ಅಂಬೇಡ್ಕರ್ ಜಯಂತಿ ಚಿಂತನೆಗೆ ವೇದಿಕೆಯಾಗಲಿ
Team Udayavani, May 16, 2022, 1:06 PM IST
ಶಹಾಬಾದ: ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕರ್ತೃ ಭಾರತರತ್ನ ಡಾ| ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸ ವಗಳು ಕಾಟಾಚಾರಕ್ಕೆ ನಡೆಯದೇ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳ ಚರ್ಚೆಗೆ ವೇದಿಕೆಯಾಗಬೇಕು ಎಂದು ಹೇಳಿದರು.
ತಾಲೂಕಿನ ತರನಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಸಂಸ ತರನಳ್ಳಿ ಗ್ರಾಮ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಡಾ| ಬಾಬಾಸಾಹೇಬ ಅಂಬೇಡ್ಕರ್ 131ನೇ ಜಯಂತ್ಯುತ್ಸವ ನಿಮಿತ್ತ ಆಯೋಜಿಸಲಾಗಿದ್ದ ಸಂವಿಧಾನ ರಕ್ಷಣೆಗಾಗಿ ಹಾಗೂ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸ ಪಡೆದ ಅಂಬೇಡ್ಕರ್ ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೆರಿಕ, ಇಂಗ್ಲೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನವನ್ನು ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.
ಕರ್ನಾಟಕ ರಾಜ್ಯ ದಸಂಸ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್ ಮಾತನಾಡಿ, ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸ ಬೇಕಾದವರು ಬೇಕಾಗಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡರಾದ ಅಜಿತ್‌ಕುಮಾರ ಪಾಟೀಲ, ರವಿ ಚವ್ಹಾಣ, ಬಿಜೆಪಿ ಮುಖಂಡ ಬಸವರಾಜ ಮದ್ರಿಕಿ, ದಸಂಸ ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂಘಟನಾ ಸಂಚಾಲಕ ತಿಪ್ಪಣ್ಣ ಧನ್ನೇಕರ್, ಭೀಮ ಆರ್ಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ ಹುಗ್ಗಿ, ಮಾಜಿ ಗ್ರಾಪಂ ಸದಸ್ಯರಾದ ವೀರಯ್ಯಸ್ವಾಮಿ ಟೆಂಗಳಿ, ಬಸವರಾಜ ಖಣದಾಳ, ಹಣಮಂತ ಕೊಂಡಯ್ಯ, ಅವಿನಾಶ ಕೊಂಡಯ್ಯ, ಶರಣು ಧನ್ನೇಕರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತ್ಯೇಕ ರಾಜ್ಯ ಉದಯ ಆದರೆ ನಾನಂತು ಸಿಎಂ ಆಗಲ್ಲ, ನನ್ನ ಮಗ ಆಗಬಹುದು: ಉಮೇಶ್ ಕತ್ತಿ
ಕಲಬುರ್ಗಿಯಲ್ಲಿ 74.50 ಲಕ್ಷ ರೂ. ಮೌಲ್ಯದ 745.410 ಕೆಜಿ ಗಾಂಜಾ ದಹನ
ಬೆನ್ನಟ್ಟಿದ ಬೀದಿನಾಯಿಗಳ ಹಿಂಡು : ತಪ್ಪಿಸಿಕೊಳ್ಳುವ ಭರದಲ್ಲಿ ಬಿದ್ದು ಪತ್ರಕರ್ತನಿಗೆ ಗಾಯ
ಗಾಣಗಾಪುರ ದೇವರ ಹೆಸರಿನಲ್ಲಿ ವಂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ಸಚಿವ ನಿರಾಣಿ
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಆಗುವುದರಲ್ಲಿ ಸಂದೇಹವಿಲ್ಲ: ಮುರುಗೇಶ್ ನಿರಾಣಿ