ಕಲಬುರಗಿ: ದತ್ತನ ಪಾದುಕೆಗಳಿಗೆ ದೇವೇಗೌಡರಿಂದ ಪೂಜೆ
Team Udayavani, Nov 11, 2019, 10:32 AM IST
ಕಲಬುರಗಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗಾಣಗಾಪುರದಲ್ಲಿ ಸೋಮವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದತ್ತಾತ್ರೇಯನ ದರ್ಶನ ಪಡೆದರು.
ನಂತರ ಮಾತನಾಡಿದ ಅವರು, ಇವತ್ತು ಗಾಣಗಾಪುರದ ದತ್ತಾತ್ರೇಯನ ದರ್ಶನ ಪಡೆಯೋಕೆ ಬಂದಿದ್ದೇನೆ. ಗುರು ದತ್ತನ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಇದು ಅತ್ಯಂತ ಪುಣ್ಯ ಕ್ಷೇತ್ರ. ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಬಿಟ್ಟು ಶಾಂತಿ ಸಹಬಾಳ್ವೆಯಿಂದ ಬದುಕು ನಡೆಸಲಿ ಅಂತಾ ಬೇಡಿಕೊಂಡಿದ್ದೇನೆ ಎಂದರು.
50 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ. ಇವತ್ತು ಮತ್ತೆ ಬಂದು ಪೂಜೆ ಸಲ್ಲಿಸಿದ್ದೇನೆ. ನಾಡಿನ ಎಲ್ಲ ಜನರಿಗೂ ಕೂಡ ಒಳ್ಳೆಯದಾಗಲಿ ಅಂತಾ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
ಸುದೀರ್ಘವಾಗಿ 60 ವರ್ಷ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ಈ ಭಾಗದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಕಾರ್ಯಕರ್ತರನ ಜೊತೆ ಸಭೆ ನಡೆಸಲಿದ್ದೇನೆ ಎಂದು ಗೌಡರು ತಿಳಿಸಿದರು.