ಕುಮಾರಸ್ವಾಮಿ ಟೀಕಿಸಲು ಅನ್ಸಾರಿ-ಜಮೀರ್‌ಗಿಲ್ಲ ನೈತಿಕತೆ


Team Udayavani, Oct 19, 2021, 10:42 AM IST

5

ಕಲಬುರಗಿ: ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಲು ಸಿದ್ದರಾಮಯ್ಯ ಅವರ ಬೆಂಬಲಿಗ ಕಾಂಗ್ರೆಸ್‌ ಮುಖಂಡರಾದ ಇಕ್ಬಾಲ್‌ ಅನ್ಸಾರಿ, ಜಮೀರ್‌ ಅಹ್ಮದ್‌ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಜೆಡಿಎಸ್‌ ಮುಖಂಡ ನಾಸಿರ್‌ ಹುಸೇನ್‌ ಉಸ್ತಾದ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ಏನೂ ಸಹಾಯ ಮಾಡಿಲ್ಲ. ಡೀಲ್‌ ಮಾಸ್ಟರ್‌ ಎಂದು ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಆದರೆ, ಜಮೀರ್‌ ಅಹ್ಮದ್‌ ಅವರೇ ದೊಡ್ಡ ಡೀಲ್‌ ಮಾಸ್ಟರ್‌ ಆಗಿದ್ದಾರೆ. ಕುಮಾರಸ್ವಾಮಿ ಅವರಿಂದ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಅನ್ಯಾಯವಾಗಿದ್ದರೆ ಅವರೇಕೆ ಆಗಲೇ ಜೆಡಿಎಸ್‌ ಬಿಟ್ಟು ಬರಲಿಲ್ಲ ಎಂದು ಪ್ರಶ್ನಿಸಿದರು.

ಜಮೀರ್‌ ಅಹ್ಮದ್‌ ಜೆಡಿಎಸ್‌ನಿಂದ ಗೆಲುವು ಸಾ ಧಿಸಿದ್ದರು. ಇಕ್ಬಾಲ್‌ ಅನ್ಸಾರಿ ಕೂಡ ಜೆಡಿಎಸ್‌ ಪಕ್ಷದಿಂದಲೇ ಶಾಸಕರಾಗಿದ್ದು. ಆದರೆ, ಈಗ ಅಲ್ಪಸಂಖ್ಯಾತರಿಗೆ ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಯಾವ ಮುಖ ಹೊತ್ತು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಅನುದಾನವನ್ನು ಹೆಚ್ಚಳ ಮಾಡಿದ್ದೇ ಕುಮಾರಸ್ವಾಮಿ. ಹೀಗಾಗಿ ಕುಮಾರಸ್ವಾಮಿ ಬಗ್ಗೆ ಮಾತನಾಡಲು ಜಮೀರ್‌ ಅಹ್ಮದ್‌ ಮತ್ತು ಇಕ್ಬಾಲ್‌ ಅನ್ಸಾರಿ ಅನರ್ಹರು ಎಂದು ವಾಗ್ಧಾಳಿ ನಡೆಸಿದರು.

ಮುಸ್ಲಿಂ ಸಮುದಾಯ ಶೇ.18 ಜನಸಂಖ್ಯೆ ಹೊಂದಿದೆ. ಆದರೆ, ಇಲ್ಲಿಯವರೆಗೆ ಕಾಂಗ್ರೆಸ್‌ನವರು ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನೂ ಮಾಡಲು ಆಗಿಲ್ಲ. ಕಾಂಗ್ರೆಸ್‌ನಿಂದ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಒಬ್ಬರೂ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿಲ್ಲ. ಇದೇನಾ ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್‌ ಗೆ ಇರುವ ಕಾಳಜಿ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮೆರವಣಿಗೆಗೆ ತಡೆ; ಮುಸ್ಲಿಮರ ಆಕ್ರೋಶ

ಮೈತ್ರಿಗೆ ಕಾಂಗ್ರೆಸ್‌ ತಯಾರಿಲ್ಲ

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ತಯಾರಿಲ್ಲ. ಕಾಂಗ್ರೆಸ್‌ಗೆ ಕೋಮು ಶಕ್ತಿಗಳನ್ನು ಹೊರಗೆ ಇಡುವುದರಲ್ಲೂ ಆಸಕ್ತಿ ಇಲ್ಲ. ಬದಲಾಗಿ ಜೆಡಿಎಸ್‌-ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದರೆ ಅದನ್ನೇ ಕಾಂಗ್ರೆಸ್‌ ಬಳಸಿಕೊಂಡು ಜೆಡಿಎಸ್‌ ಬಗ್ಗೆ ಅಪಪ್ರಚಾರ ಮಾಡಿಕೊಂಡು ತಿರುಗಾಡುವ ಕುತಂತ್ರದಲ್ಲಿ ಇದೆ ಎಂದು ನಾಸಿರ್‌ ಹುಸೇನ್‌ ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸುರಾನ್‌ ಮತ್ತು ಮುಖಂಡರು ಇದ್ದರು.

ಜೆಡಿಎಸ್‌ಗೆ ಮೇಯರ್‌ ಸ್ಥಾನ ಬಿಟ್ಟುಕೊಡಬೇಕೆಂಬುದು ನಮ್ಮ ಬೇಡಿಕೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಯಾರು ಮುಂದೆ ಬರುತ್ತಾರೋ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಮೇಲಾಗಿ ನಾವು ಕಾಂಗ್ರೆಸ್‌ನೊಂದಿಗೆ ಮೈತ್ರಿಗೆ ಸಿದ್ಧರಿದ್ದೇವೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯನವರು ನಮ್ಮ ಪಕ್ಷದ ವರಿಷ್ಠರೊಂದಿಗೆ ಇಲ್ಲಿಯವರೆಗೂ ಮಾತುಕತೆ ಮಾಡಿಲ್ಲ. -ನಾಸಿರ್‌ ಹುಸೇನ್‌ ಉಸ್ತಾದ್‌ ಜೆಡಿಎಸ್‌ ಮುಖಂಡ

ಟಾಪ್ ನ್ಯೂಸ್

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯ

ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ

ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್‌’

ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್‌’

ಲಸಿಕೆ ಪಡೆಯದವರಿಗೆ ಸರಕಾರಿ ಸವಲತ್ತು ಕೊಡಬೇಡಿ

ಲಸಿಕೆ ಪಡೆಯದವರಿಗೆ ಸರಕಾರಿ ಸವಲತ್ತು ಕೊಡಬೇಡಿ

ಎಲ್ಲರೂ ಲಸಿಕೆ ಪಡೆಯುವುದೊಂದೇ ಪರಿಹಾರ

ಎಲ್ಲರೂ ಲಸಿಕೆ ಪಡೆಯುವುದೊಂದೇ ಪರಿಹಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪ

ಹೈಕಮಾಂಡ್ ನಿಂದ ಸಚಿವರ ರಹಸ್ಯ ವರದಿ ವಿಚಾರ ನನಗೆ ಗೊತ್ತಿಲ್ಲ: ಈಶ್ವರಪ್ಪ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

8bankloan

ಸಾಲ ಪಡೆಯಲು ಜನಜಂಗುಳಿ

7devolop

ವಿಜ್ಞಾನ ಬೆಳವಣಿಗೆಗೆ ಕೊಡುಗೆ ನೀಡಿ: ಅಗಸರ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಬೆಳ್ತಂಗಡಿ ಸುತ್ತಮುತ್ತ ಉತ್ತಮ ಮಳೆ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯ

ಲಸಿಕೆ ಅಭಿಯಾನ: ಸೌಲಭ್ಯಗಳಿಗೆ ಲಸಿಕೆ ಕಡ್ಡಾಯ

ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ

ವರ್ಷವಿಡೀ ಮಳೆ; ಎಚ್ಚರಿಕೆಯ ಕರೆಗಂಟೆ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ಐದು ವರ್ಷ ಬಳಿಕ ಮುಂಬಯಿಗೆ ಟೆಸ್ಟ್‌ ಆತಿಥ್ಯ

ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್‌’

ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.