ಬೆಳೆ ಕಿತ್ತು ಬಿಸಾಡಿದ ಅನ್ನದಾತ


Team Udayavani, Aug 9, 2017, 2:28 PM IST

toordal copy.JPG

ವಾಡಿ: ಕೆಂಡಕಾರುವ ಸೂರ್ಯನ ತಾಪಕಂಡು ಕಂಗೆಟ್ಟ ಕೃಷಿಕರು, ಬರ ಎಳೆದ ಬರೆಗೆ ಬಸವಳಿದು ಹೋಗಿದ್ದಾರೆ. ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ರೈತರು, ಬೆಳೆದ ಬೆಳೆಯನ್ನು ಕಿತ್ತು ಬಿಸಾಡಿ ಕಣ್ಣೀರಿಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸೇರಿದಂತೆ ವಿವಿಧೆಡೆ ಬೆಳೆಯಲಾಗಿದ್ದ ಮುಂಗಾರು ಬೆಳೆ ಬಾಡಿ ಬೆಂಡಾಗಿವೆ. ಭೂಮಿಯಲ್ಲಿ ತೇವಾಂಶ ಕೊರತೆಯುಂಟಾಗಿ ಪೈರುಗಳು ಕೊಳೆತು ಕಾಯಿ ಕಟ್ಟುವ ಮುಂಚೆಯೇ ನೆಲಕಚ್ಚಿವೆ. ನೆತ್ತಿ ಸುಡುವ ರಣಬಿಸಿಲು ಮುಂಗಾರು ಬೆಳೆಗಳ
ಮಾರಣಹೋಮಕ್ಕೆ ಕಾರಣವಾಗಿದೆ. ಧಾರಾಕರವಾಗಿ ಸುರಿದು ಶುಭಾರಂಭ ನೀಡಿದ್ದ ಮುಂಗಾರು ಮಳೆ ನಂಬಿ ಅ ಧಿಕ ಇಳುವರಿ ನಿರೀಕ್ಷೆಯಲ್ಲಿದ್ದ ರೈತರು ಹೆಸರು, ಉದ್ದು, ಎಳ್ಳು ಬಿತ್ತನೆ ಮಾಡಿದ್ದರು. ಹೇಳ ಹೆಸರಿಲ್ಲದಂತೆ ಮರೆಯಾದ ಮಳೆ ರೈತರ ಕಣ್ಣೀರಿಗೆ ಕಾರಣವಾಗಿದೆ. ತಿಳಿಮೋಡದ ಆಗಸದಲ್ಲಿ ನೇಸರನ ಪ್ರಕೋಪ ಕಂಡ ಈ ಭಾಗದ ರೈತರು, ಮಳೆ ಬೀಳುವ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಒಣಬೇಸಾಯವನ್ನೇ ನಂಬಿಕೊಂಡಿರುವ ವಾಡಿ, ರಾವೂರ, ಸನ್ನತಿ, ಮಾಲಗತ್ತಿ, ಲಾಡ್ಲಾಪುರ, ಅಣ್ಣಿಕೇರಾ, ಕುಂದನೂರ, ಇಂಗಳಗಿ, ಚಾಮನೂರ, ಮಾರಡಗಿ, ಬನ್ನೇಟಿ, ಸನ್ನತಿ, ಉಳಂಡಗೇರಾ, ಕೊಲ್ಲೂರ ಗ್ರಾಮಗಳ ಭಾಗದಲ್ಲಿನ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದ್ದ ಉದ್ದು ಮತ್ತು ಹೆಸರು ಬೆಳೆಗಳನ್ನು ಹರಗುವ ಕಾರ್ಯಕ್ಕೆ ರೈತರು ಚಾಲನೆ ನೀಡಿದ್ದಾರೆ. ಕಾಯಿ ಕಟ್ಟುವ ಹಂತದಲ್ಲಿದ್ದ ಬೆಳೆಗಳು ಒಣಗಿನಿಂತಿದ್ದನ್ನು ಕಂಡು ರೈತರು ಮರುಗುವಂತಾಗಿದ್ದು, ಬರದ ಭೀಕರತೆ
ಅನಾವರಣಗೊಳಿಸಿದೆ.

ರಕ್ಷಿಸಿದ ಬೆಳೆಯನ್ನೇ ಹರಗುವ ಪ್ರಸಂಗ: ಮುಂಗಾರು ಮಳೆ ಸುರಿದ ಅಬ್ಬರ ಕಂಡು ಉತ್ತಮ ಲಾಭದ ನಿರೀಕ್ಷೆಯಲ್ಲಿ ಹೆಸರು ಮತ್ತು ಉದ್ದು ಬಿತ್ತನೆಗೆ ಆದ್ಯತೆ ನೀಡಿದ್ದೆವು. ಆರಂಭಕ್ಕೆ ಬಂದ ಮುಂಗಾರು ಕೈಕೊಟ್ಟಿತು. ಹೂ
ಬಿಟ್ಟು ಕಾಯಿ ಕಟ್ಟಿದ ಬೆಳೆ ಸಾಲುಗಳು ಕೈಗೆಟುಕದೆ ಬಾಡುವ ಮೂಲಕ ಹೀಗೆ ನಮ್ಮ ಬಾಯಿಗೆ ಮಣ್ಣು ಹಾಕುತ್ತವೆ ಎಂದು ಅಂದುಕೊಂಡಿರಲಿಲ್ಲ. ಸಾಲ ಮಾಡಿ ಬೀಜ, ರಸಗೊಬ್ಬರ ಖರೀದಿಸಿ ರಕ್ಷಣೆ ಮಾಡಿದ ಬೆಳೆಯನ್ನು ನಾವೇ ಹರಗಿ ಹೊರ ಚೆಲ್ಲುವ ಪ್ರಸಂಗ ಬಂದಿದೆ. ಒಟ್ಟು 18 ಎಕರೆ ಹೊಲದಲ್ಲಿನ ಹೆಸರು ಬೆಳೆ ಹರಗಿ ಸುಮಾರು ಎರಡು ಲಕ್ಷ ರೂ. ನಷ್ಟ ಉಂಟಾಗಿದೆ.

 ಮಹೆಬೂಬ ಮಿರ್ಜಾ, ಮಲ್ಲೇಶಿ, ಬೊಮ್ಮನ್‌, ರಾವೂರಿನ, ರೈತರು

ಬರಸಿಡಿಲಂತೆ ಬಂದ ಮುಂಗಾರಿನ ಬರ: ಹೋದ ವರ್ಷದಂತೆ ಈ ವರ್ಷವೂ ಮುಂಗಾರಿನ ಬರ ಬರಸಿಡಿಲಿನಂತೆ ಬಂದೆರಗಿದೆ.
ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಹೆಸರು ಮತ್ತು ಉದ್ದು ಸಂಪೂರ್ಣ ಬಾಡಿಹೋಗಿದೆ. ಹಿಂಗಾರಿನ ಬೆಳೆ ಜೋಳ ಬಿತ್ತುವ ಆಸೆಯಿಂದ ಹೆಸರು ಬೆಳೆ ಸಾಲುಗಳನ್ನು ಹರಗಲು ಆರಂಭಿಸಿದ್ದೇವೆ. ಒಂದು ಕಾಳು ಸಹ ಕೈಗೆ ಬರದಂತಾಗಿ ಕಷ್ಟದ
ಪರಿಸ್ಥಿತಿಯಲ್ಲಿದ್ದೇವೆ. ಬೆಳೆದು ನಿಂತ ತೊಗರಿಯೂ ನೀರಿಲ್ಲದೆ ಬಾಡುತ್ತಿವೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ತೊಗರಿಗೂ ಗಂಡಾಂತರ ತಪ್ಪಿದ್ದಲ್ಲ. ಸಾಲದ ಶೂಲಕ್ಕೆ ಸಿಕ್ಕ ನಮ್ಮನ್ನು ಸರಕಾರವೇ ಕಾಪಾಡಬೇಕು.

 ಇಸ್ಮಾಯಿಲ್‌ ಖಾನ್‌, ರೈತ

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18vaccine

ವ್ಯಾಕ್ಸಿನೇಶನ್‌; ಗುರಿ ತಲುಪಲು ಹರಸಾಹಸ!

14globaization

ಎಲ್ಲೆಲ್ಲೂ ಜಾಗತೀಕರಣದ ಪ್ರಭಾವ: ವೀರೇಂದ್ರ ಕುಮಾರ

13kalaburugi

5.27 ಕೋಟಿ ಮೌಲ್ಯದ ನಕಲಿ ಕ್ರಿಮಿನಾಶಕ-ಗೊಬ್ಬರ ಜಪ್ತಿ

12Insurance,

ಸಂಕಷ್ಟಕ್ಕೆ ಸಿಲುಕಿದ ಕೃಷಿಕನ ನೆರವಿಗೆ ಸಿಗದ ವಿಮೆ

11shed

ಶೆಡ್‌ ನಿರ್ಮಿಸಲಿಲ್ಲ-ತಾಡಪತ್ರಿಯೇ ಗತಿಯಾಯ್ತು!

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.