Udayavni Special

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಕೋವಿಡ್ ಲ್ಯಾಬ್ ಗೆ ಜಿಲ್ಲಾಡಳಿತದಿಂದ 84 ಲಕ್ಷ ರೂ


Team Udayavani, Aug 13, 2020, 2:29 PM IST

ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಕೋವಿಡ್ ಲ್ಯಾಬ್ ಗೆ ಜಿಲ್ಲಾಡಳಿತದಿಂದ 84 ಲಕ್ಷ ರೂ

ಕಲಬುರಗಿ: ರಾಜ್ಯದ ಏಕೈಕ ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ಕೋವಿಡ್- 19 ಲ್ಯಾಬ್ ಗೆ ಜಿಲ್ಲಾಡಳಿತದಿಂದ 84 ಲಕ್ಷ ರೂ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಡಾ.ಉಮೇಶ ಜಾಧವ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಸಿಯುಕೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಐಸಿಎಂಆರ್ ಅನುಮತಿ ನೀಡಲಾಗಿದ್ದರೂ ಯಾಕೆ ಲ್ಯಾಬ್ ಕಾರ್ಯಾರಂಭಗೊಂಡಿಲ್ಲ ಎಂದು ಖಾರವಾಗಿ ಪ್ರಶ್ನಿಸಲಾಯಿತು.

ಇದಕ್ಕೆ ವಿವಿಯ ಸಮ ಕುಲಪತಿ ಡಾ. ಜಿ.ಆರ್. ನಾಯಕ ಅವರು ಲ್ಯಾಬ್ ಗೆ ವಿವಿಯಿಂದ 35 ಲಕ್ಷ ರೂ ಖರ್ಚು ಮಾಡಿ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಉಳಿದ ಹಣ ಕ್ರೋಢಿಕರಿಸಲಾಗುತ್ತಿದೆ ಎಂದರು. ಇದಕ್ಕೆ ಸಂಸದರು ಉಳಿದ 84 ಲಕ್ಷ ರೂ ಜಿಲ್ಲಾಡಳಿತ ದಿಂದ ನೀಡಲಾಗುವುದು ಎಂದು ಹೇಳಿ ಸಭೆಯಲ್ಲೆ ಚೆಕ್ ಬರೆಯಲು ಡಿಸಿ ಅವರಿಗೆ ಸೂಚಿಸಿದರು. 10 ನಿಮಿಷದಲ್ಲಿಯೇ ಚೆಕ್ ಸಿದ್ದಗೊಳಿಸಿ ಸಮ ಕುಲಪತಿಗಳಿಗೆ ಸಲ್ಲಿಸಲಾಯಿತು. ವಾರದೊಳಗೆ ಉದ್ಘಾಟನೆಯಾಗಬೇಕೆಂದು ಸಂಸದರು ಇದೇ ಸಂದರ್ಭದಲ್ಲಿ ಸೂಚಿಸಿದರು.‌

ಇದಕ್ಕೂ‌ಮುಂಚೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೇಂದ್ರೀಯ ವಿ.ವಿ. ಕಲಬುರ್ಗಿಯಲ್ಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಲಾಯಿತು.

ಈ ಭಾಗದ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ ಆರಂಭವಾದ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ನಡೆಯುವ ಯಾವ ಚಟುವಟಿಕೆಗಳ ಬಗ್ಗೆಯೂ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದಿಲ್ಲ. ವಿ.ವಿ. ಕಲಬುರ್ಗಿಯಲ್ಲಿಲ್ಲವೇ ಎಂದು ಸಂಸದ ಡಾ.ಉಮೇಶ ಜಾಧವ ಪ್ರಶ್ನಿಸಿದರು.

ಫೆಬ್ರುವರಿಯಲ್ಲಿ ವಿ.ವಿ. ಆವರಣದಲ್ಲಿ ಕೋವಿಡ್ ತಪಾಸಣೆ ಕೇಂದ್ರ ಆರಂಭಿಸಲು ಅನುಮತಿ ಸಿಕ್ಕಿದೆ. ಎಲ್ಲ ಯಂತ್ರಗಳು ಬಂದಿವೆ ‌ಎಂದು ವಿ.ವಿ. ಸಮ ಕುಲಪತಿ ಪ್ರೊ.ಜಿ.ಆರ್.ನಾಯಕ್ ಹೇಳಿದರು.

ಇದರಿಂದ ಗರಂ ಆದ ಜಾಧವ ಹಾಗೂ ಜಿಲ್ಲಾಧಿಕಾರಿ ಶರತ್ ಬಿ., ಕೋವಿಡ್ ಕೇಂದ್ರ ಇಲ್ಲವೆಂದು ನಾವು ಚಿಂತೆ ಮಾಡುತ್ತಿದ್ದೇವೆ. ನೀವು ಎಲ್ಲ ಸಿದ್ಧತೆ ಮಾಡಿಕೊಂಡರೂ ನಮಗೆ ತಿಳಿಸದಿದ್ದರೆ ಹೇಗೆ? ಮುಂಚೆಯೇ ತಿಳಿಸಿದ್ದರೆ ಅಲ್ಲಿ ಅಫಜಲಪುರ, ಅಳಂದ ಹಾಗೂ ಕಲಬುರ್ಗಿ ತಾಲ್ಲೂಕಿನ ಕೋವಿಡ್ ಶಂಕಿತರನ್ನು ತಪಾಸಣೆಗೆ ಕಳಿಸುತ್ತಿದ್ದೆವು. ಕೋವಿಡ್ ತಪಾಸಣೆ ಆರಂಭಿಸುವ ಬಗ್ಗೆ ಸರ್ಕಾರದ ಕಾರ್ಯದರ್ಶಿ ಅವರಿಂದ ಇಂದು ಪತ್ರ ಬಂದ ಬಳಿಕ ಗೊತ್ತಾಯಿತು ಎಂದರು.

ಸಾಕಷ್ಟು ಶ್ರಮ ಹಾಕಿ ವಿ.ವಿ.ಯನ್ನು ಕಲಬುರ್ಗಿಗೆ ತಂದಿದ್ದೇವೆ. ಯಾವುದಕ್ಕೂ ನಮ್ಮನ್ನು ಕರೆಯಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಬರುವ ಎಲ್ಲ ಸುತ್ತೋಲೆ, ಪತ್ರಗಳ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ನನ್ನ ಕಚೇರಿ ಹಾಗೂ ಬೀದರ್ ಸಂಸದ (ಆಳಂದ ತಾಲ್ಲೂಕು ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ) ಭಗವಂತ ಖೂಬಾ ಅವರ ಕಚೇರಿಗೆ ‌ಕಳಿಸಿಕೊಡಬೇಕು ಎಂದು ಸಂಸದ ಡಾ. ಜಾಧವ ವಿ.ವಿ. ಕುಲಸಚಿವ ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರಾದ ಎಂ.ವೈ ಪಾಟೀಲ್, ರಾಜಕುಮಾರ ಪಾಟೀಲ್, ಬಿ.ಜಿ.ಪಾಟೀಲ್, ಜಿಲ್ಲಾಧಿಕಾರಿ ಶರತ್ ಬಿ. ಜಿ.ಪಂ ಸಿಇಓ ಡಾ.ರಾಜಾ ಪಿ ಸೇರಿದಂತೆ ಮುಂತಾದವರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

“ಲವ್‌ ಜಿಹಾದ್‌’ ವಿರುದ್ಧ ಸುಗ್ರೀವಾಜ್ಞೆಗೆ ಯೋಗಿ ಚಿಂತನೆ

“ಲವ್‌ ಜಿಹಾದ್‌’ ವಿರುದ್ಧ ಸುಗ್ರೀವಾಜ್ಞೆಗೆ ಯೋಗಿ ಚಿಂತನೆ

ಎನ್‌ಐಸಿ ಅಮೂಲ್ಯ ಮಾಹಿತಿಗಳಿಗೆ ಕನ್ನ

ಎನ್‌ಐಸಿ ಅಮೂಲ್ಯ ಮಾಹಿತಿಗಳಿಗೆ ಕನ್ನ

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು?

ಸಾವಿನಲ್ಲಿ ಶೇ.60 ಮಂದಿ ಅನಿಲ ದುರಂತ ಸಂತ್ರಸ್ತರು ?

ಕೋವಿಡ್ : ಶೇ.78.86 ಚೇತರಿಕೆ

ಕೋವಿಡ್ : ಶೇ.78.86 ಚೇತರಿಕೆ

ಏರ್‌ಇಂಡಿಯಾಗೆ ನಿರ್ಬಂಧ

ಏರ್ ‌ಇಂಡಿಯಾಗೆ ನಿರ್ಬಂಧ

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು

ಕೃಷಿ ಬಿಲ್‌: ಎನ್‌ಡಿಎನಲ್ಲೇ ಒಡಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಡಾ| ಅಜಯಸಿಂಗ್‌

ಕಲ್ಯಾಣಕ್ಕೆ ಬಿಜೆಪಿ ಕೊಡುಗೆ ಶೂನ್ಯ: ಡಾ| ಅಜಯಸಿಂಗ್‌

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಿಎಂ

ಅಧಿವೇಶನಕ್ಕೆ ಮೊದಲೇ ಸಂಪುಟ ವಿಸ್ತರಣೆ ಬಯಕೆ: ಸಿಎಂ ಯಡಿಯೂರಪ್ಪ

ಅಧಿವೇಶನಕ್ಕೆ ಮೊದಲೇ ಸಂಪುಟ ವಿಸ್ತರಣೆ ಬಯಕೆ: ಸಿಎಂ ಯಡಿಯೂರಪ್ಪ

ಕಲ್ಯಾಣ ಕರ್ನಾಟಕ ಮರು ನಾಮಕರಣಕ್ಕೆ ಒಂದು ವರ್ಷ: ಒಂದು ಹಿನ್ನೋಟ

ಕಲ್ಯಾಣ ಕರ್ನಾಟಕ ಮರು ನಾಮಕರಣಕ್ಕೆ ಒಂದು ವರ್ಷ: ಒಂದು ಹಿನ್ನೋಟ

ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಿಎಂ ಬಿಎಸ್ ವೈ

ಕಲ್ಯಾಣ ಕರ್ನಾಟಕ ಉತ್ಸವ: ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಿಎಂ ಬಿಎಸ್ ವೈ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

“ಲವ್‌ ಜಿಹಾದ್‌’ ವಿರುದ್ಧ ಸುಗ್ರೀವಾಜ್ಞೆಗೆ ಯೋಗಿ ಚಿಂತನೆ

“ಲವ್‌ ಜಿಹಾದ್‌’ ವಿರುದ್ಧ ಸುಗ್ರೀವಾಜ್ಞೆಗೆ ಯೋಗಿ ಚಿಂತನೆ

ಎನ್‌ಐಸಿ ಅಮೂಲ್ಯ ಮಾಹಿತಿಗಳಿಗೆ ಕನ್ನ

ಎನ್‌ಐಸಿ ಅಮೂಲ್ಯ ಮಾಹಿತಿಗಳಿಗೆ ಕನ್ನ

6 ತಿಂಗಳ ಬಳಿಕ ಭಕ್ತರಿಗೆ ತೆರೆಯಲಿದೆಯೇ ಶ್ರೀಕೃಷ್ಣಮಠ?

6 ತಿಂಗಳ ಬಳಿಕ ಭಕ್ತರಿಗೆ ತೆರೆಯಲಿದೆಯೇ ಶ್ರೀಕೃಷ್ಣಮಠ?

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

ಬಯಲಾಯ್ತು ಪಾಕ್‌ ಕುತಂತ್ರ ತಕ್ಕ ಪ್ರತ್ಯುತ್ತರ ಅಗತ್ಯ

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.