Udayavni Special

ಮೂಗಿನಿಂದ ಮೆದುಳಿಗೆ ಹೊಕ್ಕಿದ್ದ ಗಡ್ಡೆ ಹೊರಕ್ಕೆ


Team Udayavani, Jun 16, 2021, 4:24 PM IST

ಸದ್ಗಹಜಹಗ್ದರತಯು

ಕಲಬುರಗಿ: ಮೂಗಿನಲ್ಲಿ ಸಣ್ಣದಾಗಿ ಕ್ಯಾನ್ಸರ್‌ ಗಡ್ಡೆ ಬೆಳೆದು ಮದುಳಿಗೆ ಹರಡಿ ಬೆÅçನ್‌ ಟ್ಯೂಮರ್‌ ಆಗಿದ್ದ 16 ವರ್ಷದ ಬಾಲಕಿಗೆ ಕಲಬುರಗಿ ವೈದ್ಯರು “ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ’ ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಯಡಿ ಉಚಿತ ವಾಗಿ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಬಸವೇಶ್ವರ ಆಸ್ಪತ್ರೆಯ 30 ವೈದ್ಯರ ತಂಡ ಸತತ 11 ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೀದರ್‌ ಜಿಲ್ಲೆಯ ಹುಮನಾಬಾದ ತಾಲೂ ಕಿನ ಹುಡಗಿ ಗ್ರಾಮದ ಬಾಲಕಿ ನೀಲಾಂಬಿಕಾ ಭಾಗಿರಥಿಗೆ ಒಂದು ವರ್ಷ ದಿಂದ ಉಸಿರಾಟ ಸಮಸ್ಯೆ ಎದುರಿಸುತ್ತಿದ್ದಳು. ಅಲ್ಲದೇ, ಆಕೆಯ ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು.

ಹೀಗಾಗಿ ಇದೇ ಮೇ 31ರಂದು ಪೋಷಕರು ಆಕೆಯನ್ನು ಕಿವಿ, ಮೂಗು ಮತ್ತು ಗಂಟಲು (ಇಎನ್‌ಟಿ) ತಜ್ಞರಿಗೆ ತೋರಿಸಲೆಂದು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆಗ ಮೂಗಿನಲ್ಲಿ ಗಡ್ಡೆ ಬೆಳೆದಿರುವುದನ್ನು ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ| ಸಿ.ಬಿ. ನಂದ್ಯಾಳ ಪತ್ತೆ ಹೆಚ್ಚಿಸಿದ್ದರು. ಆಗ ಸಿಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸ್ಕಾನ್‌ ಮಾಡಿದಾಗ ಗಡ್ಡೆ ಬಾಲಕಿಯ ಮೂಗಿನ ಮೂಲಕ ಕಣ್ಣುಗಳ ಎಡ ಭಾಗದಿಂದ ಮದುಳಿಗೆ ವ್ಯಾಪಿಸಿರು ವುದು ಕಂಡು ಬಂದಿತ್ತು. ಮೂಗಿನ ಭಾಗದಲ್ಲಿ 4×4 ಸೆಮೀ ಹಾಗೂ ಮೆದಳಿನಲ್ಲಿ 6×8 ಸೆ.ಮೀ ಗಡ್ಡೆ ಬೆಳೆದಿತ್ತು.

ಮೆದುಳಿನ ಎಡ ಭಾಗದಲ್ಲಿ ಶೇ.30ರಷ್ಟು ಆವರಿಸಿತ್ತು. ಹೀಗಾಗಿ ಬಾಲಕಿಗೆ ಉಸಿರಾಟದ ತೊಂದರೆ, ಕಣ್ಣು ಗುಡ್ಡೆಗಳು ಮುಂದೆ ಬಂದಿದ್ದವು. ಇದರಿಂದ ವಾಸನೆ ಕಂಡು ಹಿಡಿಯಲೂ ಸಾಧ್ಯವಾಗುತ್ತಿರಲಿಲ್ಲ. ಮೂಗಿನಿಂದ ರಕ್ತಸ್ರಾವ ಕೂಡ ಆಗುತ್ತಿತ್ತು ಎಂದು ಡಾ| ಸಿ.ಬಿ.ನಂದ್ಯಾಳ ತಿಳಿಸಿದರು. ಮೂಗು, ಕಣ್ಣು ಮತ್ತು ಮೆದುಳಿಗೆ ಗಡ್ಡೆ ವ್ಯಾಪಿಸಿದ್ದರಿಂದ ನರರೋಗ ವಿಭಾಗದ ಮುಖ್ಯಸ್ಥ ಡಾ| ಸತೀಶ ಮೇಳಕುಂದಿ ಅವರನ್ನು ಸಂಪರ್ಕಿಸಲಾಗಿತ್ತು. ತದನಂತರ ಡಾ| ಸತೀಶ ಮೇಳಗುಂದಿ, ಡಾ| ಸಿ.ಬಿ. ನಂದ್ಯಾಳ ಮತ್ತು ನೇತ್ರ ತಜ್ಞ ಡಾ| ಮಲ್ಲಿ ಕಾರ್ಜುನ ತೆಗನೂರ, ಅರವಳಿಕೆ ತಜ್ಞ ಡಾ| ಗಜೇಂದ್ರ ಸಿಂಗ್‌ ಎಲ್ಲರೂ ಆಲ್‌ಫ್ಯಾಕ್ಟರಿ ನ್ಯೂರೋಬ್ಲಾಸ್ಟೊಮಾ ಶಸ್ತ್ರ ಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಮೂಗಿನ ಮೂಲಕ ಎಡ ಭಾಗದ ಮೆದುಳಿಗೆ ಡೆಂಬಲ್‌ ರೀತಿಯ ಆಕಾರದಲ್ಲಿ ಗಡ್ಡೆ ಆವರಿಸಿತ್ತು.

ಮೆದುಳಿಗೆ ಗಡ್ಡೆ ಹೊಕ್ಕಿರುವುದಿಂದ ಮೆದುಳಿಗೆ ಯಾವ ಹಾನಿಯಾಗದಂತೆ ಎಚ್ಚರ ವಹಿಸುವುದು ಅಗತ್ಯವಾಗಿತ್ತು. ತಜ್ಞರು ಮತ್ತು ಪರಿಣಿತ ವೈದ್ಯರ ತಂಡದೊಂದಿಗೆ ಜೂನ್‌ 8 ರಂದು ಸತತವಾಗಿ ಸುದೀರ್ಘ‌ 11 ಗಂಟೆ ಕಾಲ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಡಾ| ಸತೀಶ ಮೇಳಕುಂದಿ ತಿಳಿಸಿದ್ದಾರೆ. ವೈದ್ಯರಾದ ಡಾ| ಶಶಾಂಕ್‌ ರಾಮದುರ್ಗ, ಡಾ| ಕಿರಣ ದೇಶಮುಖ, ಡಾ| ಶಿವಾನಂದ ಮೇಳಕುಂದಿ ಡಾ.ಟೆಂಗಳಿ, ಇಎನ್‌ಟಿ ತಜ್ಞರು, ನೇತ್ರ ತಜ್ಞರು, ರೆಡಿಯಾಲಜಿಸಿಸ್ಟ್‌, ಪ್ಯಾಥಾಲಜಿಸ್ಟ್‌ ತಜ್ಞರು ಒಳಗೊಂಡಂತೆ ಒಟ್ಟು 30 ಜನರ ಸರ್ಜನ್‌ಗಳು ಮತ್ತು 10 ಜನ ಸಿಬ್ಬಂದಿ ಶಸ್ತ್ರಚಿಕಿತ್ಸೆ ತಂಡದಲ್ಲಿ ಇದ್ದರು. ಈ ಶಸ್ತ್ರಚಿಕಿತ್ಸೆಗೆ ಒಟ್ಟು 4ರಿಂದ 5 ಲಕ್ಷ ರೂ. ವೆಚ್ಚವಾಗುತ್ತದೆ. ಬಾಲಕಿ ಬಿಪಿಎಲ್‌ ಕುಟುಂಬಕ್ಕೆ ಸೇರಿದ್ದು, ಉಚಿತವಾಗಿಯೇ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ.

ಟಾಪ್ ನ್ಯೂಸ್

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburgi News

ಸಿಯುಕೆ ಕುಲಪತಿಯಾಗಿ ಡಾ.ಬಿ. ಸತ್ಯನಾರಾಯಣ ‌ನೇಮಕ

wadi

ಪ್ಯಾಸೆಂಜರ್‌ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್‌

ಸಾಹಿತ್ಯ ಪರಿಷತ್‌ನಲ್ಲಿ 50 ಸಾವಿರ ಮೃತ ಮತದಾರರು: ಚಿಮ್ಮಲಗಿ

ಸಾಹಿತ್ಯ ಪರಿಷತ್‌ನಲ್ಲಿ 50 ಸಾವಿರ ಮೃತ ಮತದಾರರು: ಚಿಮ್ಮಲಗಿ

ಜಯುಇಉಇಉತರೆ

ಕೊರೊನಾ ಸೋಂಕಿಗೆ ಗೋಮೂತ್ರ ಔಷಧವಲ್ಲ

ಿಒಪೊಇಉಯರ

ಸತತ ಮಳೆಗೆ ಜಮೀನುಗಳು ಜಲಾವೃತ

MUST WATCH

udayavani youtube

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.

udayavani youtube

ಮುಖ ಕೊರಗಜ್ಜನದ್ದು ದೇಹ ಗಂಡನದ್ದು.. ಹೀಗೊಂದು ಕತೆ !

udayavani youtube

ಬ್ರಾಹ್ಮಣನಾದ ಕಾರಣ ಚೆನ್ನೈ ಸಂಸ್ಕೃತಿ ಅರಿತೆ ಎಂದ ಸುರೇಶ್ ರೈನಾ ವಿರುದ್ಧ ನೆಟ್ಟಿಗರು ಗರಂ

udayavani youtube

ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು

udayavani youtube

ಒಂದು ವರ್ಷ ತುಂಬಿದ ಶಿವಾನಿಯ ದಿನಚರಿ ನೋಡಿ

ಹೊಸ ಸೇರ್ಪಡೆ

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.