ಎಸಿಬಿ ಬಲೆಗೆ ಬಿಇಓ ಕಚೇರಿ ಎಫ್ ಡಿಎ
Team Udayavani, Jun 3, 2021, 11:23 PM IST
ಸಾಂದರ್ಭಿಕ ಚಿತ್ರ
ಕಲಬುರಗಿ: ನಿವೃತ್ತಿ ನೌಕರನ ಹಕ್ಕಿನ ರಜೆಯ ಐದು ತಿಂಗಳಿನ ವೇತನ ಬಿಲ್ ಮಾಡಲು 20 ಸಾವಿರ ಲಂಚ ಪಡೆಯುತ್ತಿದ್ದಾಗ ಜಿಲ್ಲೆಯ ಆಳಂದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಕಚೇರಿಯ ಎಫ್ ಡಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಫ್ ಡಿಎ ಹುಸೇನ್ ಭಾಷಾ ಎನ್ನುವರೇ 20 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕು ಬಿದ್ದಿದ್ದಾರೆ.
ನಿವೃತ್ತಿ ನೌಕರ ಸಂಗಪ್ಪ ದೇವಣಿ ಅವರ ಐದು ತಿಂಗಳಿನ ಹಕ್ಕಿನ ರಜೆಯ ವೇತನ ಮಂಜೂರಾತಿ ಮಾಡಲು ಎಫ್ಡಿಎ ಹುಸೇನ್ ಭಾಷಾ ಲಂಚ ಕೇಳಿದ್ದರು. ಗುರುವಾರ ಜೂ. 3ರಂದು ಸಂಜೆ ಕಲಬುರಗಿ ನಗರದ ಖಾಸಗಿ ಹೊಟೇಲ್ ಬಳಿ ಸಂಗಪ್ಪ ಅವರ ಪುತ್ರ ದತ್ತುಕುಮಾರ ಎನ್ನುವರಿಂದ ಇಪ್ಪತ್ತು ಸಾವಿರ ಲಂಚ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ನಡೆಸಿದ್ದಾರೆ.
ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ ಮಾರ್ಗದರ್ಶನದಲ್ಲಿ ಎಸಿಬಿ ಡಿಎಸ್ಪಿ ವಿರೇಶ ಕರಡಿಗುಡ್ಡ ನೇತೃತ್ವದಲ್ಲಿ ದಾಳಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು