ಸರ್ಕಾರದ ನಿಯಮ ಪಾಲಿಸದಿದ್ದರೆ ಕೋವಿಡ್ ತೀವ್ರ

ಇದು ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಅಲ್ಲ ಎಂದು ಸಲಹೆ ನೀಡಿದರು.

Team Udayavani, Apr 20, 2021, 6:23 PM IST

ಸರ್ಕಾರದ ನಿಯಮ ಪಾಲಿಸದಿದ್ದರೆ ಕೋವಿಡ್ ತೀವ್ರ

ಕಲಬುರಗಿ: ಕೊರೊನಾ ವೈರಸ್‌ ರೂಪಾಂತರಗೊಂಡಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಸ್ವಚ್ಚತೆ ಮೈಗೂಡಿಸಿಕೊಂಡಲ್ಲಿ ಮಾತ್ರ ಕೋವಿಡ್ ನಿಯಂತ್ರಿಸಲು ಸಾಧ್ಯ ಎಂದು ನಾಡೋಜ, ಖ್ಯಾತ ತಜ್ಞ ವೈದ್ಯ ಡಾ| ಪಿ.ಎಸ್‌. ಶಂಕರ ಹೇಳಿದರು.

ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ಜಂಟಿಯಾಗಿ ಕೋವಿಡ್‌ ಎರಡನೇ ಅಲೆ ಕುರಿತಾಗಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕೊರೊನಾ ಇನ್ನೂ ಹೆಚ್ಚಳವಾಗುವ ಆತಂಕತೆ ಕಂಡು ಬರುತ್ತಿದೆ. ಹೀಗಾಗಿ ಜನರೆಲ್ಲರೂ ಸರ್ಕಾರ ಹಾಗೂ ವ್ಯವಸ್ಥೆಯನ್ನು ದೂಷಿಸದೇ ನಮ್ಮಲ್ಲಿ ನಾವು ಕಡಿವಾಣ ಹಾಕಿಕೊಂಡಾಗ ಮಾತ್ರ ನಿಯಂತ್ರಣ ಹೇರಲು ಸಾಧ್ಯ ಎಂದರು.

ಲಸಿಕೆ ಎಲ್ಲರೂ ಪಡೆಯಬೇಕು. ಬಹು ಮುಖ್ಯವಾಗಿ ಒಂದನೇ ಎರಡನೇ ಲಸಿಕೆಯಲ್ಲದೇ ಮೂರನೇ ಲಸಿಕೆ ಹಾಕಲು ಸಿದ್ಧತೆಗಳು ಸಹ ನಡೆದಿವೆ ಎಂದು ನುಡಿದ ಡಾ| ಪಿ.ಎಸ್‌. ಶಂಕರ, ಕಳೆದ ವರ್ಷದ ಮೊದಲ ಹಂತದ ಕೋವಿಡ್ ಸೆಪ್ಟೆಂಬರ್‌ ಏರಿಕೆಯಾಗಿ ಇಳಿಕೆಯಾಗಿತ್ತು. ಈ ಸಲ ಇನ್ನೂ ಹೆಚ್ಚುಗೊಂಡು ಜೂನ್‌ ನಂತರ ಇಳಿಕೆಯಾಗುವ ಸಾಧ್ಯತೆಗಳಿವೆ. ಟಿ.ವಿ ಮಾಧ್ಯಮಗಳು ಹೆಚ್ಚಿನ ಭಯ ಹುಟ್ಟಿಸುತ್ತಿವೆ. ಆದ್ದರಿಂದ ನಮ್ಮಷ್ಟಕ್ಕೆ ನಾವು ನಿರ್ಬಂಧ ಹಾಕಿಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಸಣ್ಣ ನಿರ್ಲಕ್ಷ್ಯತನ ಸಲ್ಲದು ಎಂದು ವಿವರಿಸಿದರು.

ಚೀನಾದ ನೆರೆ ರಾಷ್ಟ್ರ ವಿಯೋಟ್ನಾಂ ಹಾಗೂ ನ್ಯೂಜಿಲ್ಯಾಂಡ್‌ ರಾಷ್ಟ್ರವು ಕಳೆದ ವರ್ಷ ತನ್ನ ರಾಷ್ಟ್ರದೊಳಗೆ ಯಾರನ್ನು ಬಾರದಂತೆ ಕಟ್ಟುನಿಟ್ಟಾದ ಗಡಿ ನಿರ್ಬಂಧ ಹಾಕಿದ್ದರಿಂದ 1084 ಪ್ರಕರಣಗಳು ಮಾತ್ರ ವರದಿಯಾದವು. ಹೀಗಾಗಿ ಕೊರೊನಾ ವಿಸ್ತರಣೆಗೆ ಬ್ರೇಕ್‌ ಹಾಕಲು ಗಡಿ ಅಂದರೆ ಚೆಕ್‌ಪೋಸ್ಟ್‌ಗಳನ್ನು ಬಿಗಿಗೊಳಿಸಬೇಕು. ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಸಂಚಾರ ಕೆಲ ಕಾಲ ಬೇಡವೇ ಬೇಡ. ಈಗಂತು ರೆಮ್‌ಡಿಸಿವಿಆರ್‌ ಚುಚ್ಚುಮದ್ದು ಕೊರತೆಯ ಮಾತೇ ಎಲ್ಲೆಡೆ ಕೇಳಿ ಬರುತ್ತಿದೆ. ಇದು ಕೊರೊನಾ ನಿಯಂತ್ರಣಕ್ಕೆ ರಾಮಬಾಣ ಅಲ್ಲ ಎಂದು ಸಲಹೆ ನೀಡಿದರು.

ಯುನೈಟೆಡ್‌ ಆಸ್ಪತ್ರೆ ಚೆರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ್‌ ಸಿದ್ಧಾರೆಡ್ಡಿ ಮಾತನಾಡಿ, ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೆ ತಂದಿರುವುದು ಒಂದು ನಿಟ್ಟಿನಲ್ಲಿ ಸ್ವಲ್ಪ ಕಡಿವಾಣ ಹಾಕಬಹುದಾದರೂ ಜನರೇ ಸ್ವಯಂವಾಗಿ ದೃಢ ನಿಲುವು ತಾಳಬೇಕು. ಈಗಂತು ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಸಾಧ್ಯವಾಗಿದೆ ಎಂದರು. ಖ್ಯಾತ ವೈದ್ಯರು ಹಾಗೂ ವೈದ್ಯ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಎಸ್‌.ಎಸ್‌. ಗುಬ್ಬಿ ಸಹ
ಉಪಸ್ಥಿತರಿದ್ದು, ಸಲಹೆ ನೀಡಿದರು. ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಸ್‌.ಎಸ್‌. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ ಸೇರಿದಂತೆ ಮುಂತಾದವರಿದ್ದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂಟಿ ನಿರೂಪಿಸಿದರು.

ಟಾಪ್ ನ್ಯೂಸ್

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

ನಡು ರಸ್ತೆಯಲ್ಲೇ ಚಾಕುವಿನಿಂದ‌ ಇರಿದು ಯುವಕನ ಬರ್ಬರ ಹತ್ಯೆ

19bus

ಬಸ್‌ ಸೌಲಭ್ಯ ಒದಗಿಸಲು ಆಗ್ರಹ

16vote

ಮತದಾರರ ಸಮಸ್ಯೆಗೆ ಸ್ಪಂದನೆ

13banana

ರೈತರಿಂದ ಬಾಳೆಹಣ್ಣು ಖರೀದಿಸಿ ವಿತರಣೆ

12satyagraha

ಎಲೆನಾವದಗಿ ಗ್ರಾಮಸ್ಥರಿಂದ ಸತ್ಯಾಗ್ರಹ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.