ಜಿಲ್ಲೆಯಲ್ಲಿ 7.84 ಲಕ್ಷ ಹೆಕ್ಟೇರ್‌ ಭೂಮಿ ಬಿತ್ತನೆ


Team Udayavani, May 21, 2022, 11:50 AM IST

2land

ಕಲಬುರಗಿ: ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಇದೇ ಮಳೆಗಾಲದ ಆರಂಭ ಎಂದು ಕೊಂಡು ಈ ಬಾರಿಯ ಮುಂಗಾರು ಹಂಗಾಮಿಗಾಗಿ ರೈತರು ಸಜ್ಜಾಗುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೃಷಿ ಇಲಾಖೆ ಕೊಡವಿಕೊಂಡು ಎದ್ದಿದೆ.

ಪ್ರಸಕ್ತ ಮುಂಗಾರು ಹಂಗಾಮಿಗಾಗಿ ಒಟ್ಟು 7.84.353 ಹೆಕ್ಟೇರ್‌ ಜಮೀನನಲ್ಲಿ ಬಿತ್ತನೆಯ ಗುರಿ ಹೊಂದಿದೆ. ಇದೇ ವೇಳೆ ಈ ಬಾರಿ ಜಿಲ್ಲೆಯಲ್ಲಿ ಕಬ್ಬು ಮತ್ತು ಸೋಯಾಬೀನ್‌ ಬೆಳೆಯುವ ಕ್ಷೇತ್ರ ವಿಸ್ತರಣೆ ಆಗಿದೆ. ರೈತರು ತೊಗರಿ ಕುರಿತು ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ವಾಣಿಜ್ಯ ಬೆಳಗಳತ್ತ ಚಿತ್ತ ಹರಿಸಿದ್ದಾರೆ. ಅಲ್ಲದೇ, ಈ ಬಾರಿ ಹತ್ತಿ ಬೆಳೆಯುವ ಕ್ಷೇತ್ರವೂ ವಿಸ್ತಾರಗೊಳ್ಳುತ್ತಿರುವುದು ಸಂತಸ ಮೂಡಿಸಿದೆ.

5.52ಲಕ್ಷ ಹೆಕ್ಟೇರ್ನಲ್ಲಿ ತೊಗರಿ: ಈ ಬಾರಿ 5,52,622 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬೆಳೆಯುವ ಸಾಧ್ಯತೆ ಇದೆ. ಕಳೆದ ಬಾರಿಗಿಂತ ತುಸು ಕಡಿಮೆ ಎನ್ನಿಸಿದರೂ ಉತ್ತಮ ಇಳುವರಿ ನಿರೀಕ್ಷೆ ಮಾಡಲಾಗಿದೆ. ಅಂದಾಜು 5.61 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಗುರಿ ಇಟ್ಟುಕೊಳ್ಳಲಾಗಿದೆ. ಅದರೊಂದಿಗೆ 52,297 ಹೆಕ್ಟೇರ್‌ನಲ್ಲಿ ಹೆಸರು, 32,451 ಹೆಕ್ಟೇರ್‌ನಲ್ಲಿ ಉದ್ದು ಬೆಳೆಯಲು ಯೋಜಿಸಲಾಗಿದೆ. ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಶೇಂಗಾ, ಸೋಯಾಬೀನ್‌, ಔಡಲ ಎಲ್ಲವೂ ಸೇರಿ ಒಟ್ಟು 35,691 ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಇದರಿಂದ ಒಟ್ಟು 34,962 ಮೆ.ಟನ್‌ ಉತ್ಪಾದನೆ ನಿರೀಕ್ಷೆ ಹೊಂದಲಾಗಿದೆ.

ಕಬ್ಬು, ಹತ್ತಿ ಕ್ಷೇತ್ರ ಹೆಚ್ಚಳ: ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೈತರು ಕಬ್ಬಿಗೆ ಹೆಚ್ಚು ಜೋತು ಬೀಳುವ ಲಕ್ಷಣಗಳು ಕಾಣಿಸಿವೆ. ಅಂದಾಜು 29,683 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದೇ ವೇಳೆ ಹತ್ತಿ ಕ್ಷೇತ್ರದಲ್ಲೂ ವಿಸ್ತರಣೆ ಕಾಣುತ್ತಿದೆ. ಒಟ್ಟು 63,458 ಹೆಕ್ಟೇರ್‌ನಲ್ಲಿ ಬೆಳೆಯುವ ಯೋಜನೆ ಹೊಂದಲಾಗಿದೆ. ಕಳೆದ ವರ್ಷ ಹತ್ತಿಗೆ ಭಾರಿ ಬೆಲೆ ಬಂದ ಹಿನ್ನೆಲೆಯಲ್ಲಿ ರೈತರು ಸಹಜವಾಗಿಯೇ ಹತ್ತಿ ಬೆಳೆಯತ್ತ ಆಕರ್ಷಿತರಾಗಿದ್ದಾರೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದು ಸಾಂಪ್ರದಾಯಿಕ ಮುಂಗಾರಿನ ಆರಂಭವಲ್ಲದೇ ಇದ್ದರೂ, ರೈತರು ಹೊಲ ಸಜ್ಜು ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿ ಚಟುವಟಿಕೆ ಆರಂಭಗೊಂಡಿವೆ. ಒಟ್ಟು 7.84 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಬೆಳೆಯುವ ಗುರಿ ಹೊಂದಿದ್ದು, 31,30,483 ಮೆಟ್ರಿಕ್‌ ಟನ್‌ ಆಹಾರ ಉತ್ಪಾದನೆಯ ಗುರಿ ಹೊಂದಲಾಗಿದೆ. ಕಬ್ಬು, ಸೋಯಾಬೀನ್‌ ಕ್ಷೇತ್ರ ವಿಸ್ತರಣೆ ಆಗುತ್ತಿದೆ. ರತೇಂದ್ರನಾಥ ಸೂಗೂರು, ಜೆಡಿ ಕೃಷಿ ಇಲಾಖೆ

ಟಾಪ್ ನ್ಯೂಸ್

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ

news banahatti

ಬನಹಟ್ಟಿಯಲ್ಲಿ ಉಡುಪು ಕಳ್ಳತನ: ವಿಚಿತ್ರ ವ್ಯಕ್ತಿ ಆಕಾರ ನೋಡಿ ಬೆಚ್ಚಿ ಬಿದ್ದ ಜನತೆ..!

news belagavi

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ 26 ರೌಡಿಗಳ ಮನೆಗಳ ಮೇಲೆ ದಾಳಿ

thumb 1 earth

ಕರಾವಳಿ: ಭವಿಷ್ಯದಲ್ಲಿ 5 ತೀವ್ರತೆಯ ಭೂಕಂಪ ಸಾಧ್ಯತೆ

thumb 3 bank

ಶೀಘ್ರ ಸರಕಾರಿ ಬ್ಯಾಂಕ್‌ ಪೂರ್ಣ ಖಾಸಗೀಕರಣ? ಪಿಎಸ್‌ಬಿಗಳಿಂದ ನಿರ್ಗಮಿಸಲು ಸರಕಾರ ಸಿದ್ಧತೆ

ವಿನಾಯಿತಿಗೆ ಎಳ್ಳುನೀರು: ಹೊಟೇಲ್‌ ವಾಸ್ತವ್ಯ,ಆಸ್ಪತ್ರೆ ಕೊಠಡಿ,ಅಂಚೆ ಸೇವೆ ಇನ್ನು ದುಬಾರಿ

ವಿನಾಯಿತಿಗೆ ಎಳ್ಳುನೀರು: ಹೊಟೇಲ್‌ ವಾಸ್ತವ್ಯ,ಆಸ್ಪತ್ರೆ ಕೊಠಡಿ,ಅಂಚೆ ಸೇವೆ ಇನ್ನು ದುಬಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಂಚೋಳಿ : ವಿದ್ಯುತ್ ಸ್ಪರ್ಶಗೊಂಡು ಗ್ರಾಮದೇವತೆಯ ಗೂಳಿ ಸ್ಥಳದಲ್ಲೇ ಸಾವು, ಮರುಗಿದ ಜನ

ಚಿಂಚೋಳಿ : ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿದ ಗ್ರಾಮದೇವತೆಯ ಗೂಳಿ, ಮರುಗಿದ ಜನ

ಆ.15ರಿಂದ 30 ಮೆಗ್ಯಾವಾಟ್‌ ವಿದ್ಯುತ್‌ ಉತ್ಪಾದನೆ

ಆ.15ರಿಂದ 30 ಮೆಗ್ಯಾವಾಟ್‌ ವಿದ್ಯುತ್‌ ಉತ್ಪಾದನೆ

ಕುಂಚಾವರಂನಲ್ಲಿ ಕಾಟೇಜ್‌-ಜಂಗಲ್‌ ಲಾಡ್ಜ್

ಕುಂಚಾವರಂನಲ್ಲಿ ಕಾಟೇಜ್‌-ಜಂಗಲ್‌ ಲಾಡ್ಜ್

ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ

ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ

tdy-22

ಕಲಬುರ್ಗಿಯಲ್ಲಿ 74.50 ಲಕ್ಷ ರೂ. ಮೌಲ್ಯದ  745.410 ಕೆಜಿ ಗಾಂಜಾ ದಹನ

MUST WATCH

udayavani youtube

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌!

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಸುಳ್ಯ – ಮಡಿಕೇರಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನತೆ

udayavani youtube

ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ : ಸುಟ್ಟು ಕರಕಲಾಯ್ತು ಮನೆ

udayavani youtube

ಭಾಗಮಂಡಲ ಸೇರಿದಂತೆ ವಿವಿಧ ಕಡೆ ಭೂಮಿ ಕಂಪಿಸಿದ ಅನುಭವ

ಹೊಸ ಸೇರ್ಪಡೆ

2

ಸೌಕರ್ಯದ ನಿರೀಕ್ಷೆಯಲ್ಲಿ ಹಾರಾಡಿ ಶಾಲೆ

ಜೂ.29ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿ ತಂಡ

ಜೂ.29ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿ ತಂಡ

1-sffsf-fs

ಕೊರಟಗೆರೆ: ಕ್ರಶರ್ ಗಳ ಹಾವಳಿ; ತಿನ್ನುವ ಅನ್ನದಲ್ಲೂ, ಕುಡಿಯುವ ನೀರಿನಲ್ಲೂ ಧೂಳು

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

ಬಹುಭಾಷಾ ಸ್ಟಾರ್ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ; ಗಣ್ಯರ ಸಂತಾಪ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ

Update: ರಾಜಸ್ಥಾನ ಶಿರಚ್ಛೇದ ಪ್ರಕರಣ-ಕರ್ಫ್ಯೂ ಜಾರಿ, ಆರೋಪಿಗಳ ಬಂಧನ; ಎನ್ ಐಎ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.