Udayavni Special

ಹತ್ತಿ ಬಿತ್ತನೆಗೆ ಹಿಂದೇಟು-ತೊಗರಿಗೆ ಒಲವು


Team Udayavani, Jul 4, 2021, 5:37 PM IST

ertyuiuytre

ಅಫಜಲಪುರ: ಕಳೆದ ನಾಲ್ಕೈದು ವರ್ಷಗಳಲ್ಲಿ ತಾಲೂಕಿನ ರೈತರು ಹೆಚ್ಚು ಹತ್ತಿ ಬಿತ್ತನೆ ಮಾಡಿ ಇಳುವರಿ ಸಿಗದೇ ಕೈ ಸುಟ್ಟುಕೊಂಡಿದ್ದರು. ಈ ಬಾರಿಯೂ ಇಳುವರಿ ಸಮಸ್ಯೆಯಿಂದಾಗಿ ಹತ್ತಿ ಬಿತ್ತನೆಗೆ ಸ್ವಲ್ಪ ಹಿಂದೇಟು ಹಾಕುತ್ತಿದ್ದು, ತೊಗರಿ ಬೆಳೆಯತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಹತ್ತಿಗಿಂತ ಹೆಚ್ಚು ತೊಗರಿ ಬಿತ್ತನೆಯಾಗುತ್ತಿದೆ.

ಸಾಗುವಳಿ ಕ್ಷೇತ್ರದಲ್ಲಿ 99850 ಹೆಕ್ಟೇರ್‌ ಬಿತ್ತನೆ ಗುರಿ: ಸದ್ಯ ತಾಲೂಕಿನ ಒಟ್ಟು ಭೌಗೋಳಿಕ ಕ್ಷೇತ್ರ 130479 ಹೆಕ್ಟೇರ್‌ ಇದ್ದು, ಇದರಲ್ಲಿ ಸಾಗುವಳಿ ಕ್ಷೇತ್ರ 11590 ಹೆಕ್ಟೇರ್‌ ಪ್ರದೇಶವಿದೆ. ಈ ಪೈಕಿ 99850 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇಷ್ಟೊಂದು ಪ್ರಮಾಣದ ಬಿತ್ತನೆ ಕ್ಷೇತ್ರದಲ್ಲಿ ಬಹುಪಾಲು ರೈತರು ಈ ಬಾರಿ ತೊಗರಿ ಬಿತ್ತನೆಯನ್ನೇ ಮಾಡಿದ್ದಾರೆ. ಕೆಲ ವರ್ಷಗಳಿಂದ ತಾಲೂಕಿನ ರೈತರು ಹತ್ತಿ ಬೆಳೆಯನ್ನು ಹೆಚ್ಚಾಗಿ ಬಿತ್ತನೆ ಮಾಡುತ್ತಿದ್ದರು.

ಹತ್ತಿ ಬೆಳೆ ಬಹುತೇಕ ರೈತರಿಗೆ ಲಾಭ ತಂದುಕೊಡುವ ಬದಲಾಗಿ ನಷ್ಟವನ್ನೇ ತಂದೊಡ್ಡಿದೆ. ಯಾವ ಬೀಜ ಹಾಕಿದರೂ ನಿರೀಕ್ಷಿತ ಇಳುವರಿ ಸಿಗದೇ ಇದ್ದುದರಿಂದ ರೈತರು ಈ ಬಾರಿ ಹತ್ತಿ ಬಿತ್ತನೆ ಕೈಬಿಟ್ಟಿದ್ದಾರೆ. ಹತ್ತಿ ಬದಲಾಗಿ ಯಾವಾಗಲೂ ಬಿತ್ತನೆಯಾಗುವ ತೊಗರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತಲು ಮನಸ್ಸು ಮಾಡಿದ್ದಾರೆ.

ಹೀಗಾಗಿ ಈ ಬಾರಿ ಹತ್ತಿಗಿಂತ ಹೆಚ್ಚು ತೊಗರಿ ಬಿತ್ತನೆಯಾಗುತ್ತಿದೆ. ಬಿತ್ತನೆಯ ಗುರಿಯ ಬಹುಪಾಲು ಭಾಗ ತೊಗರಿಯಾಗುತ್ತಿರುವುದು ಈ ಬಾರಿಯ ವಿಶೇಷವಾಗಿದೆ ಎಂದರು. ರೈತರ ಮೊಗದಲ್ಲಿ ಮಂದಹಾಸ: ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರಕವಾಗುವುಷ್ಟು ಮಳೆ ಬಂದಿದೆ. ಅದರಲ್ಲೂ ಪ್ರಸಕ್ತ ಸಾಲಿನಲ್ಲಿ ಜೂನ್‌ ಅಂತ್ಯದ ವೇಳೆಗೆ ಬರಬೇಕಾಗಿದ್ದ ಮಳೆಗಿಂತ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆ ಬಂದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ವರ್ಷದ ವಾಡಿಕೆ ಮಳೆ 667.3 ಎಂ.ಎಂ ಬರಬೇಕು.

ಜೂನ್‌ ಅಂತ್ಯದ ವರೆಗೆ ಬರಬೇಕಾದ ಮಳೆ 160.5 ಎಂ.ಎಂ ಬರಬೇಕಾಗಿತ್ತು. ಆದರೆ ಜೂನ್‌ ಅಂತ್ಯದ ವೇಳೆಗೆ 183.50 ಎಂ.ಎಂ ಮಳೆಯಾಗುವ ಮೂಲಕ 23 ಎಂ.ಎಂ ಮಳೆ ಹೆಚ್ಚಾಗಿ ಬಂದಿದೆ. ತಾಲೂಕಿನ ಕರ್ಜಗಿ ಭಾಗದಲ್ಲಿ 268 ಎಂ.ಎಂ ಮಳೆಯಾದರೆ, ಗೊಬ್ಬೂರ ವಲಯದಲ್ಲಿ ಅತಿ ಕಡಿಮೆ ಅಂದರೆ 113 ಎಂ.ಎಂ. ಮಳೆಯಾಗಿದೆ. ಅಫಜಲಪುರ ವಲಯದಲ್ಲಿ 204, ಅತನೂರ ವಲದಯ್ಲಲಿ 140.06 ಎಂ.ಎಂ ಮಳೆಯಾಗಿದೆ. ಹೀಗಾಗಿ ಬಿತ್ತನೆಗೆ ರೈತರು ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಬೆಳೆ ಮಾಹಿತಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಏಕ ದಳ ಧಾನ್ಯ ಬಿತ್ತನೆ ಗುರಿ 2315 ಹೆಕ್ಟೇರ್‌ ಇದೆ. ಬೆಳೆಕಾಳು 73.835 ಹೆಕ್ಟೇರ್‌ ಇದ್ದು, ಈ ಪೈಕಿ ತೊಗರಿ 23,557 ಹೆಕ್ಟೇರ್‌ ಬಿತ್ತನೆಯಾಗಿದೆ.

ಇನ್ನೂ ಬಿತ್ತನೆಯಾಗುತ್ತಿದೆ. ಎಣ್ಣೆ ಕಾಳು 2490 ಹೆಕ್ಟೇರ್‌ ಪ್ರದೇಶ ಗುರಿ ಇದೆ. ಈ ಪೈಕಿ 132 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳ ಗುರಿ 21210 ಹೆಕ್ಟೇರ್‌ ಇದೆ. ಕಬ್ಬಿನ ಗುರಿ 31250 ಹೆಕ್ಟೇರ್‌ ಇದೆ. ಈಗಾಗಲೇ 29.500 ಹೆಕ್ಟೇರ್‌ ನಾಟಿ ಮಾಡಲಾಗಿದೆ. ಹತ್ತಿ ಗುರಿ 6500 ಹೆಕ್ಟೇರ್‌ ಇದೆ. ಕಳೆದ ವರ್ಷವೂ ಇಷ್ಟೇ ಗುರಿ ಇದ್ದರೂ 28.860 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಆದರೆ ಈ ಬಾರಿ ಹತ್ತಿ ಬಿತ್ತನೆಯು 2865 ಹೆಕ್ಟೇರ್‌ ಮಾತ್ರ ಆಗಿದೆ. ಇನ್ನೂ ಸ್ವಲ್ಪ ಮಾತ್ರ ಬಿತ್ತನೆಯಾಗುವ ಸಂಭವವಿದೆ. ಕಳೆದ ವರ್ಷದ ಹತ್ತಿ ಬೆಳೆಯ ಕ್ಷೇತ್ರ ತೊಗರಿ ಬೆಳೆ ಕ್ಷೇತ್ರವಾಗಿ ಪರಿವರ್ತನೆಯಾಗಲಿದೆ.

ಟಾಪ್ ನ್ಯೂಸ್

Davanagere Bhadra Dam

ಭದ್ರಾ ಜಲಾಶಯ ಭರ್ತಿ: ಕಾಡಾ ಅಧ್ಯಕ್ಷೆ ಸಂತಸ

ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

Chithradurga

ಪ್ರಕೃತಿ ವಿಕೋಪದಿಂದ ನೊಂದವರ ನೆರವಿಗೆ ಧಾವಿಸಿ

bantwala

ಬಂಟ್ವಾಳ: ರೈಲ್ವೆ ಹಳಿಯ ಮೇಲೆ ಯುವಕನ ಮೃತದೇಹ ಪತ್ತೆ

lovlina borgohain

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲವ್ಲೀನಾ

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

ಭಾರತೀಯ ಕ್ರೀಡಾ ಮುಕುಟ “ಮಣಿ’ಪುರ

ಈ ವರ್ಷ ಬಾಗಿಲು ಮುಚ್ಚಲಿವೆ 63 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು! 

ಈ ವರ್ಷ ಬಾಗಿಲು ಮುಚ್ಚಲಿವೆ 63 ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳು! ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gfdggree

ನೂತನ ಸಿಎಂರಿಂದ ಹೊಸ ಅಧ್ಯಕ್ಷರ  ನೇಮಕ ಮಾಡಬಹುದು: ಅಪ್ಪುಗೌಡ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

ಬೊಮ್ಮಾಯಿ ಸಿಎಂ; ಜಿಲ್ಲೆ ನಿರೀಕ್ಷೆ ಬೆಟ್ಟದಷ್ಟು

Bavi

ಪರಾರಿಯಾಗುವಾಗ ಬಾವಿಗೆ ಬಿದ್ದ ಕಳ್ಳ

BSY-Ne

ಬಿಎಸ್‌ವೈ ರಾಜೀನಾಮೆ: ಕಲ್ಯಾಣದಲ್ಲಿ ಸಂಚಲನ

MUST WATCH

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

udayavani youtube

ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ :ಸಿದ್ದುಗೆ ಬಿಜೆಪಿ ತಿರುಗೇಟು

udayavani youtube

ರಾಷ್ಟ್ರೀಯ ಪ್ರಾಣಿಯಾಗಿದ್ದ ಸಿಂಹವನ್ನು ಹುಲಿ ಹಿಂದಿಕ್ಕಿದ್ದು ಹೇಗೆ ?

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

ಹೊಸ ಸೇರ್ಪಡೆ

Davanagere Bhadra Dam

ಭದ್ರಾ ಜಲಾಶಯ ಭರ್ತಿ: ಕಾಡಾ ಅಧ್ಯಕ್ಷೆ ಸಂತಸ

ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

ಸಿನಿಮಾ ಕ್ಯೂ: ಆಗಸ್ಟ್‌ ಇಪ್ಪತ್ತು: ಎಲ್ರೂ ಒಟ್ಟಿಗೆ ಬಂದ್ರೆ ಆಪತ್ತು!

Chithradurga

ಪ್ರಕೃತಿ ವಿಕೋಪದಿಂದ ನೊಂದವರ ನೆರವಿಗೆ ಧಾವಿಸಿ

bantwala

ಬಂಟ್ವಾಳ: ರೈಲ್ವೆ ಹಳಿಯ ಮೇಲೆ ಯುವಕನ ಮೃತದೇಹ ಪತ್ತೆ

lovlina borgohain

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲವ್ಲೀನಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.