ಕುಮಾರಸ್ವಾಮಿಯಂತೆ ದಿನಕ್ಕೆರಡು ಬಾರಿ ಕ್ಯಾಮರಾ ಮುಂದೆ ನಿಲ್ಲಲು ನಮಗಾಗದು: ಆರಗ ತಿರುಗೇಟು


Team Udayavani, Nov 20, 2021, 12:15 PM IST

araga jnanendra

ಕಲಬುರಗಿ: ಬೆಂಗಳೂರನಲ್ಲಿ ಇದ್ದರೆ ಬೆಂಗಳೂರಲ್ಲೇ ಇದ್ದಿರಿ ಎನ್ನುತ್ತೀರಿ, ಹಳ್ಳಿಕಡೆ ಹೋದರೆ ಶಂಕ ಊದುತ್ತಿದ್ದಾರೆ ಎನ್ನುತ್ತೀರಿ. ಜನರ ಕಷ್ಟ ಅರ್ಥ ಮಾಡಿಕೊಳ್ಳಲು ಈ ಪ್ರಯತ್ನ ಮಾಡಬಾರದಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಬಿಜೆಪಿಯ ಜನಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಹಾಗೆ ದಿನಕ್ಕೆರಡು ಸಲ ಕ್ಯಾಮರಾ ಬಂದು ನಿಲ್ಲಕ್ಕಾಗಲ್ಲ. ಜನರ ಸಮಸ್ಯೆ ಅಲಿಸಲು ಮುಂದಾದರೆ ಶಂಕ ಊದುತ್ತಿದ್ದಾರೆ ಎಂದು ಟೀಕೆ ಮಾಡಲಾಗುತ್ತಿದೆ ಎಂದರು.

ಬಿಟ್ ಕಾಯಿನ್ ಪ್ರಕರಣ ಬಯಲಿಗೆಳೆದಿದ್ದೆ ನಾವು.‌ 2018 ರಲ್ಲಿ ಶ್ರೀಕಿ ಕಾಂಗ್ರೆಸ್ ನವರ ಮಕ್ಕಳ ಜೊತೆಗಿದ್ದ.‌ ಆಗ ಚಾರ್ಜ ಶೀಟ್ ಹಾಕದೆ ಪ್ರಕರಣ ಮುಚ್ಚಿ ಹಾಕಿದ್ದು ಕಾಂಗ್ರೆಸ್ ಎಂದು ಟೀಕಿಸಿದ ಗೃಹ ಸಚಿವರು, ಕಾಂಗ್ರೆಸ್ ನವರ ಮಕ್ಕಳ ಜೊತೆಗೆ ಶ್ರೀಕಿ ಗೋವಾದ ಹೋಟೆಲ್ ನಲ್ಲಿದ್ದಾಗ ಅರೆಸ್ಟ್ ಮಾಡಲಾಗಿದೆ. ಆತನನ್ನು ಅರೆಸ್ಟ್ ಮಾಡಿ ವಿಚಾರಣೆ ಮಾಡಿದ್ದೇ ತಪ್ಪು ಎನ್ನುವ ರೀತಿ ಕಾಂಗ್ರೆಸ್ ಮಾತಾಡುತ್ತಿದೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು ಅಣಕಿಸಬೇಡಿ: ಸರ್ಕಾರಕ್ಕೆ ಎಚ್ ಡಿಕೆ ತರಾಟೆ

ಶ್ರೀಕಿಗೆ ಆತನಿಗೆ ನಿತ್ಯ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಕಿದ್ದೇ ಕಾಂಗ್ರೆಸ್ ಪಕ್ಷ. ಈಗ ಶಾಸಕ ಪ್ರಿಯಾಂಕ್ ಖರ್ಗೆ ಬಲು ಪಾಂಡಿತ್ಯ ಪ್ರದರ್ಶನ ಮಾಡುತ್ತಿದ್ದಾರೆ.‌ ಹೀಗಿದ್ದಲ್ಲಿ ಸಿಎಂ ಬೊಮ್ಮಾಯಿ ತಲೆದಂಡ ಯಾಕಾಗುತ್ತದೆ. ಏನಾದರೂ ಆಗುವುದಿದ್ದರೆ ಅದು ಕಾಂಗ್ರೆಸ್ ನವರ ತಲೆ ದಂಡವಾಗುತ್ತದೆ.‌ ಹಿಂದಿನ ಸರಕಾರ ಶ್ರೀಕಿಯನ್ನು ಏಕೆ ಬಂಧನ ಮಾಡಲಿಲ್ಲ. ಅವರು ಮುಚ್ಚಿ ಹಾಕಿದ್ದನ್ನು ನಾವು ಬಿಚ್ಚಿ ಇಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಒಟ್ಟಾರೆ ಬೊಮ್ಮಾಯಿ ಸರ್ಕಾರದಲ್ಲಿ ಕಾಂಗ್ರೆಸ್ ನಿರುದ್ಯೋಗಿಯಾಗಿದೆ. ಯಾವುದೇ ವಿಚಾರಗಳಿಲ್ಲ. ಹಾಗಾಗಿ ಅನಗತ್ಯವಾಗಿ ಮಾತಾಡುತ್ತಿದ್ದಾರೆ.‌ ಇದಕ್ಕೆ ಜನ ಕಿವಿಗೊಡುವುದಿಲ್ಲ‌ ಎಂದರು.‌

ಹಂಸಲೇಖ ವಿರುದ್ಧ ದೂರು ದಾಖಲೆ ವಿಚಾರ:  ಗೀತ ರಚನೆಕಾರ ಹಂಸಲೇಖ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಹಂಸಲೇಖ ಅವರಿಗೂ ಕಾನೂನಿನ ಕ್ರಮ ಕೈಗೊಳ್ಳಲಾಗುತ್ತದೆ. ಬಸವನಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವರ ಆರಗ ಜ್ಞಾನೇಂದ್ರ ತಿಳಿಸಿದರು.

ಟಾಪ್ ನ್ಯೂಸ್

1-fsfdf

ಹೆಚ್ಚುತ್ತಿರುವ ಮಂಕಿ ಪಾಕ್ಸ್ ಸೋಂಕಿನ ಪ್ರಮಾಣ : ಸಲಿಂಗಕಾಮಿಗಳಿಗೆ ಎಚ್ಚರಿಕೆ

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ 3 ಪಾಕಿಸ್ತಾನಿ ಉಗ್ರರ ಹತ್ಯೆ, ಓರ್ವ ಪೊಲೀಸ್ ಹುತಾತ್ಮ

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿ

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

ಬಿಸ್ಕೆಟ್‌ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್

1-fdfdsf

ತವರಿನಲ್ಲಿ ಫೈನಲ್ ಆಡಲು ಎದುರು ನೋಡುತ್ತಿದ್ದೇನೆ : ಹಾರ್ದಿಕ್‌ ಪಾಂಡ್ಯ

ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶ

ಭದ್ರತಾಲೋಪ? ತಮಿಳುನಾಡಿನಲ್ಲಿ ಬಿಜೆಪಿ ಮುಖಂಡನ ಹತ್ಯೆ, ಎಐಡಿಎಂಕೆ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dfdffds

ಬಿಜೆಪಿ ನಿಷ್ಠಾವಂತನಾದ ನನ್ನ ಸಚಿವ ಸ್ಥಾನ ಭದ್ರ: ಸಚಿವ ಪ್ರಭು ಚವ್ಹಾಣ್

dk shi 2

ಮಸೀದಿ ಕುರಿತು ತಾಂಬೂಲ ಪ್ರಶ್ನೆ; ಬಿಜೆಪಿ ಈ ರಾಜ್ಯವನ್ನು ಕೊಲ್ಲುತ್ತಿದೆ :ಡಿಕೆಶಿ

1-sdfsdf

ವಿಜಯೇಂದ್ರಗೆ ಭವಿಷ್ಯದಲ್ಲಿ ದೊಡ್ಡ ಅವಕಾಶ ಇದೆ: ಬಿಎಸ್ ವೈ ವಿಶ್ವಾಸ

b-c-nagesh

ಶಿಕ್ಷಣವನ್ನ‌ ಮಾತ್ರವಲ್ಲ, ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ : ಬಿ.ಸಿ.ನಾಗೇಶ್

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

ಜಿ.ಪಂ., ತಾ.ಪಂ. ಕ್ಷೇತ್ರ ಪುನರ್‌ ವಿಂಗಡಣೆ,ಮೀಸಲಾತಿ ನಿಗದಿ: ಹೈಕೋರ್ಟ್‌ನಿಂದ 12 ವಾರಗಳ ಗಡು

MUST WATCH

udayavani youtube

ಮಳಲಿ ಮಸೀದಿಯಲ್ಲಿ ದೇವರ ಸಾನಿಧ್ಯ ಗೋಚರ

udayavani youtube

‘ನನಗೆ ಏಳೂವರೆ ಶನಿ ಉಂಟು!’

udayavani youtube

SSLC ಸಾಧಕರಿಗೆ ಉದಯವಾಣಿ ಸನ್ಮಾನ

udayavani youtube

ಉಡುಪಿ : ಹಲವು ಸಂಶಯಗಳನ್ನು ಹುಟ್ಟು ಹಾಕಿದ ಯುವಜೋಡಿ ಸಾವು ಪ್ರಕರಣ

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

ಹೊಸ ಸೇರ್ಪಡೆ

1-sdfff

ಕೊರಟಗೆರೆ: ಕೆನರಾ ಬ್ಯಾಂಕಿನ ಸಿಸಿಟಿವಿಯೇ ಮಾಯ; ಕಳ್ಳತನಕ್ಕೆ ಯತ್ನ

ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

ಥಿಯೇಟರ್‌ಗೆ ಬರ್ತಿದ್ದಾನೆ “ಕಿರಿಕ್‌ ಶಂಕರ್‌ “

12

ಕಾಂಗ್ರೆಸ್‌ ಮುಕ್ತ ಭಾರತ ಜನತೆಯ ತೀರ್ಮಾನ

drown

ಶಾಶ್ವತ ಸ್ಥಳಾಂತರವೆಂಬ ಕನ್ನಡಿಯೊಳಗಿನ ಗಂಟು!

11

ರಾಜ್ಯ ಪೊಲೀಸ್‌ ವ್ಯವಸ್ಥೆ ಅತ್ಯಂತ ಬಲಿಷ್ಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.