ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ: ಧರ್ಮದೇಟು

Team Udayavani, Dec 29, 2017, 11:02 AM IST

ಶಹಾಬಾದ: ನಗರದ (ರಾಮಘಡ) ಆಶ್ರಯ ಕಾಲೋನಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ರಯ ಕಾಲೋನಿ ನಿವಾಸಿ ಹೀರಾಲಾಲ್‌ ಲಕ್ಷ್ಮಣ ಎನ್ನುವಾತ ಪಕ್ಕದ
ಮನೆಯ ಅಪ್ರಾಪ್ತ ಬಾಲಕಿಯನ್ನು ಮನೆಯ ಪಕ್ಕದ ಖಾಲಿ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ.

ಬಾಲಕಿ ಕಿರುಚಿಕೊಂಡಾಗ ಸ್ಥಳೀಯರು ಸ್ಥಳಕ್ಕೆ ಹೋಗಿ ಬಾಲಕಿಯನ್ನು ಕಾಪಾಡಿದ್ದು, ಯುವಕನಿಗೆ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗಾಗಲೆ ಮದುವೆಯಾಗಿರುವ ಹೀರಾಲಾಲ್‌ನ ಪತ್ನಿ ಗಂಡನನ್ನು ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಕ್ಕೆ ಆರೋಪಿಯ ಮೇಲೆ ಪೋಕ್ಸೋ ಕಾಯ್ದೆ ಹಾಗೂ ದಲಿತ ಬಾಲಕಿ ಮೇಲೆ ದೌರ್ಜನ್ಯ ಪ್ರಕರಣವನ್ನು ಡಿವೈಎಸ್‌ಪಿ ಕೆ.ಬಸವರಾಜ ಮಾರ್ಗದರ್ಶನದಲ್ಲಿ, ಪಿಐ ಅಸ್ಲಂ ಭಾಷಾ ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ