲ್ಲಿಕಾರ್ಜುನ ಪಾಟೀಲ, ದರ್ಶನಕುಮಾರ ಕಾಂಬಳೆ, ಚೈತ್ರಾ ಹೊಸಮನಿ, ಮೋಂಟು ಶಾಹ, ಶ್ರೀಪಾದ ರಂಗದಾಳ, ಶುಭಂ ಕ್ಷೀರಸಾಗರ, ಮತ್ತು ಹರಿಪ್ರಸಾದ ಟಾಟಾ ಮೋಟಾರ್ಗೆ ಕಂಪನಿಗೆ ವಾರ್ಷಿಕ 2 ಲಕ್ಷ ರೂ. ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಇದೇ ವಿಶ್ವವಿದ್ಯಾಲಯದ ಹರ್ಷತಾ ಕಂಕೇರಿ, ಭಾಗ್ಯಶ್ರೀ ಎಸ್‌.ಎಂ. ಮತ್ತು ಪಲ್ಲವಿ ಕ್ಯಾಪಜೆಮಿನಿ ಕಂಪನಿಗೆ ವಾರ್ಷಿಕ ಆಕರ್ಷಕ 4 ಲಕ್ಷ ರೂ. ವೇತನದೊಂದಿಗೆ ಹಾಗೂ ಮಾಧುರಿ ಎಟೋಸ್‌ ಸೈಂಟೆಲ್ ಕಂಪನಿಗೆ ವಾರ್ಷಿಕ 3.38 ಲಕ್ಷ ವೇತನದೊಂದಿಗೆ ಆಯ್ಕೆಯಾಗುವ ಮೂಲಕ ಶರಣಬಸವ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.

ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆಗೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪರಮ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಕುಲಪತಿ ಡಾ| ನಿರಂಜನ ನಿಷ್ಠಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡೀನ್‌ ಡಾ| ಲಕ್ಮ್ಷೀ ಮಾಕಾ ಹರ್ಷ ವ್ಯಕ್ತಪಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ