Udayavni Special

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

Team Udayavani, May 9, 2021, 5:12 PM IST

ಮಾಜಿ ಸಂಸದ ಕೆ. ಬಿ ಶಾಣಪ್ಪ ಕೋವಿಡ್-19 ಸೋಂಕಿಗೆ ಬಲಿ

ಕಲಬುರಗಿ: ರಾಜ್ಯಸಬೆಯ ಮಾಜಿ ಸದಸ್ಯ, ಮಾಜಿ ಸಚಿವ, ಹಿರಿಯ ನಾಯಕ ಕೆ.ಬಿ ಶಾಣಪ್ಪ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ ಸೋಂಕು ದೃಢವಾಗಿದ್ದ ಅವರನ್ನು ಮೂರು ದಿನಗಳ ಹಿಂದೆ ಇಲ್ಲಿನ ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಇಂದು ಕೊನೆಯುಸಿರೆಳೆದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಆರಂಭದಲ್ಲಿ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡ ಶಾಣಪ್ಪ ಅವರು ಎರಡು ಸಲ ಶಹಾಬಾದ ಮೀಸಲು ಕ್ಷೇತ್ರದಿಂದ ಕಮ್ಯುನಿಸ್ಟ್ ಪಕ್ಷದಿಂದ ಶಾಸಕರಾಗಿದ್ದರು. ಅದರಲ್ಲೂ ಒಂದು ಬಾರಿ ಕೇವಲ 80 ಮತಗಳ ಅಂತರದಿಂದ ಸಿ. ಗುರುನಾಥ ಎದುರು ಗೆಲುವು ಸಾಧಿಸಿದ್ದರು. ನಂತರ ಹಲವು ಚುನಾವಣೆಯಲ್ಲಿ ಸ್ಪರ್ಧಿಸಿದಾದರೂ ಗೆಲುವು ಸಾಧಿಸಲಿಲ್ಲ.

ತದನಂತರ ಜನತಾ ಪರಿವಾರ ನಾಯಕ ಎಂದೇ ಖ್ಯಾತಿ ಪಡೆದಿದ್ದ ಶಾಣಪ್ಪ ಅವರು ಜೆ. ಎಚ್. ಪಟೇಲ್ ಸಂಪುಟದಲ್ಲಿ ಮಂತ್ರಿಯಾಗಿದ್ದರು.

ಎಂಎಲ್ಎ- ಎಂಎಲ್ಸಿ ಇಲ್ಲದೇ ಮಂತ್ರಿಯಾದವರು: ಕೆ.ಬಿ. ಶಾಣಪ್ಪ ಎಂಎಲ್ಎ ಇರದಿದ್ದರೂ ಜೆ.ಎಚ್.‌ಪಟೇಲ್ ಅವರು ಶಾಣಪ್ಪ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡು ಅಬಕಾರಿ ಖಾತೆಯನ್ನೇ ನೀಡಿದ್ದರು. ನಂತರ ಆರು ತಿಂಗಳೊಳಗೆ ಎಂಎಲ್ಎ ಇಲ್ಲವೇ ಎಂಎಲ್ಸಿ ಆಗದಿದ್ದಕ್ಕೆ ಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಜೆ.ಪಿ. ಚಳುವಳಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು.

ಇದನ್ನೂ ಓದಿ:ನಿಮಗೆಷ್ಟು ಗೊತ್ತು ‘ಅಮಾಂಗ್ ಅಸ್’ ಎಂಬ ಮಲ್ಟಿಪ್ಲೇಯರ್ ಗೇಮ್ ಬಗ್ಗೆ.? ಇಲ್ಲಿದೆ ಮಾಹಿತಿ

ನಂತರ ಬಿಜೆಪಿ ಸೇರಿದ್ದ ಕೆ.ಬಿ. ಶಾಣಪ್ಪ ಅವರನ್ನು ಮೊದಲು ರಾಜ್ಯಸಭೆಗೆ ನಾಮಕರಣಗೊಳಿಸಲಾಗಿತ್ತು. ತದನಂತರ ರಾಜ್ಯ ವಿಧಾನ ಪರಿಷತ್ ಗೂ ನಾಮನಿರ್ದೇಶನಗೊಳಿಸಲಾಗಿತ್ತು. ಇತ್ತೀಚಿಗಷ್ಟೇ ಅಂದರೆ ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ್ದರು.

ಪುಸ್ತಕ ಓದುವುದರಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದ ಕೆ. ಬಿ.‌ಶಾಣಪ್ಪ ಅವರು ಖ್ಯಾತ ಲೇಖಕರ ಪ್ರಸಿದ್ದ ಆಂಗ್ಲ ಕೃತಿಗಳನ್ನು ಓದಿರುವುದನ್ನು ಕೆಲವು ಸಂದರ್ಭಗಳಲ್ಲಿ ಉಲ್ಲೇಖಿಸುತ್ತಿದ್ದರು.

ಬಿಎಸ್ ವೈ-ಎಚ್ ಡಿಕೆ ಸಂತಾಪ: ಮಾಜಿ ಸಚಿವ ಕೆ. ಬಿ. ಶಾಣಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಣಪ್ಪ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು. ಸದನದಲ್ಲಿ ಸದಾ ನೊಂದ ಜನರ ದನಿಯಾಗಿದ್ದರು. ಅವರ ನಿಧನದಿಂದ ಒಬ್ಬ ನೇರ ನಿಷ್ಠುರ ನಡವಳಿಕೆಯ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು ಆಗಿದ್ದ ಹಿರಿಯ ಮುತ್ಸದ್ಧಿ ರಾಜಕಾರಣಿ ಕೆ. ಬಿ. ಶಾಣಪ್ಪನವರು ಕೊರೊನಾ ಸೋಂಕಿನಿಂದ ನಿಧನರಾದ ಸುದ್ದಿ ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ. ಅಭಿಮಾನಿಗಳು ಮತ್ತು ಕುಟುಂಬವರ್ಗಕ್ಕೆ ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಗತ್ ಕಿಲಾಡಿ! ವೈದ್ಯನೆಂದು ಹೇಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಹಣ್ಣಿನ ವ್ಯಾಪಾರಿ!

ಟಾಪ್ ನ್ಯೂಸ್

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಆನ್ಲೈನ್ ತರಗತಿಯ ಖಿನ್ನತೆಯಿಂದ ನೇಣಿಗೆ ಶರಣಾದ ಮಗಳು: ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವು

ಆನ್ಲೈನ್ ತರಗತಿಯ ಖಿನ್ನತೆಯಿಂದ ನೇಣಿಗೆ ಶರಣಾದ ಮಗಳು: ವಿಷಯ ತಿಳಿದ ತಂದೆ ಹೃದಯಾಘಾತದಿಂದ ಸಾವು

ಯುವಕನ ಕೊಲೆ ಮಾಡಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಯುವಕನ ಕೊಲೆ ಮಾಡಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

Shivamogga News, Eshwarappa

ಶಿವಮೊಗ್ಗ, ಭದ್ರಾವತಿ ಬಿಟ್ಟು ಉಳಿದೆಡೆ ಅನ್ ಲಾಕ್ 1.0 ನಿರ್ಬಂಧಗಳು ಜಾರಿ : ಈಶ್ವರಪ್ಪ

ತಮಿಳುನಾಡಿನಲ್ಲಿ ಕೋವಿಡ್ 19 ಲಾಕ್ ಡೌನ್ ಜೂನ್ 28ರವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

ತಮಿಳುನಾಡಿನಲ್ಲಿ ಕೋವಿಡ್ 19 ಲಾಕ್ ಡೌನ್ ಜೂನ್ 28ರವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

ಪತ್ನಿ ಸಾವಿನಿಂದ ತನ್ನ‌ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

ಅಪ್ಪಂದಿರ ದಿನವೇ ದುರಂತ: ತನ್ನ ಇಬ್ಬರು ಮುದ್ದು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಂದೆ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ್ಗಹಗ್ದ್ಗಹಗ್ದ

ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ತೆರಳುವವರಿಗೆ 22 ರಿಂದ ಲಸಿಕೀಕರಣ : ಡಿಸಿಎಂ

dfghgfgh

ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ದಿಢೀರ್ ಮುಂಬೈಗೆ ತೆರಳಿದ ರಮೇಶ್ ಜಾರಕಿಹೊಳಿ

Shivamogga News, Eshwarappa

ಶಿವಮೊಗ್ಗ, ಭದ್ರಾವತಿ ಬಿಟ್ಟು ಉಳಿದೆಡೆ ಅನ್ ಲಾಕ್ 1.0 ನಿರ್ಬಂಧಗಳು ಜಾರಿ : ಈಶ್ವರಪ್ಪ

sdfghjhgfdsa

ಬಿಜೆಪಿ ಸರ್ಕಾರದಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

ಲೋಕಸಭಾ ಸಚಿವಾಲಯದಿಂದ ಕನ್ನಡದ ಅವಗಣನೆ

ಲೋಕಸಭಾ ಸಚಿವಾಲಯದಿಂದ ಕನ್ನಡದ ಅವಗಣನೆ

MUST WATCH

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

ಹೊಸ ಸೇರ್ಪಡೆ

ದ್ಗಹಗ್ದ್ಗಹಗ್ದ

ಕ್ರೀಡಾಪಟುಗಳು ಸೇರಿ ವಿದೇಶಕ್ಕೆ ತೆರಳುವವರಿಗೆ 22 ರಿಂದ ಲಸಿಕೀಕರಣ : ಡಿಸಿಎಂ

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

ಮಂಗಳೂರು : ನಿಯಮ ಮೀರಿ 4 ಜೋಡಿಗಳ ಮದುವೆ; ಅಧಿಕಾರಿಗಳ ದಾಳಿ

dfghgfgh

ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ಮೇಲೆ ದಿಢೀರ್ ಮುಂಬೈಗೆ ತೆರಳಿದ ರಮೇಶ್ ಜಾರಕಿಹೊಳಿ

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

ಈ ಗ್ರಾಮದಲ್ಲಿ Covid 19 ಲಸಿಕೆ ಪಡೆದ ವ್ಯಕ್ತಿಗಳಿಗೆ ಮಾಲ್, ಬಾರ್, ಪಬ್ ಗಳಲ್ಲಿ ವಿಶೇಷ ಆಫರ್

atm-cash-withdrawing-will-be-expensive-from-july-1-sbi-has-made-changes-in-many-rules

ಎಟಿಎಮ್ ವಿತ್ ಡ್ರಾ ಜುಲೈ 1 ರಿಂದ ದುಬಾರಿ : ಎಸ್ ಬಿ ಐ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.