ಬೇಂದ್ರೆ ಸಾಹಿತ್ಯ ನೋವಿನಲ್ಲಿ ಬೆಂದಿದ್ದು: ಡಾ|ಪಂಡಿತ್‌

ನರಬಲಿ ಕೃತಿ ಪ್ರಕಟಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ ಬೇಂದ್ರೆ, ಬಡತನವನ್ನೇ ಉಂಡು ಬೆಳೆದ ಕವಿ.

Team Udayavani, Sep 28, 2022, 6:20 PM IST

ಬೇಂದ್ರೆ ಸಾಹಿತ್ಯ ನೋವಿನಲ್ಲಿ ಬೆಂದಿದ್ದು: ಡಾ|ಪಂಡಿತ್‌

ವಾಡಿ: ಬದುಕಿನುದ್ದಕ್ಕೂ ಕಷ್ಟ-ನೋವುಗಳ ಜತೆಗೆ ಬೆಂದ ದ.ರಾ.ಬೇಂದ್ರೆಯವರು ಹೆತ್ತ ಮಕ್ಕಳ ಸಾವಿನ ಮೇಲೂ ಸಾಹಿತ್ಯ ಬರೆದ ಗಟ್ಟಿ ಜೀವ. ಮನುಷ್ಯ ಸಮಾಜದಲ್ಲಿ ಸಾಮರಸ್ಯ ಮೂಡಬೇಕು ಎಂಬ ಹಂಬಲ ಹೊತ್ತ ಕವಿ ಹೃದಯಿ ಎಂದು ಚಿತ್ತಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ
ಸಹಾಯಕ ಪ್ರಾಧ್ಯಾಪಕ ಡಾ|ಪಂಡಿತ್‌ ಬಿ.ಕೆ ಹೇಳಿದರು.

ಪಟ್ಟಣದ ವಿ.ಪಿ.ನಾಯಕ ಪದವಿ ಮಹಾ ವಿದ್ಯಾಲಯದಲ್ಲಿ ಕಸಾಪ ಚಿತ್ತಾಪುರ ತಾಲೂಕು ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ “ಜ್ಞಾನಪೀಠ ಗಾರುಡಿಗರು’ ಶಿರ್ಷಿಕೆಯಡಿಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ದ.ರಾ.ಬೇಂದ್ರೆ ಅವರ ಬದುಕು ಬರಹ ಕುರಿತು ವಿಚಾರ ಮಂಡಿಸಿ ಅವರು ಮಾತನಾಡಿದರು.

ನರಬಲಿ ಕೃತಿ ಪ್ರಕಟಿಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದ ಬೇಂದ್ರೆ, ಬಡತನವನ್ನೇ ಉಂಡು ಬೆಳೆದ ಕವಿ. ಮನೆತನದ ಮಾತು ಮರಾಠಿಯಾದರೂ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ತಂದು ಕೊಟ್ಟ ಶ್ರೇಷ್ಠ ಕವಿ ಎಂದು ಸ್ಮರಿಸಿದರು.

ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿ, ಅಕ್ಟೋಬರ್‌ ಕೊನೆ ವಾರದಲ್ಲಿ ನಾಲ್ಕನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸ ಲಾಗುತ್ತಿದೆ. ಸಮ್ಮೇಳನ ನಿಮಿತ್ತ ಕವನ ಸಂಕಲನ ಹೊರ ತರಲಾಗುತ್ತಿದ್ದು, ಚಿತ್ತಾಪುರ ತಾಲೂಕಿನ ಆಸಕ್ತ ಬರಹಗಾರರು ತಮ್ಮ ಸ್ವರಚಿತ ಕವಿತೆಗಳನ್ನು ಕಳಿಸಿಕೊಡಬೇಕು ಎಂದು ಹೇಳಿದರು.

ವಿ.ಪಿ.ನಾಯಕ ಕಾಲೇಜಿನ ಕನ್ನಡ ಉಪನ್ಯಾಸಕ ಧನೇಶ ಕುಲಕರ್ಣಿ ಮಾತನಾಡಿದರು. ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಪ್ರೇಮಿ ಸದಾಶಿವ ಕಟ್ಟಿಮನಿ, ಪುರಸಭೆ ಮಾಜಿ ಸದಸ್ಯ ಸೂರ್ಯಕಾಂತ ರದ್ದೇವಾಡಿ ಅತಿಥಿಗಳಾಗಿದ್ದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಮುಡ ಬೂಳಕರ, ಚಂದ್ರು ಕರಣಿಕ, ಬಸವರಾಜ ಕೇಶ್ವಾರ, ಹುಸನಪ್ಪಾ ಮಗದಂಪೂರ, ಅಶೋಕ ರಾಠೊಡ, ರವಿ ಕೋಳಕೂರ, ಪೃಥ್ವಿರಾಜ ಸಾಗರ ಇನ್ನಿತರರು ಪಾಲ್ಗೊಂಡಿದ್ದರು. ಉಪನ್ಯಾಸಕ ಗೋಪಾಲ ರಾಠೊಡ ಸ್ವಾಗತಿಸಿದರು. ದಯಾನಂದ ಖಜೂರಿ ನಿರೂಪಿಸಿದರು. ವಿಕ್ರಮ ನಿಂಬರ್ಗಾ ವಂದಿಸಿದರು.

ಟಾಪ್ ನ್ಯೂಸ್

2

ಸುರತ್ಕಲ್: ಟೋಲ್‌ ಗೇಟ್‌ ಬಂದ್;‌ ಉದ್ಯೋಗ ವಂಚಿತರಾದ 50ಕ್ಕೂ ಅಧಿಕ ಮಂದಿ

nia case of manglore

ಮಂಗಳೂರು ಸ್ಪೋಟ ಪ್ರಕರಣ‌: ಅಧಿಕೃತವಾಗಿ ಎನ್ ಐ ಎ ಗೆ ಪ್ರಕರಣ‌ ಹಸ್ತಾಂತರ

street dogs news

ಬೀದಿ ನಾಯಿಗಳ ದಾಳಿ: 4 ವರ್ಷದ ಮಗು ಬಲಿ !

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

g 20 india lead

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

kerala high court

ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯದ ಮಿತಿಯಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ

ನನ್ನ ಮತ ಮಾರಾಟಕ್ಕಿಲ್ಲ ಅಭಿಯಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ

ಸಿಯುಕೆನಲ್ಲಿ ವಿದ್ಯಾರ್ಥಿಗಳು- ಭದ್ರತಾ ಸಿಬ್ಬಂದಿ ಮಧ್ಯೆ ರಂಪಾಟ; ವಿದ್ಯಾರ್ಥಿ ಮೇಲೆ ಹಲ್ಲೆ

ಸಿಯುಕೆನಲ್ಲಿ ವಿದ್ಯಾರ್ಥಿಗಳು- ಭದ್ರತಾ ಸಿಬ್ಬಂದಿ ಮಧ್ಯೆ ರಂಪಾಟ; ವಿದ್ಯಾರ್ಥಿ ಮೇಲೆ ಹಲ್ಲೆ

ಡಿ. 2ರಂದು ನಟ ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ಡಿ. 2ರಂದು ನಟ ರಿಷಬ್‌ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಅವಶ್ಯ: ರೇವಣಸಿದ್ಧಯ್ಯ

ವಿದ್ಯಾರ್ಥಿಗಳಿಗೆ ಸಂಗೀತ ಜ್ಞಾನ ಅವಶ್ಯ: ರೇವಣಸಿದ್ಧಯ್ಯ

ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

ಚಿತ್ತಾಪುರ: 5 ವರ್ಷದ ಬಾಲಕಿ ಮೇಲೆ 40 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

2

ಸುರತ್ಕಲ್: ಟೋಲ್‌ ಗೇಟ್‌ ಬಂದ್;‌ ಉದ್ಯೋಗ ವಂಚಿತರಾದ 50ಕ್ಕೂ ಅಧಿಕ ಮಂದಿ

1

ಗಂಗಾವತಿ: ಸ್ವಾಭಿಮಾನದ ಸಂಕೇತವೇ ಡಾ.ಅಂಬೇಡ್ಕರ್; ಶೋಷಿತರೆಲ್ಲ ಶಿಕ್ಷಣವಂತರಾಗಬೇಕು

nia case of manglore

ಮಂಗಳೂರು ಸ್ಪೋಟ ಪ್ರಕರಣ‌: ಅಧಿಕೃತವಾಗಿ ಎನ್ ಐ ಎ ಗೆ ಪ್ರಕರಣ‌ ಹಸ್ತಾಂತರ

street dogs news

ಬೀದಿ ನಾಯಿಗಳ ದಾಳಿ: 4 ವರ್ಷದ ಮಗು ಬಲಿ !

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

ಇಂದಿನಿಂದ ಏನೇನು ಬದಲಾವಣೆ? ಎಲ್ಲಿದೆ ಮಾಹಿತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.