ಕ್ಷೌರಿಕರ ಮಾನಸಿಕ ಅಸ್ಪೃಶ್ಯತೆ ತೊಲಗಿಸಿ


Team Udayavani, Mar 1, 2019, 5:12 AM IST

gul-4.jpg

ವಾಡಿ: ನಾಯಿಂದ (ಕ್ಷೌರಿಕ) ಸಮುದಾಯಕ್ಕೆ ಕೆಲ ಮನುಷ್ಯ ವಿರೋಧಿ ಮನಸ್ಸುಗಳು ಅಸಂವಿಧಾನಿಕ ಪದಗಳಿಂದ ನಿಂದಿಸಿ ಅಪಮಾನಿಸುತ್ತಿವೆ. ಇದಕ್ಕೆ ಕಾನೂನಾತ್ಮಕ ಕಡಿವಾಣ ಹಾಕಲು ಸರಕಾರ ಮುಂದಾಗಬೇಕು ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು.

ಕೊಂಚೂರು ಸವಿತಾ ಪೀಠದಲ್ಲಿ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಹಾಗೂ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷೌರ ಮಾಡುವುದು ನಾಯಿಂದ ಸಮುದಾಯದ ಸ್ವಾಭಿಮಾನದ ಕುಲಕಸುಬು. ಆದರೆ ಕ್ಷೌರಿಕ ಸಮುದಾಯ ಮಾನಸಿಕ ಅಸ್ಪೃಶ್ಯತೆ ಅನುಭವಿಸಿ ಸಾಮಾಜಿಕವಾಗಿ ಅವಮಾನಕ್ಕೀಡಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಕಡಿವಾಣ ಹಾಕಬೇಕಾಗಿದೆ. ಮಾನಸಿಕ ಅಸ್ಪೃಶ್ಯತೆ ಎಂಬುದು ಮಿದುಳು ಸಾಯಿಸುವ ಮಹಾರೋಗವಾಗಿದೆ. ಸವಿತಾ ಬಂಧುಗಳನ್ನು ಸಹೋದರ ಸಮಾನತೆಯಿಂದ ಕಾಣುವಂತಾಗಬೇಕು ಎಂದು
ಹೇಳಿದರು. ರಾಜ್ಯ ಸಮ್ಮಿಶ್ರ ಸರಕಾರ ಈ ವರ್ಷ ಸವಿತಾ ಜನಾಂಗಕ್ಕೆ ಮಹತ್ತರ ಕೊಡುಗೆ ಕೊಟ್ಟಿದೆ. ಸರಕಾರದಿಂದ ಸವಿತಾ ಮಹರ್ಷಿಗಳ ಜಯಂತಿ ಘೋಷಣೆ ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಜತೆಗೆ 25 ಕೋಟಿ ರೂ. ಅನುದಾನ ಒದಗಿಸಿರುವುದು ಹರ್ಷದಾಯಕ ಸಂಗತಿಯಾಗಿದೆ. ಸವಿತಾ ಸಮಾಜವನ್ನು 2ಎ ಪಂಗಡದಿಂದ ಪ್ರವರ್ಗ 1ಕ್ಕೆ ಸೇರಿಸಬೇಕು.

ಹಂಪಿ ವಿವಿಗೆ ಸವಿತಾ ಕುಲಶಾಸ್ತ್ರ ಅಧ್ಯಯನ ಕೇಂದ್ರ ಮಂಜೂರಾಗಿದ್ದು, ಆದಷ್ಟು ಬೇಗ ಆರಂಭಿಸಬೇಕು. ಇದರಿಂದ ನಮ್ಮ ಸಮುದಾಯದ ನೈಜ ಇತಿಹಾಸ ಹೊರಬರಲಿದೆ ಎಂದು ಹೇಳಿದರು. ಸವಿತಾ ಸಮಾಜದ ರಾಜ್ಯ ಉಪಾಧ್ಯಕ್ಷ ರಮೇಶ ಚಿನ್ನಾಕರ, ಜಿಲ್ಲಾ ಗೌರವಾಧ್ಯಕ್ಷ ಅಶೋಕ ಡೈಮಂಡ್‌, ಜಿಲ್ಲಾಧ್ಯಕ್ಷ ನರಸಿಂಹ ಮೋತಕಪಲ್ಲಿ, ಜಿಲ್ಲಾ ಉಪಾಧ್ಯಕ್ಷರು ಪ್ರಕಾಶ ಕೊಟನೂರ, ಯಾದಗಿರಿ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕರ, ಮಠದ ಕಾರ್ಯದರ್ಶಿ ಶರಣಪ್ಪ ಬಳ್ಳಾರಿ, ಮುಖಂಡರಾದ ವೆಂಕಟೇಶ ವೆಲ್ಕೂರ, ಅಂಬ್ರೀಶ ಸಿಂಧನೂರ, ನಾಮದೇವ ನಾಗರಾಜ, ಸುಭಾಷ ಬಾದಾಮಿ, ರಾಜು ಶಿವುಪುರ, ಅಂಬ್ರೀಶ ಕಡದರಾಳ, ಸಂತೋಷ ಕೊಟನೂರ, ಮಲ್ಲಣ್ಣ ವಡಗೇರಿ, ಆನಂದ ವಾರಿಕ ಕಮಲಾಪುರ, ಬಸವರಾಜ ಜೇವರ್ಗಿ, ವೆಂಕಟೇಶ ಶಹಾಪುರ, ರಾಘವೇಂದ್ರ ಭಂಡಾರಿ ಪಾಲ್ಗೊಂಡಿದ್ದರು.

ವಾಡಿ ನಿಖೀತಾ ಆಸ್ಪತ್ರೆಯ ಡಾ| ಶ್ರವಣಕುಮಾರ ತಂಗಡಗಿ ಅವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶ್ರೀಧರಾನಂದ ಸ್ವಾಮೀಜಿ ಹಾಗೂ ಚೇತನ ಭಟ್ಟರಿಂದ ಸವಿತೃ ಹೋಮ ನೆರವೇರಿಸುವ ಮೂಲಕ ಸವಿತಾ ಸಮಾಜದ ಹನ್ನೊಂದು ಜನರಿಗೆ ಜನಿವಾರ ಧಾರಣೆ ನಡೆಯಿತು.

ಟಾಪ್ ನ್ಯೂಸ್

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ಮತ್ತೆ ಹಾರಲಿವೆ ಜೆಟ್‌ ಏರ್‌ವೇಸ್‌ ವಿಮಾನಗಳು!

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ನೈಸರ್ಗಿಕ ವಿಪತ್ತುಗಳಿಂದ 87 ಬಿಲಿಯನ್‌ ಡಾಲರ್‌ ನಷ್ಟ

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಅಡುಗೆ ಅನಿಲ ಕೊರತೆಯಿಂದ ಮಕ್ಕಳಿಗೆ “ಹಸಿಯೂಟ’!

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಟಿ20 ವಿಶ್ವಕಪ್‌: ಸ್ಕಾಟ್ಲೆಂಡ್‌ ವಿರುದ್ಧ ನಮೀಬಿಯಾ ವಿಜಯ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ

ಮಾರುತಿ ಸುಜುಕಿಗೆ ಲಾಭ ಶೇ. 66 ಕುಸಿತ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6[police

ವ್ಯಕ್ತಿಗೆ ಪೊಲೀಸರಿಂದ ಥಳಿತ-ಆರೋಪ

5gas

ಬೆಲೆ ಏರಿಕೆ: ಸಿಲಿಂಡರ್‌ ಹೊತ್ತು ಪ್ರತಿಭಟನೆ

4chincholi

ಕಟ್ಟಡ ಕಾಮಗಾರಿ ಗುಣಮಟ್ಟದ್ದಿರಲಿ

3kannada

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

2life

ಆದರ್ಶ ನಂಬಿದ ಬದುಕು ಮಾದರಿ: ಡಾ|ಅಪ್ಪ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ !

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ !

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

ಉಪಚುನಾವಣೆ: ಬಹಿರಂಗ ಪ್ರಚಾರ ಅಂತ್ಯ; ಅ. 30ರಂದು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.