Udayavni Special

ಅತ್ಯಾಚಾರಕ್ಕೆ ಯತ್ನ ಪ್ರಕರಣ-ಜಿಮ್ಸ್‌ನಿರ್ಲಕ್ಷ್ಯಕ್ಕೆಆಕ್ರೋಶ

Team Udayavani, Jun 10, 2021, 8:24 PM IST

dfgfdfdfgfrd

ಕಲಬುರಗಿ: ನಗರದ ಜಿಮ್ಸ್‌ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳಾ ರೋಗಿಗಳ ಬಳಿಗೆ ಆರೋಪಿ ತೆರಳುವಷ್ಟರ ಮಟ್ಟಿಗೆ ಆಸ್ಪತ್ರೆಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದ್ದು ಹೇಗೆ ಎಂದು ಹಲವರು ಕಿಡಿಕಾರಿದ್ದಾರೆ.

ಜಿಮ್ಸ್‌ನಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಮೇಲೆ ರಾತ್ರಿ 12 ಗಂಟೆ ಸುಮಾರಿಗೆ ಪೇಮಸಾಗರ ಅಲಿಯಾಸ್‌ ಪಿಂಟು ಎನ್ನುವಾತ ಅತ್ಯಾಚಾರಕ್ಕೆ ಯತ್ನಿಸಿದ್ದ. ರೋಗಿಗಳ ಮೃತ ದೇಹಗಳನ್ನು ಶವಗಾರಕ್ಕೆ ಸಾಗಿಸುವ ಆಂಬ್ಯುಲೆನ್ಸ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಬೆಡ್‌ ಮೇಲೆ ಮಲಗಿಕೊಂಡಿದ್ದ ಮಹಿಳಾ ರೋಗಿಯ ಬಟ್ಟೆ, ಡೈಪರ್‌ ಹಾಗೂ ಯೂರಿನ್‌ ಪೈಪ್‌ ಕಿತ್ತು ಹಾಕಿ ಬಲಾತ್ಕಾರಕ್ಕೆ ಮುಂದಾಗಿದ್ದ. ಅಷ್ಟರಲ್ಲೇ ಆಕೆ ಎಚ್ಚರಗೊಂಡು ಕಿರುಚಿದ್ದಳು. ಆಗ ಅಕ್ಕ-ಪಕ್ಕದ ರೋಗಿಗಳಿಗೂ ಎಚ್ಚರವಾಗಿದ್ದರಿಂದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಸಮಯದಲ್ಲಿ ಪಿಂಟು ಕುಡಿದ ನಶೆಯಲ್ಲಿದ್ದ ಎನ್ನಲಾಗಿದೆ. ಘಟನೆ ತಿಳಿಯುತ್ತಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ಆವರಣದಲ್ಲಿ ಮಲಗಿದ್ದ ಸಂಬಂಧಿಕರು ಕ್ಷಣ ಕಾಲ ಬೆಚ್ಚಿ ಬಿದ್ದರು. ಮಹಿಳೆಯ ಕುಟುಂಬಸ್ಥರು ಮಾಹಿತಿ ಅರಿತು ಆತಂಕದಿಂದಲೇ ಆಸ್ಪತ್ರೆಗೆ ದೌಡಾಯಿಸಿದರು. ಅಲ್ಲದೇ, ಕೆಲ ಸಂಘ-ಸಂಸ್ಥೆಗಳ ಕಾರ್ಯಕರ್ತರು ರಾತ್ರಿಯೇ ಆಸ್ಪತ್ರೆಗೆ ಬಂದರು. ಅಲ್ಲಿಂದ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಬ್ರಹ್ಮಪುರ ಠಾಣೆ ಇನ್‌ಸ್ಪೆಕ್ಟರ್‌ ಕಪಿಲ್‌ದೇವ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ಆಗಮಿಸಿದರು. ಘಟನೆ ಬಗ್ಗೆ ವಿವರಣೆ ಪಡೆದ ಪೊಲೀಸರು ರಾತ್ರಿಯೇ ಆರೋಪಿಯನ್ನು ಬಂಧಿಸಿದರು.

ಆದರೆ, ಘಟನೆಯಿಂದ ಜಿಲ್ಲೆಯ ಪ್ರಮುಖ ಆಸ್ಪತ್ರೆಯಲ್ಲೇ ಮಹಿಳಾ ರೋಗಿಗಳಿಗೆ ರಕ್ಷಣೆವೇ ಇಲ್ಲವೇ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಜಿಮ್ಸ್‌ ಆಸ್ಪತ್ರೆ ಅವ್ಯವಸ್ಥೆ ಅಗರವಾಗಿದೆ. ಮೊದಲಿನಿಂದಲೂ ರೋಗಿಗಳ ಬಗ್ಗೆ ಆಸ್ಪತ್ರೆಯವರು ಬೇಜಬಾವಾªರಿಯಿಂದ ವರ್ತಿಸುತ್ತಾರೆ. ಒಳಗಡೆ ರೋಗಿಗಳ ಆರೋಗ್ಯ ಸ್ಥಿತಿ-ಗತಿ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ.

ರೋಗಿಗಳ ಸಂಬಂಧಿಗಳು ಒಳಹೋಗದಂತೆ ತಡೆಯಲು ಬೌನ್ಸರ್‌ಗಳನ್ನು ನೇಮಿಸಲಾಗಿದೆ. ರಾತ್ರಿ ವೇಳೆ ಇಂತಹ ಹೀನ ಘಟನೆ ನಡೆಯುತ್ತಿದ್ದಾಗ ಆಸ್ಪತ್ರೆಯ ಸಿಬ್ಬಂದಿ ಮತ್ತು ಬೌನ್ಸರ್‌ಗಳು ಎಲ್ಲಿದ್ದರು? ಏನು ಮಾಡುತ್ತಿದ್ದರು? ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಜ್‌ ಖತೀಬ್‌ ಪ್ರಶ್ನೆ ಮಾಡಿದ್ದಾರೆ. ಮಹಿಳಾ ಸಂಘಟನೆ ಪ್ರತಿಭಟನೆ: ಕೊರೊನಾ ಸೋಂಕಿತೆ ಮೇಲೆ ಅತ್ಯಾಚಾರ ಯತ್ನ ಪ್ರಕರಣ ಖಂಡಿಸಿ ಹೋರಾಟಗಾರ್ತಿ ಕೆ.ನೀಲಾ ನೇತೃತ್ವದಲ್ಲಿ ಜನವಾದಿ ಮಹಿಳೆ ಸಂಘಟನೆಯಿಂದ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ಯತ್ನ ನಡೆದಿರುವುದು ತೀರ ಆತಂಕಕಾರಿ ಸಂಗತಿಯಾಗಿದೆ. ಸುರಕ್ಷಿತ ಕ್ರಮ ಕಲ್ಪಿಸುವಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಕೆ.ನೀಲಾ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಡಳಿತ ತಕ್ಷಣವೇ ಎಚ್ಚೆತ್ತುಕೊಂಡು ಜಿಮ್ಸ್‌ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.

ಟಾಪ್ ನ್ಯೂಸ್

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

ನಾಯಿಗೂ ತೂಕ ಇಳಿಕೆ ಶಸ್ತ್ರಚಿಕಿತ್ಸೆ :  ದೇಶದಲ್ಲಿಯೇ ಇಂಥ ಆಪರೇಷನ್‌ ಇದೇ ಮೊದಲು

568

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

zsdfghn zxcvbvcxz

ಗ್ರಾಪಂ ಮಟ್ಟದಲ್ಲೇ ಪರಿಹಾರ ಅರ್ಜಿ ಸಲ್ಲಿಕೆಗೆ ಅವಕಾಶ : ಡಿಸಿ ಜೋತ್ಸ್ನಾ 

eರತಯುಇಉಯತರೆ

ವಿಪತ್ತು ನಿರ್ವಹಣೆಗೆ ಸಜ್ಜಾಗಿ: ಡಾ| ಜಾಧವ್

rtytrertytrertytre

ನುಗ್ಗೆ ಬೆಳೆದ ರೈತನಿಗೆ ಆದಾಯ ಖಾತ್ರಿ

ಹಳೆಯ ವೈಷಮ್ಯ ಶಂಕೆ: ಕಲಬುರಗಿ ಮುಖ್ಯರಸ್ತೆಯಲ್ಲಿ ಯುವಕನ ಭೀಕರ ಹತ್ಯೆ

ಹಳೆಯ ವೈಷಮ್ಯ ಶಂಕೆ: ಕಲಬುರಗಿ ಮುಖ್ಯರಸ್ತೆಯಲ್ಲಿ ಯುವಕನ ಭೀಕರ ಹತ್ಯೆ

ಕಲಬುರಗಿ: ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ ಸಾವು

ಕಲಬುರಗಿ: ಅತ್ಯಾಚಾರ ಯತ್ನಕ್ಕೊಳಾಗಿದ್ದ ಕೋವಿಡ್ ಸೋಂಕಿತೆ ಸಾವು

MUST WATCH

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯಬ್ಬರ , ತುಂಬಿ ಹರಿಯುತ್ತಿರುವ ಹೇಮಾವತಿ ನದಿ

ಹೊಸ ಸೇರ್ಪಡೆ

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಎಲ್‌ಜೆಪಿಗೆ ಲೈಂಗಿಕ ಕಿರುಕುಳದ ಸವಾಲು

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಕಾಂಗ್ರೆಸ್‌ ಸಂಸದ ಮುಕುಲ್‌ ರಾಯ್‌ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಪ್ಪು ಮಾಹಿತಿ ನೀಡಿರುವ ಆರೋಪ ರಾಮ್‌ದೇವ್‌ ವಿರುದ್ಧ FIR

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.