ಆಳಂದ-ಖಜೂರಿ: ಧಾರಾಕಾರ ಮಳೆ

Team Udayavani, Sep 16, 2017, 10:14 AM IST

ಆಳಂದ: ಖಜೂರಿ ಮತ್ತು ಆಳಂದ ವಲಯದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಡಕಲ್‌ ಮಾರ್ಗದ ಹೆದ್ದಾರಿ ರಸ್ತೆ ಸೇತುವೆ ಕೊಚ್ಚಿಹೋಗಿ ಸಂಚಾರ ಸ್ಥಗಿತಗೊಂಡು ವಾಹನ ಹಾಗೂ ಜನ ಸಂಚಾರ ಸ್ಥಗಿತಗೊಂಡು ಪರದಾಡುವಂತಾಗಿದೆ.

ಬುಧವಾರ, ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಪಟ್ಟಣದ ಎಚ್‌ಕೆಇ ಪದವಿ ಕಾಲೇಜು ಹಾಗೂ ತಡಕಲ್‌ ಮಾರ್ಗದ ದಬದಬಿ ಹಳ್ಳ ಉಕ್ಕಿ ಹರಿದು ಸಂಚಾರಕ್ಕೆ ತಡೆಯಾಗಿ ತೊಂದರೆಯಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಇದೇ ಮಾರ್ಗದ ಗುತ್ತೇದಾರ ಹೊಲದ ಬಳಿಯ ಹೆದ್ದಾರಿಯ ಸೇತುವೆ ಮತ್ತೂಮ್ಮೆ ಕೊಚ್ಚಿಹೋಗಿ ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು, ಲಾರಿ, ಜೀಪುಗಳು ಮಾರ್ಗಬದಲಿಸಿ ಸಂಚರಿಸುತ್ತಿವೆ. ಶಾಲಾ, ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುತ್ತಿದ್ದಾರೆ.

ಹೆಚ್ಚಿನ ಮಳೆಯಿಂದ ಆಳಂದ, ಖಜೂರಿ, ನರೋಣಾ, ಕೊರಳ್ಳಿ ಭಾಗದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಮಳೆ ನೀರಿಗೆ ತೊಗರಿ, ಸೂರ್ಯಕಾಂತಿ, ಸೋಯಾಬಿನ್‌ ಬೆಳೆ ನಷ್ಟವಾಗುವ ಆಂತಕ ಮೂಡಿಸಿದೆ.

ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನ ವರೆಗೆ ಆಳಂದ ವಲಯದಲ್ಲಿ 67 ಮಿ.ಮೀ, ಖಜೂರಿ 70.2 ಮಿ.ಮೀ, ನರೋಣಾ 13.2 ಮಳೆಯಾದರೆ, ಸರಸಂಬಾ 31 ಮಿ.ಮೀ, ಕೊರಳ್ಳಿ 7 ಮಿ.ಮೀ ಮಳೆಯಾದರೆ, ನಿಂಬರಗಾ ಮತ್ತು ಮಾದನಹಿಪ್ಪರಗಾ ವಲಯದಲ್ಲಿ ಮಳೆಯಾಗಿಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ತಹಶೀಲ್ದಾರ ಭೇಟಿ: ವಳವಂಡವಾಡಿ, ತಡಕಲ್‌ ಮಾರ್ಗದ ರಸ್ತೆ ಸೇತುವೆ ಕೊರೆದು ಸಂಚಾರ ಕಡಿತಗೊಂಡ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ತಾತ್ಕಾಲಿಕವಾಗಿ ಸಂಚಾರ ಆರಂಭಕ್ಕೆ ಸೇತುವೆ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಅಪಮೌಲ್ಯಗಳೇ ಮೌಲ್ಯಗಳಾಗಿ ಮಾರ್ಪಾಡಾಗಿ ಸಮಾಜದ ಎಲ್ಲ ವ್ಯವಸ್ಥೆಗಳಲ್ಲಿ ವಿಜೃಂಭಿಸುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ...

  • ಕಲಬುರಗಿ: ಎಲ್ಲರಿಗೂ ಸಮಾನ ಹಕ್ಕು ಒದಗಿಸುವಂತ ಸಂವಿಧಾನ ರಚಿಸುವ ಮೂಲಕ ದೇಶಕ್ಕೆ ಹೊಸ ದಿಕ್ಕು ನೀಡಿದ ಡಾ| ಬಿ.ಆರ್‌. ಅಂಬೇಡ್ಕರ್‌ ಭಾರತೀಯರ ಸೂರ್ಯ ಎಂದು ಸುಲಫಲ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಿಂದುಳಿಯಲು ದುಡಿಯುವ ಜನರು ಗುಳೆ ಹೋಗುವುದೇ ಪ್ರಮುಖ ಕಾರಣವಾಗಿದೆ. ಜನರ ವಲಸೆ ತಪ್ಪಿಸಲು ಸಮಗ್ರ ಯೋಜನೆ ರೂಪಿಸಬೇಕೆಂದು...

  • ವಾಡಿ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆ ಬರುವ ವಿವಿಧ ಗ್ರಾಮಗಳ ತರಕಾರಿ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಮತ್ತು ಸ್ಥಳೀಯರು ನೀಡುವ ಕಿರಿಕಿರಿ ಪ್ರಸಂಗ...

  • ಕಲಬುರಗಿ: ಕೇಬಲ್‌, ಸೆಟಲೈಟ್‌ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್‌ ನ್ಯೂಸ್‌ ಮತ್ತು ಮನರಂಜನೆ ಟಿವಿ ಚಾನೆಲ್‌ಗ‌ಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ...

ಹೊಸ ಸೇರ್ಪಡೆ