90ರ ಅಜ್ಜಿ ಸೋಂಕಿನಿಂದ ಪಾರು
Team Udayavani, May 31, 2021, 7:22 PM IST
ಆಳಂದ: ಕೊರೊನಾ ಸೋಂಕಿತ 13 ಹೊಸ ಪ್ರಕರಣಗಳು ರವಿವಾರ ಪತ್ತೆ ಯಾಗಿವೆ. ಈ ನಡುವೆ ಚಿಕಿತ್ಸೆಗೆ ಒಳಗಾಗಿ 16 ಮಂದಿ ಗುಣಮುಖ ಆಗಿದ್ದಾರೆ. ನಿಂಬಾಳ ಗ್ರಾಮದಲ್ಲಿ ಸೋಂಕು ತಗುಲಿದ್ದ 66 ವರ್ಷದ ಮಹಿಳೆ ಕಲಬುರಗಿಯ ಬಾಬಾಹೌಸ್ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾಳೆ.
154 ಜನರು ಐಸೋಲೇಷನ್‌ಗೆ: ಕಳೆದ ಸಾಲಿನ ಏಪ್ರಿಲ್ 20ರಿಂದ ಇದುವರೆಗೂ 4130 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3803 ಮಂದಿ ಗುಣಮುಖರಾಗಿದ್ದಾರೆ. 121 ಮಂದಿ ಮೃತಪಟ್ಟಿದ್ದಾರೆ. ಬಾಕಿ 207 ಸಕ್ರಿಯ ಸೋಂಕಿತರಿದ್ದು, ಇವರಲ್ಲಿ 50 ಮಂದಿ ಜಿಲ್ಲಾಸ್ಪತ್ರೆಯಲ್ಲಿ, ಮೂವರು ಆಳಂದ ಕೋವಿಡ್ ಆರೈಕೆ ಕೇಂದ್ರದಲ್ಲಿ, 154 ಮಂದಿ ಹೋಂ ಐಸೋಲೇಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
90 ವರ್ಷದ ಅಜ್ಜಿ ಗೆಲುವು: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ 90 ವರ್ಷದ ಜೈಸುನ್‌ಬಿ ಯಾದಗಿರಿ ಎನ್ನುವರು ಕೊರೊನಾ ಸೋಂಕಿನ ವಿರುದ್ಧ ಹೋರಾಡಿ, ಕಲಬುರಗಿ ಖಾಸಗಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ ಎಂದು ಮೊಮ್ಮಗ ಅಬ್ದುಲ್ ರಬ್ಟಾನಿ ಸಿದ್ಧಿಕಿ ತಿಳಿಸಿದ್ದಾರೆ. ಕೋವಿಡ್ ಆರೈಕೆ: ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ ವಸತಿ ನಿಲಯದಲ್ಲಿ, ಮಾದನಹಿಪ್ಪರಗಾ ಮತ್ತು ನಿಂಬರಗಾ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು
ಮಳೆಯ ಅಬ್ಬರ : ಉಡುಪಿ, ದ.ಕನ್ನಡದಲ್ಲಿ ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ
ಅಂಜನಾದ್ರಿಯನ್ನು ಹೈಜಾಕ್ ಮಾಡಲು ಬಿಜೆಪಿ-ಸಂಘಪರಿವಾರದವರಿಗೆ ಬಿಡಲ್ಲ: ಎಚ್.ಆರ್.ಶ್ರೀನಾಥ
ಚಾ.ನಗರದಲ್ಲಿ ʼಬೈರಾಗಿʼ ವೀಕ್ಷಿಸಿದ ಶಿವಣ್ಣ: ಚಿತ್ರ ಪ್ರದರ್ಶನ ಯಾತ್ರೆಗೆ ಅದ್ದೂರಿ ಸ್ವಾಗತ
ಚಂದ್ರಶೇಖರ್ ಗುರೂಜಿ ಹತ್ಯೆ : ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಲು ಕ್ರಮ : ಬೊಮ್ಮಾಯಿ