ಸೇವಾ ಸಿಂಧು ಯೋಜನೆ ಲಾಭ ಪಡೆದುಕೊಳ್ಳಿ: ಶರಣಪ್ಪ

ಕಂಪ್ಯೂಟರ್‌ ಆಪರೇಟರ್‌ಗಳ ಕಾರ್ಯಾಗಾರ

Team Udayavani, Jul 12, 2019, 1:16 PM IST

ಕಲಬುರಗಿ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂಪ್ಯೂಟರ್‌ ಆಪರೇಟರ್‌ಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಮಾತನಾಡಿದರು.

ಕಲಬುರಗಿ: ಕಾರ್ಮಿಕ ಇಲಾಖೆಯಿಂದ ಸಿಗುವ ಸುಮಾರು 15ಕ್ಕಿಂತ ಹೆಚ್ಚು ಸೇವೆಗಳನ್ನು ಕಾರ್ಮಿಕರಿಗೆ ಸಕಾಲದಲ್ಲಿ ಒದಗಿಸುವ ಮುಂದುವರಿದ ಭಾಗವೇ ಸೇವಾ ಸಿಂಧು ಕಾರ್ಯಕ್ರಮವಾಗಿದ್ದು, ಕಾರ್ಮಿಕರು ಇದರ ಲಾಭ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ. ಶರಣಪ್ಪ ಸತ್ಯಂಪೇಟ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೇವಾ ಸಿಂಧು ಯೋಜನೆ ಅಡಿಯಲ್ಲಿ ಒಳಪಡುವ ಕಾರ್ಮಿಕ ಇಲಾಖೆಯ ಆನ್‌ಲೈನ್‌ ಸೇವೆಗಳ ಕುರಿತು ಕಂಪ್ಯೂಟರ್‌ ಆಪರೇಟರ್‌ಗಳಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರು ಸೂಕ್ತ ಅರಿವಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.

ದುರ್ಬಲತೆ ಪಿಂಚಣಿ, ಟ್ರೈನಿಂಗ್‌ ಕಮ್‌-ಟೂಲ್ ಕಿಟ್, ವಸತಿ (ಕಾರ್ಮಿಕ ಗೃಹ ಭಾಗ್ಯ), ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್‌), ಕಾರ್ಮಿಕರ ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಸೌಲಭ್ಯದಿಂದ ಕೆಲವರು ವಂಚಿತರಾಗಿದ್ದಾರೆ. ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸರ್ಕಾರವು ಜಾರಿಗೊಳಿಸಿರುವ ಹತ್ತು-ಹಲವು ಯೋಜನೆಗಳ ಬಗ್ಗೆ ಹಾಗೂ ಸೇವಾ ಸಿಂಧು ಯೋಜನೆಡಿಯಲ್ಲಿ ಸಿಗುವ ಸೌಲಭ್ಯದ ಬಗ್ಗೆ ಕಾರ್ಮಿಕರಿಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಕಾರ್ಮಿಕ ಇಲಾಖೆಯಿಂದ ನಡೆಯಬೇಕು ಎಂದು ಹೇಳಿದರು.

ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಯೋಜನೆಗಳನ್ನು ಸರಳವಾಗಿ ಫಲಾನುಭವಿಗಳನ್ನು ತಲುಪುವ ಉದ್ದೇಶದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಶಿಷ್ಟಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಸೇವಾ ಸಿಂಧು ಯೋಜನೆ ಅಡಿಗೆ ಒಳಪಡುವ ಅಧಿಕಾರಿಗಳು ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು: ದಸರಾ ರಜೆಯ ಬಳಿಕ ಮಧ್ಯಾವಧಿ ಪರೀಕ್ಷೆ ನಡೆಸಲು ನಿರ್ಧರಿಸಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕ್ರಮದಿಂದಾಗಿ ಈ ಬಾರಿ ಪದವಿಪೂರ್ವ ತರಗತಿಯ ವಿದ್ಯಾರ್ಥಿಗಳಿಗೆ...

  • ಮಂಗಳೂರು/ಉಡುಪಿ: ಕರಾವಳಿಯ ಗಣಪತಿ ಹಾಗೂ ಇತರ ಪ್ರಮುಖ ದೇವಾಲಯಗಳಲ್ಲಿ ಅಂಗಾರಕ ಸಂಕಷ್ಟಿ ಮಂಗಳವಾರ ನಡೆಯಿತು. ಸಾವಿರಾರು ಮಂದಿ ಸಂಕಷ್ಟಿ ಉಪವಾಸ ಕುಳಿತು ದೇವರ ದರ್ಶನ...

  • ಬಜಪೆ: "ಉಳಿತಾಯ' ಖುಷಿ ಕೊಡುವ ಪದ. ಖರ್ಚು ಕಡಿಮೆ ಮಾಡಿ ಹೆಚ್ಚು ಸೇವೆ ನೀಡುವ ಉಳಿತಾಯಕ್ಕೆ ಅಧಿಕ ಗೌರವವಿದೆ. ಅಂತಹ ಒಂದು ಮಾದರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ...

  • ಬೆಂಗಳೂರು: ಮೋಟಾರು ಕಂಪನಿ ಶೋರೂಂ ಮಾಲೀಕ ಎಂ.ಸಿದ್ದರಾಜು ಅವರ ಪುತ್ರ ಹೇಮಂತ್‌ ಹಾಗೂ ಅವರ ಕಾರು ಚಾಲಕ ಕೇಶವರೆಡ್ಡಿಯನ್ನು 23 ದಿನಗಳ ಹಿಂದೆ ಅಪಹರಿಸಿ ಮೂರು ಕೋಟಿ...

  • ಬೆಂಗಳೂರು: ಹಸಿತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯು 2015ರಲ್ಲಿ ನಿರ್ಮಾಣ ಮಾಡಿರುವ ಸಿಗೇಹಳ್ಳಿಯ ಹಸಿತ್ಯಾಜ್ಯ ಸಂಸ್ಕರಣಾ ಘಟಕವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ....

ಹೊಸ ಸೇರ್ಪಡೆ

  • "ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ "ಅವರು' ಅನಬಾರದು, "ಇವರು'...

  • ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. "ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ...

  • "ಅಮ್ಮಾ, ಬೇಗ ಏನಾದ್ರೂ ತಿನ್ನೋಕೆ ಕೊಡು. ನಿನ್ನೆ ಕೊಟ್ಟ ಸ್ನ್ಯಾಕ್ಸ್‌ ಬೇಡ'...ಮಕ್ಕಳದ್ದು ದಿನಾ ಇದೇ ರಾಗ. ತಿನ್ನಲು ಕೊಡುವುದೇನೋ ಸರಿ, ಆದರೆ ಬೇಗ ಕೊಡು, ನಿನ್ನೆ...

  • ಜಮ್ಮು-ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನಿ ಸೇನೆಯ ನಡುವೆ ಸೃಷ್ಟಿಯಾಗುತ್ತಿರುವ ಬಿಕ್ಕಟ್ಟು ಚಿಂತೆಯ ವಿಷಯವಾಗಿದೆ. ಅದರಲ್ಲೂ ಕಲಂ 370 ದಯಪಾಲಿಸಿದ್ದ ವಿಶೇಷಾಧಿಕಾರವನ್ನು...

  • ಇತಿಹಾಸದ ಪ್ರಕಾರ ಸಲೀಂ, ನೃತ್ಯಗಾತಿ ಅನಾರ್ಕಲಿಯನ್ನು ಅದೆಷ್ಟು ಹಚ್ಚಿಕೊಂಡಿದ್ದನೋ; ಇಂದಿನ ಯುವತಿಯರು ಈ ಅನಾರ್ಕಲಿಯನ್ನು ಅಷ್ಟೇ ಇಷ್ಟಪಡುತ್ತಾರೆ. ಸಾಮಾನ್ಯವಾಗಿ...