ಶುಭ ಕಾರ್ಯಕ್ಕೆ ಪರವಾನಗಿ ಕೇಳಲು ಅಲೆದಾಟ

Team Udayavani, Apr 27, 2021, 4:52 PM IST

ದಸ,ಮನಗ್

ಆಳಂದ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಜಾರಿಗೆ ತಂದಿರುವ ನೈಟ್‌ ಕರ್ಫ್ಯೂ ಹಾಗೂ ವೀಕೆಂಡ್‌ ಕರ್ಫ್ಯೂಗೆ ಜನರು ಗೊಂದಲಕ್ಕೆ ಒಳಗಾಗಿ ಮದುವೆ ಸೇರಿದಂತೆ ಇನ್ನಿತರ ಕುಟುಂಬಗಳ ಶುಭ ಕಾರ್ಯಕ್ಕೆ ಅನುಮತಿ ಪಡೆಯಲು ಕಚೇರಿಗಳತ್ತ ಅಲೆದಾಡುತ್ತಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಏ. 21ರಿಂದ ರಾತ್ರಿ 9 ಗಂಟೆಯಿಂದ ಮೇ 4ರ ಬೆಳಗ್ಗೆ 6 ಗಂಟೆ ವರೆಗೆ ನೈಟ್‌ ಕರ್ಫ್ಯೂ, ಶುಕ್ರವಾರ ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವಿಕೆಂಡ್‌ ಕರ್ಫ್ಯೂ ಜಾರಿ ಮಾಡಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಮುಂದಾದ ಪ್ರಯುಕ್ತ ಜನ ಸಾಮಾನ್ಯರು ಗೊಂದಲಕ್ಕಿಡಾಗಿ ತಮ್ಮ ಎಲ್ಲ ಚಟುವಟಿಕೆಗಳನ್ನು ಮೊಟುಕುಗೊಳಿಸ ತೊಡಗಿದ್ದಾರೆ. ವರ್ಷದ ಏಪ್ರಿಲ್‌ ಮತ್ತು ಮೇ ತಿಂಗಳಲ್ಲೇ ಅತಿ ಹೆಚ್ಚಾಗಿ ನಡೆಯುವ ಮದುವೆ, ಕುಪ್ಪಸ, ನಿಶ್ಚಿತಾರ್ಥ ಕಾರ್ಯಕ್ರಮಗಳಿಗೆ ಮುಂದಾದವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತ ಆದೇಶಿಸಿರುವುದಿಂದ ವಧು-ವರನ ಕುಟುಂಬಸ್ಥರು ತಹಶೀಲ್ದಾರ್‌ ಕಚೇರಿಗೆ ವಿವಾಹ ಆಮಂತ್ರಣ ಪತ್ರಿಕೆಯೊಂದಿಗೆ ಅಲೆದಾಡುತ್ತಿದ್ದಾರೆ. ಹೀಗಾಗಿ ಜನದಟ್ಟಣೆಯೂ ಹೆಚ್ಚಾಗುತ್ತಿದೆ. ಮದುವೆ ಮಾಡಿಕೊಳ್ಳಲೇ ಬೇಕಾದಲ್ಲಿ ಸರ್ಕಾರದ ನಿಯಮಾವಳಿಯಂತೆ ತಾಲೂಕು ತಹಶೀಲ್ದಾರ್‌ ಅವರಿಂದ ಅನುಮತಿ ಪಡೆದು 50 ಜನರು ಪಾಲ್ಗೊಳ್ಳಲು ಮಾತ್ರ ಅನುಮತಿ ನೀಡಲಾಗುತ್ತಿದೆ. ಇದುವರೆಗೂ ತಾಲೂಕಿನಲ್ಲಿ ಮದುವೆ ಮಾಡಿಕೊಳ್ಳಲು 120 ಅರ್ಜಿ ಸಲ್ಲಿಕೆಯಾಗಿವೆ.

ಎಲ್ಲ ಅರ್ಜಿಗಳಿಗೆ ತಹಶೀಲ್ದಾರರು ನಿಯಮಾವಳಿಯಂತೆ ವಿವಾಹ ಕೈಗೊಳ್ಳಬೇಕು ಎಂದು ಷರತ್ತು ವಿಧಿ ಸಿ, ಅನುಮತಿ ನೀಡಿದ್ದಾರೆ. ಇನ್ನು ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿದಿದೆ. ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಜೋಡಿಗಳ ಕನಸು ಕಮರಿ ಹೋಗಲು ನೈಟ್‌ ಕರ್ಫ್ಯೂ, ವಿಕೆಂಡ್‌ ಕರ್ಫ್ಯೂ ಅಡ್ಡಿಯಾಗಿದ್ದರಿಂದ ವಧು-ವರರ ಎರಡು ಕುಟುಂಬಸ್ಥರಿಗೆ ದಿಕ್ಕು ತೋಚದಾಗಿದೆ.

ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರ ಕುಟುಂಬಸ್ಥರಿಗೆ ದಂಡ ವಿಧಿಸಲಾಗಿದೆ. ಇದರಿಂದಾಗಿ ಅನೇಕರು ಮದುವೆಗಳನ್ನು ಮುಂದೂಡುವ ಯೋಚನೆಯಲ್ಲಿದ್ದಾರೆ. ಶುಭ ಸಮಾರಂಭಗಳಿಗೆ ಅನುಮತಿ ಪಡೆಯಲು ಮುಂದಾಗುವ ಜನರಿಗೆ ದಾಖಲೆ ಸಂಗ್ರಹ, ಸಾರಿಗೆ ವೆಚ್ಚ ಮತ್ತು ಮಧ್ಯವರ್ತಿಗಳಿಗೆ ಹಣ ಹೀಗೆ ಜೇಬಿಗೆ ಕತ್ತರಿಯೂ ಬೀಳತೊಡಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್​ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ

ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್​ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ

ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್‌ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ

ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್‌ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

astrology

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ 

ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ 

ಉತ್ತರ ನೀಡಲು ಮೂರು ವಾರಗಳ ಅವಕಾಶ: 18 ದಿನಗಳಲ್ಲಿ 8 ಬಾರಿ ಲೋಪ

ಉತ್ತರ ನೀಡಲು ಮೂರು ವಾರಗಳ ಅವಕಾಶ: 18 ದಿನಗಳಲ್ಲಿ 8 ಬಾರಿ ಲೋಪ

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಆ್ಯಂಕರ್‌ ಅರ್ಜಿ ವಿಚಾರಣೆ

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಆ್ಯಂಕರ್‌ ಅರ್ಜಿ ವಿಚಾರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಈಶ್ವರಪ್ಪನವರ ಬಾಯಿ ಬಡಕುತನದಿಂದಲೇ ಸಚಿವ ಸ್ಥಾನ ಹೋಗಿರುವುದು: ಪ್ರಿಯಾಂಕ್ ಖರ್ಗೆ

ಈಶ್ವರಪ್ಪನವರ ಬಾಯಿ ಬಡಕುತನದಿಂದಲೇ ಸಚಿವ ಸ್ಥಾನ ಹೋಗಿರುವುದು: ಪ್ರಿಯಾಂಕ್ ಖರ್ಗೆ

1-sfsff

ಶಿಕ್ಷಕರ ಕಡ್ಡಾಯ ಹಾಜರಾತಿಗೆ ಹೊಸ ಪದ್ದತಿ: ಸಚಿವ ಬಿ.ಸಿ.ನಾಗೇಶ್

ವಾಡಿ : ವಿಶ್ವ ಗಮನ ಸೆಳೆಯಲಿದೆ ಸನ್ನತಿ ಬೌದ್ಧ ನೆಲೆ, ಅಭಿವೃದ್ಧಿಗೆ 3.5 ಕೋಟಿ ಅನುದಾನ

ವಾಡಿ : ವಿಶ್ವ ಗಮನ ಸೆಳೆಯಲಿದೆ ಸನ್ನತಿ ಬೌದ್ಧ ನೆಲೆ, ಅಭಿವೃದ್ಧಿಗೆ 3.5 ಕೋಟಿ ಅನುದಾನ

13rain

ಮಳೆಗೆ ತುಂಬಿದ ರಸ್ತೆ ತಗ್ಗು; ವಾಹನ ಸಂಚಾರ ಅಸ್ತವ್ಯಸ್ಥ

12EVM

ಶಾಲಾ ಸಂಸತ್ತು ಚುನಾವಣೆಗೆ ಇವಿಎಂ ಬಳಕೆ

MUST WATCH

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

ಹೊಸ ಸೇರ್ಪಡೆ

ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್​ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ

ಅಡುಗೆ ಎಣ್ಣೆ ಬೆಲೆ ಪ್ರತಿ ಲೀಟರ್​ಗೆ 10 ರೂ.ಗಳಿಂದ 15 ರೂ. ವರೆಗೆ ಇಳಿಕೆ

ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್‌ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ

ಡಿಕೆಶಿ ಶಕ್ತಿ ಪ್ರದರ್ಶನ? ನಾನು ಹೈಕಮಾಂಡ್‌ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದ ಡಿಕೆಶಿ

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ: ಬೋರಿಸ್‌ ಜಾನ್ಸನ್‌

astrology

ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ 

ಕೋವಿಡ್ ಲಸಿಕೆಯ 2ನೇ, ಮುನ್ನೆಚ್ಚರಿಕಾ ಡೋಸ್ ನಡುವಿನ ಅಂತರ 6 ತಿಂಗಳಿಗೆ ಇಳಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.