Udayavni Special

ಅಂಗನವಾಡಿ ಮಕ್ಕಳೊಂದಿಗೆ ಹೆಸರುಕಾಳು ತಿಂದ ಜಿಲ್ಲಾಧಿಕಾರಿ

Team Udayavani, Feb 21, 2021, 4:59 PM IST

DC jotidna

ಚಿಂಚೋಳಿ: ತಾಲೂಕಿನ ತೆಲಂಗಾಣ ಗಡಿಪ್ರದೇಶದಲ್ಲಿ ಇರುವ ಕುಂಚಾವರಂ ಗ್ರಾಮದಲ್ಲಿ ಜಿಲ್ಲಾಧಿಕಾರಿ  ವಿ.ವಿ. ಜ್ಯೋತ್ಸ್ನಾ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ ಸರ್ಕಾರಿ ಬಾಲಕರ ವಸತಿ ನಿಲಯ ಮತ್ತು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸ್ಮಶಾನ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.

ಕುಂಚಾವರಂ ಸಮಾಜ ಕಲ್ಯಾಣ ಇಲಾಖೆ ಆಧೀನದಲ್ಲಿರುವ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕುಡಿಯುವ ನೀರು, ಶೌಚಾಲಯ, ಮಕ್ಕಳು ಮಲಗುವ ಕೋಣೆಯನ್ನು ಪರಿಶೀಲಿಸಿದರು.

ನಂತರ ಮೇಲ್ವಿಚಾರಕರಿಗೆ ಮಕ್ಕಳ ಸಂಖ್ಯೆ ಎಷ್ಟಿದೆ, ಎಷ್ಟು ಮಕ್ಕಳಿಗೆ ಊಟ, ಉಪಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು. ಕೊರೊನಾದಿಂದ ಕೇವಲ 25 ಮಕ್ಕಳಿಗೆ ಊಟ, ಉಪಹಾರ ಮಾಡಲಾಗಿದೆ ಎಂದು ಸಮಾಜ ಕಲ್ಯಾಣಾಧಿ ಕಾರಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಮಕ್ಕಳಿಗೆ ಯಾವ ಊಟ ಹಾಕಿದ್ದಿರಿ ತೋರಿಸಿ ಎಂದು ಅಡುಗೆ ಕೋಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಉಪಹಾರ ಕಂಡು ಬಾರದ ಕಾರಣ ಮೇಲ್ವಿಚಾರಕರು ಮತ್ತು ಸಮಾಜ ಕಲ್ಯಾಣಾಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿ ಕಾರಿಗಳು ಅಲ್ಲಿನ ಮಕ್ಕಳೊಂದಿಗೆ ಕುಳಿತು  ಹೆಸರು ಕಾಳು ತಿಂದು ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಸಂಖ್ಯೆ ಮತ್ತು ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಸರಕಾರ ನೀಡುವ ಪೌಷ್ಟಿಕ ಆಹಾರ ಕುರಿತು ಸಿಡಿಪಿಒ ಗುರುಪ್ರಸಾದ ಕವಿತಾಳ ಅವರನ್ನು ವಿಚಾರಿಸಿದರು.

ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರ ಪಡೆದುಕೊಂಡಿರುವ ಗರ್ಭಿಣಿಯೊಬ್ಬರ ಮನೆಗೆ ಭೇಟಿ ನೀಡಿ ಚರ್ಚಿಸಿದರು. ಕುಂಚಾವರಂ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಸೇವೆಗಳ ಸೌಲಭ್ಯ ಕುರಿತು ತಾಲೂಕು ಆರೋಗ್ಯಾ ಧಿಕಾರಿ ಡಾ| ಮಹ್ಮದ್‌ ಗಫಾರ ಅಹಮೆದ್‌ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಕೊರೊನಾ ವ್ಯಾಕ್ಸಿನ್‌ ಕುರಿತು ಕೇಳಿದಾಗ ಎಲ್ಲರಿಗೂ ವ್ಯಾಕ್ಸಿನ್‌ ನೀಡಲಾಗಿದೆ ಎಂದು ವೈದ್ಯರು ತಿಳಿಸಿದರು. ನಂತರ ಜಿಲ್ಲಾಧಿಕಾರಿಗಳು ಕುಂಚಾವರಂ ಸರ್ಕಾರಿ ಪ್ರೌಢಶಾಲೆ ಹತ್ತಿರ ಇರುವ ಸ್ಮಶಾನ ಭೂಮಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಸೇಡಂ ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಅರುಣಕುಮಾರ ಕುಲಕರ್ಣಿ, ತಾಪಂ ಅಧಿ ಕಾರಿ ಅನಿಲಕುಮಾರ ರಾಠೊಡ, ಸಿಡಿಪಿಒ ಗುರುಪ್ರಸಾದ, ಭೂಮಾಪನಾಧಿ ಕಾರಿಗಳು, ಡಿವೈಎಸ್ಪಿ  ಈ.ಎಸ್‌.ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ, ಎಇಇ ಮಹ್ಮದ್‌ ಅಹೆಮದ್‌ ಹುಸೇನ, ಎಇಇ ಗುರುರಾಜ ಜೋಶಿ, ಎಇಇ ಶಿವಶರಣಪ್ಪ ಕೇಶ್ವಾರ, ಗ್ರೇಡ್‌-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ್‌, ಕುಂಚಾವರಂ ಪಿಎಸ್‌ಐ ಉಪೇಂದ್ರಕುಮಾರ ಭಾಗವಹಿಸಿದ್ದರು.

ಟಾಪ್ ನ್ಯೂಸ್

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಕುಸಿದು ಬಿದ್ದು ಸಾವು!

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!

jagadish shettar

ಅನೈತಿಕ ಸರ್ಕಾರವಾಗಿದ್ದರೆ ಸದನದಲ್ಲಿ ಚರ್ಚಿಸಿ: ಕಾಂಗ್ರೆಸ್ ಗೆ ಜಗದೀಶ್ ಶೆಟ್ಟರ್ ಸವಾಲು

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ

ಪಕ್ಷಾಂತರ, ಕುಟುಂಬ ರಾಜಕಾರಣದ ಕಂಟಕ: ಈ ಬಾರಿ ಮಮತಾಗೆ ಅಧಿಕಾರ ಕೈತಪ್ಪಲಿದೆಯೇ?

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

ಬುಕ್ ಆಫ್ ಲಾ ಪ್ರಕಾರ ಜಾರಕಿಹೊಳಿ ಪ್ರಕರಣ ತನಿಖೆ: ಬಸವರಾಜ ಬೊಮ್ಮಾಯಿ

ಇಳಿಕೆಯಾಗದ ತೈಲ ಬೆಲೆ: ಮಹಾನಗರಗಳಲ್ಲಿ ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ

ಇಳಿಕೆಯಾಗದ ತೈಲ ಬೆಲೆ: ಮಹಾನಗರಗಳಲ್ಲಿ ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ…

rishabh-shetty

ಹೀರೋಗೆ ಪೈರಸಿ ಕಾಟ: ರಿಷಭ್‌ ಶೆಟ್ಟಿ ಆಕ್ರೋಶ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಹೆಣ್ಣು ಮಕ್ಕಳಿಗೆ ಬೇಕಿದೆ ಕಡ್ಡಾಯ ಶಿಕ್ಷಣ

ಹೆಣ್ಣು ಮಕ್ಕಳಿಗೆ ಬೇಕಿದೆ ಕಡ್ಡಾಯ ಶಿಕ್ಷಣ

ನಿರೀಕ್ಷೆ ಬೆಟ್ಟದಷ್ಟು-ದಕ್ಕಿದ್ದು ಹಿಡಿಯಷ್ಟು

ನಿರೀಕ್ಷೆ ಬೆಟ್ಟದಷ್ಟು-ದಕ್ಕಿದ್ದು ಹಿಡಿಯಷ್ಟು

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಕುಸಿದು ಬಿದ್ದು ಸಾವು!

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!

ಕೇಂದ್ರದಿಂದ ತುಘಲಕ್‌ ದರ್ಬಾರ್‌

ಕೇಂದ್ರದಿಂದ ತುಘಲಕ್‌ ದರ್ಬಾರ್‌

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

ಹೊಸ ಸೇರ್ಪಡೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಹೆಣ್ಣು ಮಕ್ಕಳಿಗೆ ಬೇಕಿದೆ ಕಡ್ಡಾಯ ಶಿಕ್ಷಣ

ಹೆಣ್ಣು ಮಕ್ಕಳಿಗೆ ಬೇಕಿದೆ ಕಡ್ಡಾಯ ಶಿಕ್ಷಣ

ನಿರೀಕ್ಷೆ ಬೆಟ್ಟದಷ್ಟು-ದಕ್ಕಿದ್ದು ಹಿಡಿಯಷ್ಟು

ನಿರೀಕ್ಷೆ ಬೆಟ್ಟದಷ್ಟು-ದಕ್ಕಿದ್ದು ಹಿಡಿಯಷ್ಟು

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಕುಸಿದು ಬಿದ್ದು ಸಾವು!

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!

ಕೇಂದ್ರದಿಂದ ತುಘಲಕ್‌ ದರ್ಬಾರ್‌

ಕೇಂದ್ರದಿಂದ ತುಘಲಕ್‌ ದರ್ಬಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.