ಕೊರಚ-ಕೊರಮ ಸಮುದಾಯಕ್ಕೆ ಟಿಕೆಟ್‌ ನೀಡಲು ಒತ್ತಾಯ

Team Udayavani, Feb 25, 2019, 4:57 AM IST

ಆಳಂದ: ಬರುವ ಲೋಕಸಭಾ ಚುನಾವಣೆಯಲ್ಲಿ ಕೊರಚ, ಕೊರಮ ಜನಾಂಗಕ್ಕೆ ಟಿಕೆಟ್‌ ನೀಡುವ ಮೂಲಕ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಕೊರಚ, ಕೊರಮ ಸಂಘದ ರಾಜ್ಯಾಧ್ಯಕ್ಷ ಬಿ. ಮಾದೇಶ ರಾಜಕೀಯ ಪಕ್ಷಗಳಿಗೆ ಆಗ್ರಹಿಸಿದರು.  ಪಟ್ಟಣದ ಗುರುಭವನ ಆವರಣದಲ್ಲಿ ರವಿವಾರ ಶರಣ ನುಲಿಯ ಚಂದಯ್ಯನವರ 911ನೇ ಜಯಂತ್ಯುತ್ಸವ, ಹಳ್ಳದ ಯಲ್ಲಮ್ಮದೇವಿ 18ನೇ ಜಾತ್ರೆ, ತಾಲೂಕು ಕೊರಮ ಸಮಾಜದ ಜನ ಜಾಗೃತಿ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಸಮುದಾಯಕ್ಕೆ ಟಿಕೆಟ್‌ ನೀಡದೆ ಕಡೆಗಣಿಸುವ ಪಕ್ಷಗಳಿಗೆ ಬೆಂಬಲವಿಲ್ಲ ಎಂದು ಘೋಷಿಸಿದ ಅವರು, ನಾವು ಕೇಳುವ ಹಕ್ಕು ಭಿಕ್ಷೆಯಲ್ಲ. ಸಂವಿಧಾನ ಬದ್ಧ ಹಕ್ಕಾಗಿದೆ. ದೇಶದ ಸಂವಿಧಾನವೇ ಸಮುದಾಯಕ್ಕೆ ಧ್ವನಿಯಾಗಿದೆ. ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ ಹೊಂದಿರುವ ಕೊರಚ, ಕೊರಮ ದೇವ ಸಮುದಾಯಕ್ಕೆ ರಾಜ್ಯ ಸರ್ಕಾರ ಕೂಡಲೇ ಅಲೆಮಾರಿ ನಿಗಮ ಸ್ಥಾಪಿಸುವ ಮೂಲಕ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಅನೇಕ ಸರ್ಕಾರಿ ಸೌಲಭ್ಯಗಳನ್ನು ಅಧಿಕಾರಿಗಳು, ಜನ ಪ್ರತಿನಿಧಿಗಳು ಅನ್ಯ ಸಮುದಾಯಕ್ಕೆ ನೀಡುವ ಮೂಲಕ ಸಮುದಾಯವನ್ನು ಕಡೆಗಣಿಸಿದ್ದಾರೆ. ಹೀಗಾಗಬಾರದು. ಸಮುದಾಯದ ಮೂಲ ಕಸುಬಿಗೆ ತರಬೇತಿ ದೊರೆಯಬೇಕು. ಕಾರ್ಖಾನೆ ಸ್ಥಾಪಿಸಬೇಕು. ಮಾರುಕಟ್ಟೆ ವಾತಾವರಣ ಕಲ್ಪಿಸಬೇಕು. ಶಿಕ್ಷಣಕ್ಕೆ ಮಹತ್ವ ನೀಡಿ ಐಎಎಸ್‌, ಐಪಿಎಸ್‌ ಹುದ್ದೆಗಳನ್ನು ಸಮಾಜದ ವಿದ್ಯಾರ್ಥಿಗಳು ಪಡೆಯಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸಲು ರಾಜ್ಯದಲ್ಲಿ ಸಂಘಟಿತ ಹೋರಾಟಕ್ಕೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ನುಲಿಯ ಚಂದಯ್ಯನವರ ಪೀಠದ ಜಗದ್ಗುರು ವೃಷಭೇಂದ್ರ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಶರಣ ನುಲಿಯ ಚಂದಯ್ಯನವರ ತತ್ವಗಳನ್ನು ಪಾಲಿಸಿ ಎಂದರು. 

ಬಿಜೆಪಿ ಮುಖಂಡ ಅಶೋಕ ಗುತ್ತೇದಾರ ಸಮಾವೇಶ ಉದ್ಘಾಟಿಸಿದರು. ಸುನೀಲ ಮಾನ್ಪಡೆ, ಕೊರಮ ಸಮಾಜದ ವಿಜಯಪುರ ಜಿಲ್ಲಾಧ್ಯಕ್ಷ ಗೋವಿಂದರಾವ್‌ ಭಜಂತ್ರಿ, ಕಲಬುರಗಿ ಎಇಇ ಶಾಂತಪ್ಪ ಎಸ್‌. ಜಾಧವ್‌, ಕಮಲಾಕರ್‌ ಮಾನೆ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೊರಮ ಸಮಾಜದ
ಅಧ್ಯಕ್ಷ ಕಮಲಾಕರ ಎಲ್‌. ಮಾನೆ ಸಮಾಜ ಸಂಘಟನೆಗೆ ಆದ್ಯತೆ ನೀಡಿ ಎಂದು ಹೇಳಿದರು.

ಗುತ್ತಿಗೆದಾರ ಪ್ರಕಾಶ ಬಿ. ಫುಲಾರ, ತಾಯಪ್ಪ ಗುತ್ತೇದಾರ, ಜೇವರ್ಗಿ ತಾಪಂ ಇಒ ಪ್ರಭು ಸಿ. ಮಾನೆ, , ಜಿಲ್ಲಾ ಕೊರಮ ಸಮಾಜದ ಗೌರವಾಧ್ಯಕ್ಷ ಬಸಣ್ಣಾ ಭಜಂತ್ರಿ, ಜಿಲ್ಲಾಧ್ಯಕ್ಷ ಗಿರೀಶ ಭಜಂತ್ರಿ, ಸಮಾಜದ ತಾಲೂಕು ಗೌರವಾಧ್ಯಕ್ಷ ಅಣ್ಣಪ್ಪ ಜಾಧವ್‌, ಸೂರ್ಯಕಾಂತ ಜಾಧವ್‌ ಮಾರುತಿ ಜಾಧವ್‌, ಪ್ರಧಾನ ಕಾರ್ಯದರ್ಶಿ ಲೋಕೇಶ ಜಾಧವ್‌, ಕಾಶಿನಾಥ ಜಾಧವ್‌, ಸುರೇಶ ಜಾಧವ್‌, ಹಣಮಂತ ಜಾಧವ್‌, ಕಲ್ಯಾಣಿ ಜಾಧವ್‌, ರಮೇಶ ಜಾಧವ್‌, ಮಲ್ಲಿಕಾರ್ಜುನ ಜಾಧವ್‌, ಭಜರಂಗ ಎಸ್‌. ಮಾನೆ, ಬಾಲಾಜಿ ಎ. ಜಾಧವ್‌ ಮತ್ತಿತರರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಗುರುಭವನ ವರೆಗೆ ನುಲಿಯ ಚಂದಯ್ಯನವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ನಂತರ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ವಿವಿಧ ಜಿಲ್ಲೆಯ ತಾಲೂಕು ಪದಾಧಿ ಕಾರಿಗಳು ಭಾಗವಹಿಸಿದ್ದರು. ಇದೆ ವೇಳೆ ಕೊರಚ, ಕೊರಮ ಸಂಘದ ಸದಸ್ಯತ್ವ ರಾಜ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಮೇಶ ಜಾಧವ ನಿರೂಪಿಸಿದರು. ಪ್ರದೀಪ ತಳಕೇರಿ ಭಾವಗೀತೆ ಹಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ