ಕೃಷಿಯಲ್ಲಿ ವೈಜ್ಞಾನಿಕ ಪದತಿ ಅನುಸರಿಸಿ

Team Udayavani, Jun 8, 2018, 10:40 AM IST

gul-4.jpg

ಶಹಾಬಾದ: ರೈತರು ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸುವುದರಿಂದ ಬೆಳೆಗಳ ಮೇಲೆ ಹಾಗೂ ಕೃಷಿ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ರೈತರು ಸಾವಯವ ಗೊಬ್ಬರದ ಬಳಕೆ ಮಾಡಿ ಭೂಮಿಯ ಫಲವತ್ತತೆ ಕಾಪಾಡುವಲ್ಲಿ ಕಾಳಜಿ ವಹಿಸಬೇಕು ಎಂದು ರದ್ದೆವಾಡಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಚೇತನ ಟಿ. ರೈತರಿಗೆ ಸಲಹೆ ನೀಡಿದರು.

ಕೃಷಿ ಇಲಾಖೆ ವತಿಯಿಂದ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಇಳುವರಿ ಪಡೆಯುವ ಉದ್ದೇಶದಿಂದ ಹೊಲಗಳಿಗೆ ಅತಿಯಾಗಿ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುತ್ತಿದ್ದೇವೆ. ಇದರಿಂದ ಭೂಮಿಯಲ್ಲಿ ಲವಣಾಂಶ ಕಡಿಮೆಯಾಗುತ್ತಿದೆ. ಫಲವತ್ತಾದಗಿದ್ದ ಭೂಮಿಗಳು ಬಂಜರು ಭೂಮಿ ಆಗುತ್ತಿವೆ. ಅಲ್ಲದೇ ರೈತರ ಹತ್ತಿರ ದನಗಳ ಸಂಖ್ಯೆಯೂ ಕಡಿಮೆ ಆಗುತ್ತಿವೆ. ಇದರಿಂದ ತಿಪ್ಪೆ ಗೊಬ್ಬರವೂ ಸಿಗುತ್ತಿಲ್ಲ. ಇದರಿಂದ ರೈತರು ರಾಸಾಯನಿಕ ಗೊಬ್ಬರಕ್ಕೆ ಮೊರೆ ಹೋಗುತ್ತಿದ್ದಾರೆ ಎಂದರು.

ಅವೈಜ್ಞಾನಿಕ ಕೃಷಿ ಪದ್ಧತಿ ಕೈಬಿಟ್ಟು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವತ್ತ ರೈತರು ಮುಂದಾಗಬೇಕು. ರೈತರು ಕೃಷಿ ಇಲಾಖೆಯಲ್ಲಿ ನೀಡುವ ಬೀಜಗಳ ಜೊತೆಗೆ ಲಘುಪೋಷಕಾಂಶ ಬಳಸಿ. ಬೀಜ ಬಿತ್ತನೆ ಮಾಡುವ ಮೊದಲು ಬೀಜ ಕಠಿಣಗೊಳಿಸಿ. ಟ್ರೈಕೋಡರ್ಮದಿಂದ ಬಿಜೋಪಚಾರ ಮಾಡಿ. ಬಿತ್ತುವ ಮುಂಚೆ ಭೂಮಿಯಲ್ಲಿ ಮತ್ತು ತಿಪ್ಪೆ ಗೊಬ್ಬರದಲ್ಲಿ ಟ್ರೈಕೋಡರ್ಮ ಹಾಕಿ. ಇದರಿಂದ ತೊಗರಿಯಲ್ಲಿ ಕಂಡು ಬರುವ ನೆಟೆರೋಗ ತಡೆಯಲು ಸಾಧ್ಯಎಂದು ತಿಳಿಸಿದರು.

ಕೃಷಿ ಅಧಿಕಾರಿ ಕರಣಕುಮಾರ, ಸಹಾಯಕ ಕೃಷಿ ಅಧಿಕಾರಿ ಸೈಯದ್‌ ಪಟೇಲ್‌ ಮಾತನಾಡಿದರು. ನಂತರ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ರೈತ ಸಂಘದ ಶಿವಶರಣಪ್ಪಗೌಡ, ಶಾಂತಪ್ಪ ಪೂಜಾರಿ,ಮಹಾಂತಸ್ವಾಮಿ ಸ್ಥಾವರಮಠ, ರಮೇಶ ಎಸ್‌.ಮರತೂರ, ಶಿವಕುಮಾರ, ಹಣಮಂತರಾವ, ರುಕುಂಪಟೇಲ್‌, ಮಾಲಿ ಪಾಟೀಲ, ಶರಣು ಕಡಬೂರ, ಶಿವಕುಮಾರ ಹಿರೆಣ್ಣಾ, ಪ್ರವೀಣ ಸಾಗರ ಅತಿಥಿಗಳಾಗಿದ್ದರು.

ಟಾಪ್ ನ್ಯೂಸ್

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

ವಿಶ್ವಗುರು ಭಾರತ 100ನೇ ಸಂಚಿಕೆ ಬಿಡುಗಡೆ; 5ಜಿ ಸೇವೆ ಶೀಘ್ರ ಕಾರ್ಯಾರಂಭ: ಸಚಿವೆ ನಿರ್ಮಲಾ

ವಿಶ್ವಗುರು ಭಾರತ 100ನೇ ಸಂಚಿಕೆ ಬಿಡುಗಡೆ; 5ಜಿ ಸೇವೆ ಶೀಘ್ರ ಕಾರ್ಯಾರಂಭ: ಸಚಿವೆ ನಿರ್ಮಲಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3kharge

ಬಿಜೆಪಿಯವರು ನಕಲಿ ದೇಶಭಕ್ತರು: ಪ್ರಿಯಾಂಕ್‌

2bio

ಬಯೋ ಡೀಸೆಲ್‌ ಬಳಕೆಗೆ ಆದ್ಯತೆ ಅಗತ್ಯ

1covid

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೊರೊನಾ: ಪಾಸಿಟಿವಿಟಿ ದರ 4.09ಕ್ಕೇರಿಕೆ

1-sdsdsadsad

ಹಳಕರ್ಟಿ ಶರೀಫ್ ದರ್ಗಾ ಉರುಸ್‌ಗೆ ಭಕ್ತಸಾಗರ

5-swami

ರಾಜಶೇಖರ ಶ್ರೀ ಮೌನಾನುಷ್ಠಾನ ಆರಂಭ

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.