ಹೆಲ್ಮೆಟ್‌ ಇಲ್ದಿದ್ರೇ ಪೆಟ್ರೋಲ್‌ ಸಿಗಲ್ಲ

ಸಂಚಾರ ಸುಧಾರಣೆಗೆ ಹೆಜ್ಜೆ ಪೆಟ್ರೋಲ್‌ ಪಂಪ್‌ಗೆ ಸಿಸಿ ಕ್ಯಾಮೆರಾ

Team Udayavani, Sep 22, 2019, 11:10 AM IST

ಕಲಬುರಗಿ: ದ್ವಿಚಕ್ರವಾಹನ ಸವಾರುದಾರರಿಗೆ ಹೆಲ್ಮೆಟ್‌ ಇರದ್ದರೆ ಇನ್ಮುಂದೆ ಪೆಟ್ರೋಲ್‌ ಸಿಗೋದಿಲ್ಲ. ಹೆಲ್ಮೆಟ್‌ ಇದ್ದರೆ ಮಾತ್ರ ಪೆಟ್ರೋಲ್‌ ಹಾಕುವ ವ್ಯವಸ್ಥೆ ವಾರದ ನಂತರ ಜಾರಿಗೆ ಬರಲಿದೆ. ಸಂಚಾರಿ ಜಾಗೃತಿ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಪರಿಣಾಮಕಾರಿಯಾಗಿ ಸಂಚಾರಿ ನಿಯಮ ಪಾಲನೆ ಆಗದ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತಾಲಯ ಹೊಸ ನಿಯಮಾವಳಿಗೆ ಮುಂದಾಗಿದೆ.

ದಿನೇ-ದಿನೇ ಹೆಚ್ಚಳವಾಗುತ್ತಿರುವ ನಗರ ಸಂಚಾರದ ವ್ಯವಸ್ಥೆ ಸುಧಾರಣೆ ತರುವ ನಿಟ್ಟಿನಲ್ಲಿ ಮಹಾನಗರ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಶನಿವಾರ ತಮ್ಮ ಕಚೇರಿಯಲ್ಲಿ ಪೆಟ್ರೋಲ್‌ ಪಂಪ್‌ ಮಾಲೀಕರ ಸಭೆ ಕರೆದು ಸಂಚಾರ ಸುಧಾರಣೆ ನಿಟ್ಟಿನಲ್ಲಿ ಸಮಾಲೋಚನೆ ನಡೆಸಿದರು.

ವಾರದ ನಂತರ ಹೆಲ್ಮೆಟ್‌ ಧರಿಸಿದವರಿಗೆ ಮಾತ್ರ ಪೆಟ್ರೋಲ್‌ ಹಾಕುವ ನಿಯಮ ಕಾರ್ಯರೂಪಕ್ಕೆ ತನ್ನಿ. ಪಂಪ್‌ಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸುವಂತೆ ಹಾಗೂ ಕ್ಯಾನ್‌ ತೆಗೆದುಕೊಂಡು ಬಂದವರಿಗೆ ಪೆಟ್ರೋಲ್‌ ನೀಡದಿರುವ ಕುರಿತಾಗಿ ಆಯುಕ್ತರು ಸ್ಪಷ್ಟ ನಿರ್ದೇಶನ ನೀಡಿದರು.

ಆಯುಕ್ತರ ನಿರ್ದೇಶನಕ್ಕೆ ಒಪ್ಪಿಗೆ ನೀಡಿದ ಪೆಟ್ರೋಲ್‌ ಮಾಲೀಕರು, ಸಂಚಾರ ಸುಧಾರಣೆ ನಿಟ್ಟಿನಲ್ಲಿ ಕೈ ಜೋಡಿಸಲಾಗುವುದು. ಸಾರ್ವಜನಿಕರಿಂದ ಕೆಲವೊಮ್ಮೆ ಆಕ್ಷೇಪಣೆ ಬಂದಲ್ಲಿ ತಮ್ಮ ನೆರವಿಗೆ ಬರಬೇಕೆಂದು ಮಾಲೀಕರು ಕೋರಿದರು.

ಕಾಲಾವಕಾಶ: ಪೆಟ್ರೋಲ್‌ ಮಾಲೀಕರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಅವರು, ಹೆಲ್ಮೆಟ್‌ ಧರಿಸಿದಿವರಿಗೆ ಮಾತ್ರ ಪೆಟ್ರೋಲ್‌ ಎನ್ನುವ ನಿಯಮ ಕಾರ್ಯಾನುಷ್ಠಾನಕ್ಕೆ ತರಲು ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್‌ ಪಂಪ್‌ ಮಾಲೀಕರ ಸಭೆ ಕರೆದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಪೆಟ್ರೋಲ್‌ ಬಂಕ್‌ಗಳಲ್ಲಿ ಹೆಲ್ಮೇಟ್‌ ಧರಿಸಿದವರಿಗೆ ಮಾತ್ರ ಪೆಟ್ರೋಲ್‌ ಎಂಬ ನಾಮಫ‌ಲಕ ಅಳವಡಿಸಿಕೊಳ್ಳಲಾಗುತ್ತಿದೆ. ಸಂಚಾರಿ ನಿಯಮಗಳ ಕುರಿತಾಗಿ ಜಾಗೃತಿ ಮೂಡಿಸಲಾಗುವುದು. ಒಟ್ಟಾರೆ ಪೊಲೀಸ್‌ ವ್ಯವಸ್ಥೆ ಜನಸ್ನೇಹಿಯಾದರೆ ಎಲ್ಲ ನಿಯಮಗಳು ಸರಳವಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದರು. ಟ್ರಾಫಿಕ್‌ ಎಸಿಪಿ ಗಿರೀಶ ಕರಡಿಗುಡ್ಡ ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಾಡಿ: ಗ್ರಾಮಸ್ಥರ ವಿವಿಧ ಕುಂದು ಕೊರತೆಗಳನ್ನು ಕೇಳಿ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ನಡೆಸಲಾಗುವ ಅಧಿಕಾರಿಗಳ ಜನಸ್ಪಂದನೆ ಸಭೆ, ಗದ್ದಲದ ಗೂಡಾಗಿ...

  • ಕಲಬುರಗಿ: ಕನ್ನಡ ಮತ್ತು ಕನ್ನಡ ಪರ ಕೆಲಸ ಮಾಡಲು ಸರ್ಕಾರದ ಆದೇಶವೇ ಬೇಕೆ? ಹಣದ ನೀಡಿದರೆ ಮಾತ್ರ ಕನ್ನಡದ ಕೆಲಸ ಮಾಡುತೀ¤ರಾ? ಎಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ...

  • ಜೇವರ್ಗಿ: ಪಟ್ಟಣದ ಶಾಸ್ತ್ರೀಚೌಕ್‌ ಬಡಾವಣೆಯ ಸಿಂಡಿಕೇಟ್‌ ಬ್ಯಾಂಕ್‌ ಹತ್ತಿರದ ಹಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಳು ಬಿದ್ದು ಕಸದ ತೊಟ್ಟಿ ಹಾಗೂ...

  • ಯಡ್ರಾಮಿ: ಯಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 416 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಇವರಿಗೆ ಕಲಿಸಲು ನಾಲ್ವರು ಶಿಕ್ಷಕರು ಇದ್ದು, ಇದರಲ್ಲೊಬ್ಬರು...

  • ಕಲಬುರಗಿ: ತತ್ವಪದಗಳು ಕನ್ನಡ ಸಾಹಿತ್ಯದಲ್ಲಿ ಆಳ ಹಾಗೂ ಅಗಲವಾಗಿರುವಷ್ಟು ಬೇರ್ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಸ್ತಾರವಾಗಿ ವ್ಯಾಪಿಸಿಕೊಂಡಿಲ್ಲ ಎಂದು ಚಿಂತಕ...

ಹೊಸ ಸೇರ್ಪಡೆ