ಬೆಳೆಹಾನಿ ಪರಿಹಾರಕ್ಕೆ ಆಗ್ರಹ


Team Udayavani, Sep 24, 2020, 6:34 PM IST

ಬೆಳೆಹಾನಿ ಪರಿಹಾರಕ್ಕೆ ಆಗ್ರಹ

ಯಡ್ರಾಮಿ: ತಾಲೂಕಿನಲ್ಲಿ ಕಳೆದ ಹದಿನೈದುದಿನಗಳಿಂದ ವ್ಯಾಪಕ ಮಳೆ ಸುರಿದ ಪರಿಣಾಮ ರೈತರ ಬೆಳೆ ಹಾಗೂ ಮನೆಗಳು ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ತುರ್ತು ಪರಿಹಾರ ನೀಡುವಂತೆ ಆಗ್ರಹಿಸಿ ತಾಲೂಕು ಕರವೇ (ನಾರಾಯಣಗೌಡ ಬಣ) ವತಿಯಿಂದ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಗಲು ರಾತ್ರಿ ಎನ್ನದೆ ಸತತ ಬಿದ್ದ ಮಳೆಯಿಂದ ಹತ್ತಿ ಬೆಳೆ ವಿವಿಧ ರೋಗಬಾಧೆಯಿಂದ ಹಾಳಾಗುತ್ತಿದ್ದರೆ, ಭೂಮಿ ಅತಿ ಹೆಚ್ಚು ಹಸಿ ಆಗಿ ತೊಗರಿ ಬೆಳೆ ಒಣಗುತ್ತಿವೆ. ಇಷ್ಟೇ ಅಲ್ಲದೆ ಹಳ್ಳಿಗಳಲ್ಲಿನ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ರೈತರು ಅನುಭವಿಸುತ್ತಿರುವ ಈ ತೊಂದರೆಗಳಿಗೆ ಪರಿಹಾರವಾಗಿ ಸರ್ಕಾರ ಪ್ರತಿ ಎಕರೆಗೆ 20,000 ರೂ.ಗಳನ್ನು ನೀಡಬೇಕು. ಹಾಳಾದ ಮನೆಗಳ ಸಮೀಕ್ಷೆ ಮಾಡಿಸಿ ಸೂಕ್ತ ಪರಿಹಾರ ವಿತರಿಸುವ ಮೂಲಕ ರೈತರನ್ನು ಸಂಕಷ್ಟದಿಂದ ಕೂಡಲೇ ಪಾರು ಮಾಡಬೇಕೆಂದು ಕರವೇ ಹೋರಾಟಗಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರವೇ (ನಾರಾಯಣಗೌಡ ಬಣ) ಅಧ್ಯಕ್ಷ ದೇವಿಂದ್ರಪ್ಪಗೌಡ ಪೊಲೀಸ್‌ಪಾಟೀಲ,ಕಾರ್ಯದರ್ಶಿ ಮಹೇಶ ಮಾಲೀಪಾಟೀಲ, ಹಣಮಂತ್ರಾಯ ದುದ್ದಣಗಿ, ಲಕ್ಷ್ಮಣ ಕಲ್ಲೂರ, ಶಂಕರ ಬಿಳವಾರ, ರವಿಕುಮಾರ ಪಿ, ಆನಂದ ದೇವರಮನಿ, ಸುಧೀರ ಕಲ್ಲೂರ, ನಿಖೀಲ ಅರಳಗುಂಡಗಿ, ದತ್ತು ಮರಾಠಿ, ವಿಶ್ವನಾಥ ಗೌಂಡಿ ಇದ್ದರು.

…………………………………………………………………………………………………………………………………………………….

ಕೆಕೆಆರ್‌ಡಿಬಿಗೆ ಅನುದಾನ ನೀಡಿ : ಕಲಬುರಗಿ: ಈ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ 2 ಸಾವಿರ ಕೋ.ರೂ. ಅನುದಾನ ನಿಗದಿ ಮಾಡುವಂತೆ, ಸತತ ಮಳೆಯಿಂದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಈ ಭಾಗಕ್ಕೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಕಳೆದ ವರ್ಷ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬಂದಾಗ ಎರಡು ಸಾವಿರ ಕೋ.ರೂ. ನೀಡುವುದಾಗಿ ಹೇಳಿದ್ದರು. ಆದರೆ ಮೊನ್ನೆ ಬಂದಾಗ ಯಾವುದೇ ಚಕಾರವೆತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಾದರೂ ನುಡಿದಂತೆ ಅನುದಾನ ಬಿಡುಗಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅನ್ನಪೂರ್ಣ ಕ್ರಾಸ್‌ದಿಂದ ಆರ್‌ಟಿಒ ವರೆಗಿನ ರಸ್ತೆ ಅಗಲೀಕರಣ ಜತೆಗೆ ಸರಿಯಾದ ನಿಟ್ಟಿನಲ್ಲಿ ಅಭಿವೃದ್ಧಿಯಾಗಬೇಕೆಂದು ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ಸಚಿನ್‌ ಫ‌ರತಾಬಾದ್‌, ಮಲ್ಲಿಕಾರ್ಜುನ ನೀಲೂರ, ಪ್ರವೀಣ ಸಚಿನ್‌, ಅಕ್ಷಯ ಸಚಿನ್‌ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

ಕೋವಿಡ್ ಲಸಿಕೆ:  ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಕೋವಿಡ್ ಲಸಿಕೆ: ಷರತ್ತುಬದ್ಧ ಮಾರುಕಟ್ಟೆ ಒಪ್ಪಿಗೆ

ಉಕ್ರೇನ್‌ ಮೇಲೆ ರಷ್ಯಾ ಸವಾರಿ

ಉಕ್ರೇನ್‌ ಮೇಲೆ ರಷ್ಯಾ ಸವಾರಿ

ಹೈಕೋರ್ಟ್‌ ಎಚ್ಚರಿಕೆಗಾದರೂ ಬೆಲೆ ಕೊಟ್ಟು ರಸ್ತೆ ಗುಂಡಿಗಳನ್ನು ಮುಚ್ಚಿ

ಹೈಕೋರ್ಟ್‌ ಎಚ್ಚರಿಕೆಗಾದರೂ ಬೆಲೆ ಕೊಟ್ಟು ರಸ್ತೆ ಗುಂಡಿಗಳನ್ನು ಮುಚ್ಚಿ

ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!

ಅಸ್ತಮಾ, ಅಲರ್ಜಿಗೆ ನೈಸರ್ಗಿಕ ಬದುಕೇ ಪರಿಹಾರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3distric

ಒಂದೇ ಯೋಜನೆಗೆ ಸರ್ಕಾರದಿಂದ ಮೂರು ಜಿಲ್ಲೆ ಪ್ರಸ್ತಾವ ಏಕೆ?: ಉದ್ಯಮಿಗಳ ಅಸಮಾಧಾನ

2abulence

ಉಚಿತ ಆಂಬ್ಯುಲೆನ್ಸ್‌ ಸೇವೆಗೆ ಸಚಿವ ನಿರಾಣಿ ಚಾಲನೆ

1power’

27ಸಾವಿರ ಗ್ರಾಮೀಣ ಮನೆಗೆ ವಿದ್ಯುತ್‌: ಪಾಂಡ್ವೆ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

12function

ಕಲೆಗಳು ಉತ್ತಮ ಬದುಕಿಗೆ ದಿಕ್ಸೂಚಿ: ಕೊಲ್ಲೂರ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

ಜಿಲ್ಲೆಯಲ್ಲಿ 60 ಹೋಂ ಸ್ಟೇಗಳಿಗೆ ಅನುಮತಿ

Untitled-1

ಶುಲ್ಕ ವಿನಾಯಿತಿ ಮೊತ್ತ ಖಜಾನೆಗೆ ವಾಪಸ್‌!  

ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು

ಕುಂದಾಪುರ: ಜೋಡೆತ್ತಿನ ಗಾಡಿಯಲ್ಲಿ ಬಂದ ಮದುಮಗಳು

ವಿಧಾನಸಭೆಗೆ ಕೆಎಎಸ್‌ ಪ್ರಕರಣ

ವಿಧಾನಸಭೆಗೆ ಕೆಎಎಸ್‌ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.