ಬಸವಣ್ಣ-ಅಂಬೇಡ್ಕರ್‌ ದೇಶದ ದೊಡ್ಡ ಆಸ್ತಿ

Team Udayavani, Mar 19, 2019, 6:39 AM IST

ಕಲಬುರಗಿ: ಭಾರತದಲ್ಲಿ ಸಂವಿಧಾನದ ಮೂಲಕ ಬಾಬಾಸಾಹೇಬ ಡಾ| ಅಂಬೇಡ್ಕರ್‌ರವರು ಸರ್ವ ಸಮಾನತೆಗೆ ಮುಂದಾದರೆ, ವಿಶ್ವಗುರು ಬಸವಣ್ಣ ನವರು ತಮ್ಮ ವಚನ ಸಾಹಿತ್ಯದಿಂದ ಈ ಸಮಾಜದಲ್ಲಿ ಪರಿವರ್ತನೆಗೆ ಪ್ರಯತ್ನಿಸಿದರು. ವಿಶ್ವಗುರು ಬಸವಣ್ಣ ಮತ್ತು ಸಂವಿಧಾನಶಿಲ್ಪಿ ಬಾಬಾಸಾಹೇಬ ಡಾ| ಅಂಬೇಡ್ಕರ್‌ರವರು ಈ ದೇಶದ ದೊಡ್ಡ ಆಸ್ತಿಯಾಗಿದ್ದಾರೆ ಎಂದು ವಿಜಯಕುಮಾರ ತೇಗಲತಿಪ್ಪಿ ತಿಳಿಸಿದರು.

ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬುದ್ಧ, ಬಸವ, ಡಾ| ಅಂಬೇಡ್ಕರ್‌ ವಿಚಾರ ವೇದಿಕೆಯು ಕಾಲೇಜಿನ ಪ್ರಾಂಗಣದಲ್ಲಿ ಆಯೋಜಿಸಿದ “ಸಾಮಾಜಿಕ ನ್ಯಾಯಕ್ಕೆ ಬಸವಣ್ಣ ಮತ್ತು ಡಾ| ಅಂಬೇಡ್ಕರ್‌ ರವರ ಕೊಡುಗೆ’ ಕುರಿತ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಧುತ್ತರಗಾಂವ ವೀರೇಶ್ವರ ಪುಣ್ಯಾಶ್ರಮದ ಪೂಜ್ಯ ಕೋರಣೇಶ್ವರ ಮಹಾಸ್ವಾಮಿಗಳು ಸಮಾರಂಭ ಉದ್ಘಾಟಿಸಿ, 12ನೇ ಶತಮಾನದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಅಪ್ಪಿ ಮಾನವೀಯ ಮೌಲ್ಯಗಳನ್ನು ಒಪ್ಪಿ, ಕಾಯಕ, ದಾಸೋಹದ ಪರಿಕಲ್ಪನೆಯನ್ನು ತಮ್ಮ ವಚನಗಳ ಮೂಲಕ ಜನಮನಕ್ಕೆ ತಲುಪಿಸುವಲ್ಲಿ ವಿಶ್ವಗುರು ಬಸವಣ್ಣ ನವರು ಪ್ರಯತ್ನಿಸಿದ್ದರೆ, ಹಾಗೆಯೇ 20ನೇ ಶತಮಾನದಲ್ಲಿ ಭಾರತದ ಸಂವಿಧಾನ ರಚಿಸುವ ಮೂಲಕ ಶೋಷಿತ ಜನಾಂಗದ ಉಜ್ವಲ ಭವಿಷ್ಯಕ್ಕಾಗಿ ಸರ್ವ ಸಮಾನತೆಯ ಸೂತ್ರಗಳನ್ನು ನೀಡಿದ ಮಹಾನಾಯಕ ಡಾ| ಅಂಬೇಡ್ಕರ್‌ರವರು ಎಂದರು.

ಕಾಲೇಜಿನ ಪ್ರಾಂಶುಪಾಲ್‌ ಪ್ರೋ| ಖಂಡೇರಾವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಚಾಲಕರಾದ ಪ್ರೋ| ಬಿ.ಎಸ್‌. ಬಿರಾದಾರ, ಡಾ| ಪದ್ಮರಾಜ ರಾಸಣಗಿ, ಪ್ರೋ| ಬಿರಾದಾರ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಪ್ರಾಧ್ಯಾಪಕರಾದ ಡಾ| ಜ್ಯೋತಿ ಬಳಿಗಾರ ಸೇರಿದಂತೆ ಇತರರಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ