ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಕಾಂಗ್ರೆಸ್‌

Team Udayavani, Dec 29, 2020, 4:49 PM IST

ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷ ಕಾಂಗ್ರೆಸ್‌

ಕಲಬುರಗಿ: ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷವಾಗಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಕಾಂಗ್ರೆಸ್‌ ಪಕ್ಷದ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಹೋರಾಟಗಾರರು ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷರಿಂದ ಭಾರತ ದೇಶದಸ್ವಾತಂತ್ರ್ಯಪಡೆದರು. ಸ್ವಾತಂತ್ರ್ಯಕ್ಕಾಗಿ ಅನೇಕ ಕಾಂಗ್ರೆಸ್‌ಮುಖಂಡರು ತಮ್ಮ ಜೀವನವನ್ನೇ ಮುಡುಪಿಟ್ಟಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷಜಗದೇವ ಗುತ್ತೇದಾರ್‌, ಮಾಜಿಶಾಸಕ ತಿಪ್ಪಣ್ಣಪ್ಪ ಕಮಕನೂರಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಧ್ವಜಹಾರಿಸುವ ಮೂಲಕ ಸಂಸ್ಥಾಪನಾ ದಿನಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂವಿಧಾನದ ಮುನ್ನುಡಿ ಓದಿ ಪ್ರತಿಜ್ಞೆಪ್ರತಿ ಸ್ವೀಕರಿಸುವ ಮೂಲಕ ಕಾಂಗ್ರೆಸ್‌ ಹಿರಿಯ ಮುಖಂಡರಾದ ಬಾಬುರಾವ ಜಾಗೀರದಾರ, ನಾರಾಯಣರಾವ ಕಾಳೆ, ಆಲಮಖಾನ್‌, ಸಜ್ಜಾದ ಹುಸೇನ ಮೈನಾಳ, ಬಾಬುರಾವ್‌ ತುಂಬಾ,ವೀರಣ್ಣಗೌಡ ಮಲ್ಲಾಬಾದಿ, ಸವಿತಾಸಜ್ಜನ್‌ ಅವರನ್ನು ಸನ್ಮಾನಿಸಲಾಯಿತು.ಮಾಜಿ ಮೇಯರ್‌ ಶರಣಕುಮಾರಮೋದಿ, ಪ್ರಮುಖರಾದ ಡಾ. ಕಿರಣದೇಶಮುಖ, ಲತಾ ರವಿ ರಾಠೊಡ, ಮಹಾಂತಪ್ಪ ಸಂಗಾವಿ, ಚಂದ್ರಿಕಾಪರಮೇಶ್ವರ, ಭೀಮರಾವ ಟಿಟಿ ಸೇರಿದಂತೆ ಮುಂತಾದವರಿದ್ದರು.

ಮಹಾನ್‌ ನಾಯಕರಿಂದ ಕಾಂಗ್ರೆಸ್‌ ಸೃಷ್ಟಿ : ರಾಠೊಡ

ಚಿಂಚೋಳಿ: ಭಾರತ ದೇಶ ಪರಕೀಯ ಆಡಳಿತದಿಂದ ಹೊರ ಬರಲು ಮಹಾನ್‌ ನಾಯಕರುಜೊತೆಗೂಡಿ ಬೆಳೆಸಿದ ಪಕ್ಷ ಭಾರತೀಯರಾಷ್ಟ್ರೀಯ ಕಾಂಗ್ರೆಸ್‌ ಆಗಿದ್ದು, ಬಿಜೆಪಿಸುಳ್ಳುಗಳನ್ನು ಸೃಷ್ಟಿಸಿ ದೇಶದ ಯುವಕರಲ್ಲಿಗೊಂದಲದ ವಾತಾವರಣ ನಿರ್ಮಿಸುತ್ತಿದೆಎಂದು ಕಾಂಗ್ರೆಸ್‌ ಮುಖಂಡ ಸುಭಾಷರಾಠೊಡ ಟೀಕಿಸಿದರು.

ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್‌ ಶಾಲೆ ಸಭಾಂಗಣದಲ್ಲಿ 136ನೇ ಕಾಂಗ್ರೆಸ್‌ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಭಾರತ ದೇಶವುಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆಇತ್ತು. ಆದರೆ ನಮ್ಮ ದೇಶವು ಜಗತ್ತಿನಲ್ಲಿ4ನೇ ಸ್ಥಾನ ಪಡೆದಿದ್ದು ಕಾಂಗ್ರೆಸ್‌ ಪಕ್ಷದನಾಯಕರಿಂದ. ದೇಶದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದ ನಂತರ ಇತಿಹಾಸವನ್ನು ತಿರುಚಿ,ಗೊಂದಲಮಯ ವಾತಾವರಣ ಸೃಷ್ಟಿಸಿ ದೊಡ್ಡದಾಗಿ ಪ್ರಚಾರ ನಡೆಸುತ್ತಿದೆ ಎಂದರು.

ಹಿರಿಯ ಮುಖಂಡರಾದ ವಿಶ್ವನಾಥ ಪಾಟೀಲ, ಬಸವಣ್ಣ ದೇಶಮುಖ, ಶಿವರಾಜದೇಗಲಮಡಿ, ಹುಸೇನ ಡ್ರೆ„ವರ್‌, ಸಾಯಬಣ್ಣಮಾಸ್ಟರ್‌, ಖಾನಸಾಬ್‌ ಪೋಲಕಪಳ್ಳಿ,ಬಾಬುಮಿಯ್ನಾ ಅವರನ್ನು ಸನ್ಮಾನಿಸಲಾಯಿತು. ಕೆ.ಎಂ. ಬಾರಿ ಮಾತನಾಡಿದರು. ಬಸವರಾಜಮಲಿ, ಗೋಪಾಲರಾವ್‌ ಕಟ್ಟಿಮನಿ, ಆರ್‌.ಗಣಪತರಾವ್‌, ಶಬ್ಬೀರ ಅಹೆಮದ್‌, ಜಗನ್ನಾಥಕಟ್ಟಿ, ಮಲ್ಲಿಕಾರ್ಜುನ ಭೂಶೆಟ್ಟಿ, ಬಸವರಾಜಕಡಬೂರ, ಶಿವಕುಮಾರ ಕೊಳ್ಳುರ, ಅಬ್ದುಲ್‌ಬಾಸೀತ್‌, ಉಲ್ಲಾಸಕುಮಾರ, ವೀರಶೆಟ್ಟಿಪಾಟೀಲ ಇನ್ನಿತರರಿದ್ದರು. ತಾಲೂಕು ಕಾಂಗ್ರೆಸ್‌ ಬ್ಲಾಕ್‌ ಸಮಿತಿ ಅಧ್ಯಕ್ಷ ಅನಿಲ ಕುಮಾರ ಜಮಾದಾರ ಸ್ವಾಗತಿಸಿದರು, ಯುವ ಮುಖಂಡ ಅಮರ ಲೋಡನೋರ ನಿರೂಪಿಸಿದರು, ಸಂತೋಷ ಗುತ್ತೆದಾರ ವಂದಿಸಿದರು.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.