ಗೆಳೆಯರ ಎದುರೇ ಈಜುತ್ತಲೇ ಪ್ರಾಣಬಿಟ್ಟ ಯುವಕ: ಸಾವಿನ ಕ್ಷಣ ವಿಡಿಯೋದಲ್ಲಿ ಸೆರೆ

Team Udayavani, Nov 16, 2019, 10:27 AM IST

ಕಲಬುರಗಿ: ಈಜಲು ತೆರಳಿದ ಯುವಕನೊಬ್ಬ ಗೆಳೆಯರ ಕಣ್ಣೆದುರಲ್ಲೇ ನೀರುಪಾಲಾದ ದಾರುಣ ಘಟನೆ ನಗರದ ಹೊರವಲಯದ ರುಕ್ಮೊದ್ದೀನ್ ಕಲ್ಲಿನ ಖಣಿಯಲ್ಲಿ ನಡೆದಿದೆ.

ಮಿಜುಗುರಿ ಬಡಾವಣೆಯ ಜಾಫರ್ ಅಯೂಬ್(22) ಮೃತ ದುರ್ದೈವಿ.  ಜಾಫರ್ ಮತ್ತು ಆತನ ಸ್ನೇಹಿತರು ಈಜಾಡಲು ತೆರಳಿದ್ದರು. ಜಾಫರ್ ಈಜುತ್ತಿದ್ದರೆ, ಗೆಳೆಯರು ದಂಡೆಯ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದರು. ಆದರೇ ನೋಡನೋಡುತ್ತಿದ್ದಂತೆಯೇ ಜಾಫರ್  ದಂಡೆಯ ಬಳಿ ಬಂದು ಏಕಾಏಕಿ ಜಲಸಮಾಧಿಯಾಗಿದ್ದಾನೆ. ನೀರೊಳಗೆ ಮುಳುಗುತ್ತಿರುವುದನ್ನು ಆತನ ಗೆಳೆಯರು ಕಂಡರೂ  ಸಹಾಯ ಹಸ್ತ ಚಾಚಲಿಲ್ಲ.

ಜಾಫರ್ ಮುಳುಗುತ್ತಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ನೇಹಿತರ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಕಲಬುರಗಿ ಗ್ರಾಮೀಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆದಿದ್ದಾರೆ.

ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ