ಪಿಯುಸಿ ಪರೀಕ್ಷೆ ಸುಸೂತ್ರ ನಡೆಸಲು ಡಿಸಿ ಸೂಚನೆ


Team Udayavani, Feb 27, 2018, 10:44 AM IST

gul-4.jpg

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯು ಮಾ.1ರಿಂದ 17ರ ವರಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ರೂಟ್‌ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿ, ಜಿಲ್ಲಾದ್ಯಂತ 18 ಸರ್ಕಾರಿ ಕಾಲೇಜು, 12 ಅನುದಾನಿತ ಮತ್ತು 17 ಅನುದಾನ ರಹಿತ ಕಾಲೇಜುಗಳು ಸೇರಿದಂತೆ ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 30,329 ಅಭ್ಯರ್ಥಿಗಳು
ಪರೀಕ್ಷೆಗೆ ಹಾಜರಾಗಲಿದ್ದಾರೆ. ಇದರಲ್ಲಿ 6 ಪರೀಕ್ಷಾ ಕೇಂದ್ರಗಳನು ಸೂಕ್ಷ್ಮ ಕೇಂದ್ರಗಳನ್ನಾಗಿ ಪರಿಗಣಿಸಲಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಸೂಸೂತ್ರವಾಗಿ ನಡೆಯಲು ಮಾರ್ಗಾಧಿಕಾರಿಗಳು ಹಾಗೂ ಜಾಗೃತ ದಳದ ವೀಕ್ಷಕರನ್ನು ನೇಮಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ತೆಗದುಕೊಂಡು ಹೋಗಲು ತಹಶೀಲ್ದಾರ್‌ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಪ್ರಶ್ನೆ ಪತ್ರಿಕೆ ಕೊಂಡೊಯ್ಯುವ ವಾಹನಕ್ಕೆ ಇದೇ ಪ್ರಥಮ ಬಾರಿಗೆ ಜಿ.ಪಿ.ಆರ್‌. ಎಸ್‌. ಸಹ ಅಳವಡಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಪರೀಕ್ಷಾ ಕೇಂದ್ರದ ಅಧೀಕ್ಷಕರು ಕೇಂದ್ರದಲ್ಲಿಯೆ ಹಾಜರಿದ್ದು, ಪಿಯುಸಿ ಮಂಡಳಿಯ ನಿರ್ದೇಶನದಂತೆ ಎಲ್ಲ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರದ ಅಧೀಕ್ಷರಿಗೆ ಸೂಚನೆ ನೀಡಿದ ಜಿಲ್ಲಾ ಧಿಕಾರಿಗಳು, ಪರೀಕ್ಷಾ ಆರಂಭದಲ್ಲಿಯೇ ಹೋಳಿ ಹಬ್ಬ ಬರುವುದ ರಿಂದ ಈ ಬಗ್ಗೆಯೂ ಅಗತ್ಯ ಮುನ್ನೆಚ್ಚರಿಕೆ ವಹಿಸಿ ಎಂದರು.

ಮೊಬೈಲ್‌ ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್‌ ಫೋನ್‌, ಪೇಜರ್‌, ಬ್ಲೂಟೂತ್‌, ವೈರ್‌ಲೆಸ್‌ ಸೆಟ್‌, ಸ್ಲೆ„ಡರೂಲ್‌ ಕ್ಯಾಲ್ಕುಲೇಟರ್‌, ವಾಚ್‌ ಕ್ಯಾಲ್ಕುಲೇಟರ್‌, ಪಠ್ಯ-ಪುಸ್ತಕ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನು ತರುವುದನ್ನು ನಿಷೇ ಧಿಸಲಾಗಿದೆ ಎಂದ ಅವರು, ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ
ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವದೆಂದರು.

ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜ ಡಿ. ಕಲಬುರಗಿ, ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ಮುಖ್ಯ ಮೇಲ್ವಿಚಾರಕರು ಸಭೆಯಲ್ಲಿ
ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

astrology today

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

ಮಹಾನಗರಗಳ ಮಾಸ್ಕ್ ಕಾರ್ಡ್‌

ಮಹಾನಗರಗಳ ಮಾಸ್ಕ್ ಕಾರ್ಡ್‌



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6protest

ಅಬಕಾರಿ ಅಧಿಕಾರಿಯ ವರ್ತನೆಗೆ ಭೀಮನಹಳ್ಳಿ ಗ್ರಾಮಸ್ಥರ ಆಕ್ರೋಶ

5farmer

ವಿದ್ಯುತ್‌ ತಂತಿ ತಗುಲಿ ರೈತ ಸಾವು

2factroy

ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು: ಕುಟುಂಬಸ‍್ಥರ ಆಕ್ರೋಶ

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

ವಾಡಿ: ಬಿಸಿಲು ತಾಳದೆ ಕುಸಿದು ಬಿದ್ದ ಉದ್ಯೋಗ ಖಾತ್ರಿ ಮಹಿಳೆ; ಉದ್ಯೋಗ ಖಾತ್ರಿಯಲ್ಲಿ ರಾಜಕಾರಣ

4bank

ಡಿಸಿಸಿ ಬ್ಯಾಂಕ್‌ನಿಂದ ಬಡ್ಡಿ ರಹಿತ ಸಾಲ ವಿತರಣೆ: ಹೇರೂರ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಗಣರಾಜ್ಯ ಪರೇಡ್‌ನ‌ಲ್ಲಿ ಸೇನಾ ವಿಕಾಸ ಅನಾವರಣ

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

ಸಿಗುವುದೇ ವರ್ಕ್‌ ಫ್ರಂ ಹೋಂ ಭತ್ತೆ?

astrology today

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

ನೇತಾಜಿ ಸಾವಿನ ರಹಸ್ಯ ಸದ್ಯದಲ್ಲೇ ಬಯಲು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.