ಅಂಚೆ ವಿಮಾ ಗ್ರಾಮಕ್ಕೆ ನಗದು ಪುರಸ್ಕಾರ


Team Udayavani, Feb 21, 2018, 10:53 AM IST

gul-6.jpg

ಆಳಂದ: ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬದಲ್ಲಿ ಅಂಚೆ ಜೀವ ವಿಮೆ ಕೈಗೊಂಡು ಸಂಪೂರ್ಣ ವಿಮಾ ಗ್ರಾಮವಾದರೆ ಅಂತಹ ಗ್ರಾಮಕ್ಕೆ ಲಕ್ಷ ರೂಪಾಯಿ ಪುರಸ್ಕಾರ ನೀಡಲಾಗುತ್ತಿದೆ ಎಂದು ಅಂಚೆ ಇಲಾಖೆಯ
ಕಲಬುರಗಿ ವಿಭಾಗೀಯ ಹಿರಿಯ ಅಧೀಕ್ಷಕ ಎಸ್‌.ಎಸ್‌. ಪಾಟೀಲ ಹೇಳಿದರು.

ತಾಲೂಕಿನ ಕಣಮಸ್‌ ಗ್ರಾಮದಲ್ಲಿ ಮಂಗಳವಾರ ಅಂಚೆ ಇಲಾಖೆ ಹಮ್ಮಿಕೊಂಡ ಇಲಾಖೆಯ ಯೋಜನೆಗಳ ಮಾಹಿತಿ
ಕಾರ್ಯಕ್ರಮ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ವಿಶ್ವಾಸರ್ಹ ಇಲಾಖೆಯ ಅಂಚೆ ಕಚೇರಿಯಲ್ಲಿ ಗ್ರಾಹಕರು ಠೇವಣಿ ಇರಿಸುವುದು, ಉಳಿತಾಯ ಖಾತೆ ತೆರೆಯುವುದು ಮತ್ತು ವಿಮಾ ಪಾಲಿಸಿಗಳಿಂದ ಭವಿಷ್ಯದಲ್ಲಿ ಲಾಭ ಹೊಂದಲು ಸಾಧ್ಯವಿದೆ ಎಂದು ಹೇಳಿದರು. 

ಕೇವಲ 50 ರೂಪಾಯಿ ವೆಚ್ಚದಲ್ಲಿ ಉಳಿತಾಯ ಖಾತೆ ತೆರೆದ ಗ್ರಾಹಕರಿಗೆ ಉಚಿತ ಎಟಿಎಂ ಕಾರ್ಡ್‌, ಸೇವಾ ತೆರಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮುಂದಿನ ದಿನಗಳಲ್ಲೂ ಅಂಚೆ ಗ್ರಾಮೀಣ ಶಾಖೆಗಳಲ್ಲಿ ಕಂಪ್ಯೂಟರ್‌ ಅಳವಡಿಸಿ ಆನ್‌ಲೈನ್‌ ವ್ಯವಸ್ಥೆ ಮೂಲಕ ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹಣದ ವ್ಯವಹಾರ ಕೈಗೊಳ್ಳಬಹುದಾಗಿದೆ. ಆಧಾರ ಕಾರ್ಡ್‌ಗಳಲ್ಲಿನ ಲೋಪದೋಷ ಸರಿಪಡಿಸುವಿಕೆಯಂತೆ ಹತ್ತು ಹಲವಾರ ಯೋಜನೆಗಳು ಜಾರಿಗೆ ತರುವ ಯೋಜನೆ ಇದೆ. ಎಸ್‌.ಬಿ, ಆರ್‌ಡಿ, ಟಿಡಿ, ಎಸ್‌ಎಸ್‌ಎ, ಆರ್‌ಪಿಎಲ್‌ಐ ಯೋಜನೆಗಳ ಲಾಭವನ್ನು ಪಡೆಯಬೇಕು ಎಂದರು.

ಸಹಾಯಕ ಅಧಿಧೀಕ್ಷಕ ಆರ್‌.ಕೆ. ಉಮರಾಣಿ ಮಾತನಾಡಿ, ಸುಕನ್ಯ ಸಮೃದ್ಧಿ ಅಡಿಯಲ್ಲಿ ತಿಂಗಳಿಗೆ ಸಾವಿರ ಸೇರಿ 14 ವರ್ಷಗಳ ಕಾಲ ತುಂಬಿದರೆ, ಸುಮಾರು 5 ಲಕ್ಷ ರೂಪಾಯಿ ವಿಮಾ ಮೊತ್ತ ದೊರೆಯುತ್ತದೆ. ಇಂಥ ಹಲವಾರ ಸೇವಾ
ತೆರಗಿ ರಹಿತ ಯೋಜನೆಗಳಿವೆ. ಗ್ರಾಮೀಣ ಜನರು ಲಾಭ ಪಡೆಯಬೇಕು ಎಂದರು. 

ಅಂಚೆ ಸಹಾಯಕ ಅಧೀಕ್ಷಕ ಸುಶಿಲ ಕುಮಾರ ತಿವಾರಿ ಮಾತನಾಡಿದರು. ಅಂಚೆ ಕ್ಷೇತ್ರಾಧಿಕಾರಿ ವಿಜಯಕುಮಾರ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪೋಸ್ಟ್‌ ಮಾಸ್ಟರ್‌ಗಳಾದ ಸಾತಲಿಂಗಪ್ಪ ತೋರಕಡೆ, ಪರಮೇಶ್ವರ ಪಾಟೀಲ, ಶ್ರೀಶೈಲ ಜಳಕೋಟಿ, ಶೇಖರ ವಡಗಾಂವ, ಮಹಾದೇವ ಕೊರಳ್ಳಿ, ಮಲ್ಲೇಶಪ್ಪ ಮಲಶೆಟ್ಟಿ, ಸುಧಾಕರ ಕುಲಕರ್ಣಿ ಮತ್ತು ಗ್ರಾಮದ ಮುಖಂಡರಾದ ಸಿದ್ರಾಮಪ್ಪ ಪಾಟೀಲ, ಶರಣಯ್ಯ ಸ್ವಾಮಿ, ಸೂರ್ಯಕಾಂತ ಕಾಳೆ, ಶಶಿಕಾಂತ ಕಾಳೆ, ದತ್ತಾತ್ರೆಯ ಆಳಂಗೆ, ಷಣ್ಮೂಖ ಮಾಂಜ್ರೆ, ಗ್ರಾಪಂ ಸದಸ್ಯ ಚಂದ್ರಕಲಾ ಮೊದಲಾದವರು ಇದ್ದರು. ಬಾಬುರಾವ್‌ ಪಾಟೀಲ ಸ್ವಾಗತಿಸಿದರು. ಮಾರುತಿ ಗೊಣೆಪ್ಪನವರ ನಿರೂಪಿಸಿದರು. ಲಕ್ಕನ ಪವಾರ ವಂದಿಸದರು.

ಗ್ರಾಮಸ್ಥರ ಗೊಂದಲ ನಿವಾರಿಸಿದ ಅಧಿಕಾರಿಗಳು
ಆಳಂದ: ಕೇಂದ್ರ ಸರ್ಕಾರವು ಅಂಚೆ ಇಲಾಖೆ ಮೂಲಕ ಜಾರಿಗೆ ತಂದಿರುವ ಜನಸ್ನೇಹಿ ಯೋಜನೆಗಳ ಕುರಿತು
ತಾಲೂಕಿನ ಕಣಮಸ್‌ ಗ್ರಾಮದಲ್ಲಿ ಅಂಚೆ ವಿಭಾಗೀಯ ಅಧಿಕಾರಿಗಳು ಜಾಗೃತಿ ಮೂಡಿಸಿದರು. ಗ್ರಾಮೀಣ ಅಂಚೆ ಜೀವವಿಮೆ ಮೇಳದ ನಂತರ ಗ್ರಾಮದಲ್ಲಿ ಅಧಿಕಾರಿಗಳು ಯೋಜನೆಗಳ ಸದ್ಬಳಕೆ ಕೈಗೊಳ್ಳುವಂತೆ ಮಾಹಿತಿ ನೀಡಿದರು. ಗ್ರಾಮಸ್ಥರು ಕೇಳಿದ ಪ್ರಶ್ನಿಗಳಿಗೆ ಉತ್ತರಿಸುವ ಮೂಲಕ ಜನರಲ್ಲಿ ಯೋಜನೆಗಳ ಗೊಂದಲ ನಿವಾರಿಸಿದರು.

ಟಾಪ್ ನ್ಯೂಸ್

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಹೈಕಮಾಂಡ್ ಜೊತೆ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಹೈಕಮಾಂಡ್ ಜೊತೆ ಸಿಎಂ ಚರ್ಚೆಯ ಬಳಿಕ ಸಂಪುಟ ಪುನಾರಚನೆ ಡೇಟ್ ಫಿಕ್ಸ್: ಕಾರಜೋಳ

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

ಭಾರತ: 24ಗಂಟೆಯಲ್ಲಿ 3.37 ಲಕ್ಷ ಕೋವಿಡ್ ಪ್ರಕರಣ ಪತ್ತೆ, 10,000 ಗಡಿದಾಟಿದ ಒಮಿಕ್ರಾನ್

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

ಕಾರ್ಕಳ: ಕೊರಗಜ್ಜನಿಗೆ ಅವಮಾನ; ಪ್ರಕರಣ ದಾಖಲು

World Giants

ದಿಲ್ಶನ್,ತರಂಗ ಬ್ಯಾಟಿಂಗ್ ವೈಭವ: ವರ್ಲ್ಡ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಏಶ್ಯನ್ ಲಯನ್ಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

3digital

ಡಿಜಿಟಲ್‌ ಸೇವಾ ಸಿಂಧು ಕೇಂದ್ರ ಸೇವೆ ಪಡೆಯಿರಿ

2college

ಕುಂಚಾವರಂಗೆ ಕಾಲೇಜು ಮಂಜೂರಿಗೆ ಆಗ್ರಹ

14electricity

ಸಿಂಗಲ್‌ ಫೇಸ್‌ ವಿದ್ಯುತ್‌ಗಾಗಿ ಪಾದಯಾತ್ರೆ

13childrens-killed

ಮಕ್ಕಳನ್ನು ಬಾವಿಗೆ ನೂಕಿ ಹತ್ಯೆಗೈದ ಹೆತ್ತ ತಾಯಿ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

ದೇವಸ್ಥಾನ ಜೀರ್ಣೋದ್ಧಾರ ಅನುದಾನಕ್ಕೆ ಲಂಚ ಪಡೆಯುವಾಗ ಮುಜರಾಯಿ ತಹಶೀಲ್ದಾರ ಎಸಿಬಿ ಬಲೆಗೆ

6elephant

ಸಂಪಾಜೆ ನೆಲ್ಲಿಕುಮೇರಿ ಕಾರ್ಣಿಕ ದೈವ ಕಟ್ಟೆಗೆ ಕಾಡಾನೆ ದಾಳಿ

5fire

ಬೆಂಕಿ ಅವಘಡ: ಕೃಷಿಭೂಮಿ ಬೆಂಕಿಗಾಹುತಿ

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; ಇಬ್ಬರು ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

ಮುಂಬಯಿ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ; 7 ಸಾವು, ಹಲವು ಮಂದಿ ಆಸ್ಪತ್ರೆಗೆ ದಾಖಲು

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.