ವೈದ್ಯಕೀಯ ಕಾಲೇಜು ಆರಂಭಿಸಿ: ಡಾ| ಜಾಧವ

ವಿಶ್ವದ 100 ವಿವಿಗಳಲ್ಲಿ ಶರಣಬಸವ ವಿವಿ ಸ್ಥಾನ ಗಟ್ಟಿ•ಕಾಯಕವೆಂದರೆ ಸಂಬಳಕ್ಕೆ ಕೆಲಸ ಮಾಡುವುದಲ್ಲ

Team Udayavani, Aug 31, 2019, 9:58 AM IST

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಚಾಲನೆ ನೀಡಿದರು. ಸಂಸದ ಡಾ| ಉಮೇಶ ಜಾಧವ, ಕುಲಪತಿ ಡಾ| ನಿರಂಜನ ನಿಷ್ಠಿ, ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ| ರೂಪಕ ಅಕ್ಕಾ, ಡಾ| ಫ‌ರಿದ್‌ ಫಾರಹ್ಮದ್‌, ಡಾ| ವಸುಂಧರಾ ಭೂಪತಿ ಇದ್ದರು.

ಕಲಬುರಗಿ: ಶರಣಬಸವ ವಿವಿ ವಿಶ್ವದ ಶ್ರೇಷ್ಠ 100 ವಿವಿಗಳಲ್ಲಿ ಒಂದಾಗಿ ಹೊರ ಹೊಮ್ಮಲಿದ್ದು, ಸಂಸ್ಥೆಯಡಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಮುಂದಾದರೆ ಸರ್ಕಾರದಿಂದ ಸಹಕಾರ ನೀಡಲಾಗುವುದು ಸಂಸದ ಡಾ| ಉಮೇಶ ಜಾಧವ ಹೇಳಿದರು.

ಶರಣಬಸವ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯ ವಿಜ್ಞ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಹಾಗೂ ಭಾಷಾ ವಿಜ್ಞಾನ, ಮಾನವೀಯ, ಸಾಮಾಜಿಕ ವಿಜ್ಞಾನದಲ್ಲಿನ ಇತ್ತೀಚೆಯ ಪ್ರವೃತ್ತಿಗಳು, ಬೆಳವಣಿಗೆ ಕುರಿತು ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ತಾವು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿ. ಹೀಗಾಗಿ ನಾನು ಇಲ್ಲಿಯ ಸೇವಕ. ಮೆಡಿಕಲ್ ಕಾಲೇಜು ಸ್ಥಾಪಿಸಲು ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಮುಂದಾಗಬೇಕು, ಅದಕ್ಕಾಗಿ ನಾನು ಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಕಲಬುರಗಿಗೆ ಇನ್ನೊಂದು ವೈದ್ಯಕೀಯ ಕಾಲೇಜು ಅಗತ್ಯವಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವೂ ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಅಮೆರಿಕ ಟೆಕ್ಸಾಸ್‌ನ ಬಸವ ಡಿವೈನ್‌ ಸೆಂಟರ್‌ ಸಂಸ್ಥಾಪಕಿ ರೂಪಕ ಅಕ್ಕಾ ವಿಶೇಷ ಉಪನ್ಯಾಸ ನೀಡುತ್ತಾ, ಕಾಯಕ ಹಾಗೂ ದಾಸೋಹ ಸೂತ್ರ ಅಳವಡಿಸಿಕೊಳ್ಳಬೇಕು. ಕಾಯಕ ಹಾಗೂ ಕೆಲಸಕ್ಕೆ ವ್ಯತ್ಯಾಸವಿದೆ. ಸಂಬಳಕ್ಕಾಗಿ ಕೆಲಸ ಮಾಡುವಂತೆ ಆಗಬಾರದು. ಕೆಲಸ ಸತ್ಯ ಹಾಗೂ ಶುದ್ಧತೆಯಿಂದ ಕೂಡಿದರೆ ಮಾತ್ರ ಕಾಯಕವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ| ನಿರಂಜನ ನಿಷ್ಠಿ ಮಾತನಾಡಿ, ಶಿಕ್ಷಣದಲ್ಲಿಂದು ಉದ್ಯೋಗ ಪ್ರಮುಖ ಪಾತ್ರ ವಹಿಸುತ್ತಿದೆ. ಶರಣಬಸವ ವಿವಿ ಶಿಕ್ಷಣದೊಂದಿಗೆ ಉದ್ಯೋಗವನ್ನು ಕಲ್ಪಿಸುತ್ತಿದೆ. ಚಿತ್ತಾಪುರದಲ್ಲಿ ಕೈಗಾರಿಕಾ ಬಂಡವಾಳ ಹೂಡಿಕೆ ವಲಯ ಸ್ಥಾಪನೆಯಾದರೆ ಎರಡು ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಶರಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ವಿವಿಯಿಂದ ಹೊರ ಹೊಮ್ಮುವ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಪೇಟೆಂಟ್ದೊಂದಿಗೆ ಹೋಗಬೇಕು ಎನ್ನುವುದು ಡಾ| ಅಪ್ಪ ಆಶಯವಾಗಿದೆ ಎಂದರು.

ಎಸ್‌ಬಿಯು ಕುಲಸಚಿವ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ಶರಣಬಸವ ವಿವಿಯಲ್ಲಿ ಎಲ್ಲ ತೆರನಾದ ಶಿಕ್ಷಣ ಒಂದೇ ವೇದಿಕೆಯಲ್ಲಿ ಸಾಂಪ್ರದಾಯಿಕ ಆಯ್ಕೆ ಬಿಟ್ಟು, ವಿದ್ಯಾರ್ಥಿಗಳ ಆಯ್ಕೆಯಂತೆ ಓದುವಂತಾಗಬೇಕು ಎನ್ನುವ ದೂರದೃಷ್ಟಿಯಿಂದ ಪೂಜ್ಯ ಡಾ| ಅಪ್ಪ ವಿವಿ ಸ್ಥಾಪಿಸಿದ್ದಾರೆ ಎಂದರು.

ಸಮ ಕುಲಪತಿಗಳಾದ ಡಾ| ವಿ.ಡಿ. ಮೈತ್ರಿ, ಎನ್‌.ಎಸ್‌. ದೇವರಕಲ್, ಕ್ಯಾಲಿಫೊರ್ನಿಯದ ಸೊನೊಮ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಸೈನ್ಸ್‌ ವಿಭಾಗದ ಅಧ್ಯಕ್ಷ ಡಾ| ಫ‌ರಿದ್‌ ಫಾರಹ್ಮದ್‌, ಕ್ಯಾಲಿಪೋರ್ನಿಯಾದ ಕ್ರೂವ್‌ ಮೊಬಿಲಿಟಿ ಮುಖ್ಯಸ್ಥ ಶಿವಕುಮಾರ ಮಠಪತಿ, ಐಲ್ಯಾರ್ಂಡಿನ್‌ ರಾಷ್ಟ್ರೀಯ ವಿಶ್ವವಿದ್ಯಾಲಯದ ಡಾ| ಮಾರಟೀನ್‌ ಸೆರಾನೊ, ಆಯುರ್ವೇದ ತಜ್ಞೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ| ವಸುಂದರಾ ಭೂಪತಿ, ಡಾ| ಅಬ್ದುಲ್ ಸಲೀಂ, ಭೂಪಾಲನ ಡಾ| ಲಕ್ಷ್ಮೀನಾರಾಯಣ ಭಾವಸಾರ, ವಿಜ್ಞಾನಿ ಡಾ| ಎನ್‌.ಎಂ. ಬುರ್ಜುಕೆ, ಡಾ| ಬಲರಾಮ ಸಾಹು, ಶಿವಮೊಗ್ಗ ವಿಶ್ವವಿದ್ಯಾಲಯದ ಡಾ| ಬಿ.ಬಿ. ಹೊಸಶೆಟ್ಟಿ, ಮೈಸೂರು ವಿವಿಯ ಡಾ| ಬಸವರಾಜಪ್ಪ ಎಸ್‌., ಡಾ| ಅಂಬಿಕಾಪ್ರಸಾದ, ಪ್ರೊ| ಎಸ್‌.ಸಿ. ಶಿರಶೆಟ್ಟಿ, ಡೀನ್‌ ಲಕ್ಷ್ಮೀ ಪಾಟೀಲ ಮಾಕಾ, ಡಾ| ಎಸ್‌.ಜಿ. ಡೊಳ್ಳೆಗೌಡರ, ಪ್ರೊ| ಡಿ.ಟಿ. ಅಂಗಡಿ, ಬಿ.ಸಿ. ಚವ್ಹಾಣ, ಶಿವಕುಮಾರ ಜವಳಗಿ, ಶಿವಕುಮಾರ ರಾಯಚೋಟಿ, ಹರೀಶ, ಬಸವರಾಜ ಮಠಪತಿ ಮತ್ತಿತರರು ಇದ್ದರು. ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ ನಿರೂಪಿಸಿದರು, ಡಾ| ನಾಗಬಸವಣ್ಣ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ