ಬಡ ಬಾಲೆಯರ ಬಂಗಾರದ ಸಾಧನೆ

Team Udayavani, Jun 16, 2022, 2:20 PM IST

10gold-medal

ಕಲಬುರಗಿ: ಇದು ಪಕ್ಕಾ ಬಡತನವೇ ಉಂಡುಟ್ಟ ಸ್ಲಂ ಬಾಲೆಯರ ಕುಟುಂಬದ ಕಥಾನಕ. ಅನಾಲೆಟಿಕಲ್‌ ಕೆಮೆಸ್ಟ್ರಿಯಲ್ಲಿ ಗುಲ್ಬರ್ಗ ವಿವಿಯಲ್ಲಿ ಸ್ಮರಣಾರ್ಥ ಕೊಡಮಾಡಿದ ಬಂಗಾರದ ಪದಕ ಕೊರಳಿಗೆ ಹಾಕಿಕೊಂಡ ಸಾಧಕಿಯ ಪರಿಚಯವಿದು. ಅಚ್ಚರಿ ಎಂದರೆ ಅಕ್ಕ-ತಂಗಿಯರಿಬ್ಬರೂ ಒಂದೇ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಒಬ್ಬರು ಬಂಗಾರ ಬಾಚಿದ್ದರೆ, ಇನ್ನೊಬ್ಬರು ಹೆಚ್ಚು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.

ಕಲಬುರಗಿ ನಗರದ ಪಕ್ಕಾ ಸ್ಲಂ ಪ್ರದೇಶ ಖಾನಾಪುರ ಬಡಾವಣೆ ನಿವಾಸಿಗಳಾದ ದಶರಥ ಕಣ್ಣಿ ಮತ್ತು ಮಂಜುಳಾ ಕಣ್ಣಿ ದಂಪತಿಯ ಪುತ್ರಿಯರಾದ ಶೃತಿ ಕಣ್ಣಿ ಮತ್ತು ರಜನಿ ಕಣ್ಣಿ ಇಂತಹ ಸಾಧನೆ ಮಾಡಿದ್ದಾರೆ. ಶೃತಿ ಅನಾಲೆಟಿಕಲ್‌ ಕೆಮೆಸ್ಟ್ರಿಯಲ್ಲಿ ಬಂಗಾರದ ಪದಕ ಕೊರಳಿಗೆ ಹಾಕಿಕೊಂಡರೆ, ತಾನೇನು ಕಮ್ಮಿ ಇಲ್ಲ ಎನ್ನುವಂತೆ ರಜನಿ ಹೆಚ್ಚು ಅಂಕ ಗಳಿಸಿದ್ದಾಳೆ. ಇಬ್ಬರ ಸಾಧನೆಗೆ ಆಸರೆಯಾದದ್ದು ಮಾತ್ರ ಒಂದೇ ಸೇವಾ ಕೇಂದ್ರ!.

ವಿದ್ಯಾ ವಿಕಾಸ ಕೇಂದ್ರ: ಈ ಇಬ್ಬರೂ ಸಹೋದರಿಯರಿಗೆ ಆಸರೆಯಾಗಿ ನಿಂತದ್ದು ಮಾತ್ರ ಸೇವಾ ಭಾರತಿ ಟ್ರಸ್ಟ್‌ ನಡೆಸುತ್ತಿರುವ ವಿದ್ಯಾ ವಿಕಾಸ ಕೇಂದ್ರ. ಈ ಕೇಂದ್ರದಲ್ಲಿ ಜ್ಞಾನ ಜತೆಯಲ್ಲಿ ಮೌಲ್ಯ-ಸಂಸ್ಕಾರಗಳನ್ನು ಕಲಿಸಿಕೊಟ್ಟಿದ್ದರೆ ಪರಿಣಾಮ ಇಂದು ಮೊದಲ ಮೈಲುಗಲ್ಲು ಮುಟ್ಟಿದಂತಾಗಿದೆ ಎನ್ನುತ್ತಾಳೆ ರಜನಿ.

ಪ್ರತಿ ದಿನವೂ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿದ್ಯಾ ವಿಕಾಸ ಕೇಂದ್ರದಲ್ಲಿ ಗುರುಗಳು ಹೇಳಿಕೊಡುವ ಮೌಲಿಕ ಶಿಕ್ಷಣ ಈ ಸಹೋದರಿಯ ಜೀವನದ ವೇಗ-ಗತ್ತು ಬದಲಿಸಿದೆ. ಅಪ್ಪ ದಶರಥ ಕಣ್ಣಿ ಅವರ ಅಕ್ಕರೆಯಲ್ಲಿ ಬೆಳೆದ ಹೆಣ್ಣು ಮಕ್ಕಳು, ಅವ್ವ ಮಂಜುಳಾ ಕಣ್ಣಿಯ ಕಣ್ಣಿನ ಬೆಳಕಾಗಿದ್ದಾರೆ. ಇವತ್ತಿನ ಆರ್ಥಿದ ದುಬಾರಿ ದುನಿಯಾದಲ್ಲಿ ದಶರಥ ಮನೆಗಳಿಗೆ ಸುಣ್ಣ, ಬಣ್ಣ ಬಳಿದು ಬಂದ ಹಣದಲ್ಲಿ ಇಬ್ಬರೂ ಹೆಣ್ಣು ಮಕ್ಕಳ ಬದುಕು ಕಾಮನಬಿಲ್ಲಿನಂತೆ ಸಿಂಗರಿಸಿದ್ದಾರೆ. ಸಿಕ್ಕ ಎಲ್ಲ ಅವಕಾಶಗಳನ್ನು ಮಕ್ಕಳ ಗೆಲುವಿಗಾಗಿ ಜೋಪಾನ ಮಾಡಿದ ತಂದೆ ಇಬ್ಬರ ಸಹೋದರಿಯರ ಪಾಲಿಗೆ ನಿಜವಾದ ಹೀರೋ. ಇಬ್ಬರೂ ತಂದೆ-ತಾಯಿ ಕುರಿತು ಗೌರವ ವ್ಯಕ್ತಪಡಿಸುತ್ತಾರಲ್ಲದೆ, ಇಂತಹ ಪಾಲಕರು ಸಿಕ್ಕಿದ್ದು ನಮ್ಮ ಭಾಗ್ಯ ಎನ್ನುತ್ತಾರೆ ಶೃತಿ-ರಜನಿ.

ಸರಕಾರಿ ಶಾಲೆ ಮಕ್ಕಳು: ಇಬ್ಬರೂ ಆರಂಭದಿಂದ ಪಿಯುಸಿ ಮುಗಿಯುವವರೆಗೂ ಸರಕಾರಿ ಶಾಲೆ, ಕಾಲೇಜುಗಳಲ್ಲೇ ಓದಿದ್ದಾರೆ. ಇಬ್ಬರ ಆಸಕ್ತಿಯೂ ಒಂದೇ. ಆದರ್ಶ ನಗರದ ಸರಕಾರಿ ಶಾಲೆ, ಪಿಯುಸಿಯನ್ನು ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಮುಗಿಸಿದ್ದಾರೆ. ಸರೋಜಿನಿ ನಾಯ್ಡು ಮಹಿಳಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದ್ದಾರೆ. ಗುವಿವಿಯಲ್ಲಿ ಕೆಮೆಸ್ಟ್ರೀ( ಅನಾಲೆಟಿಕಲ್‌) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಇಡಿ ಮಾಡಿ ಶಿಕ್ಷಕಿಯರಾಗಬೇಕು ಎಂದು ಕೊಂಡಿದ್ದಾರೆ.

ಇಬ್ಬರೂ ನಮ್ಮ ವಿದ್ಯಾ ವಿಕಾಸ ಕೇಂದ್ರದ ವಿದ್ಯಾರ್ಥಿನಿಯರು ಎನ್ನುವುದು ಹೆಮ್ಮೆ. ತುಂಬಾ ಶಿಸ್ತಿನ ಸಹೋದರಿಯರು. 9 ವರ್ಷಗಳಿಂದ ಸೇವಾ ಭಾರತಿ ಟ್ರಸ್ಟ್‌ ನಡೆಸುತ್ತಿರುವ ವಿದ್ಯಾ ವಿಕಾಸ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಸಾಧನೆ ಎಲ್ಲ ಮಕ್ಕಳಿಗೆ ಮಾದರಿಯಾಗಲಿ. -ಶೀಲಾ ಖಾನಾಪುರ, ಕೇಂದ್ರದ ಶಿಕ್ಷಕಿ

ನಮ್ಮಪ್ಪ ನಮಗೆ ಕೊರತೆ ಎನ್ನುವ ಶಬ್ದವನ್ನೇ ಪರಿಚಯಿಸಿಲ್ಲ. ಸ್ಲಂನಲ್ಲಿದ್ದೇವೆ ಎನ್ನುವುದೊಂದು ಸಮಸ್ಯೆ ಅಂತಾ ನಮಗನಿಸಿಲ್ಲ. ಶ್ರಮ ನಿಂತ ನೀರಿಲ್ಲ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಅಂತ ಅಮ್ಮ-ಅಪ್ಪಾ ತಿಳಿವು ಕೊಟ್ಟಿದ್ದಾರೆ. ಅದರಂತೆ ನಾವು ವಿದ್ಯಾ ವಿಕಾಸ ಕೇಂದ್ರದಲ್ಲಿ ಓದಿ ಸಾಧನೆ ಮಾಡಿ ಗಮನಸೆಳೆಯುವಂತಾಗಿದೆ. ಥ್ಯಾಂಕ್ಸ್‌ ಟು ಸೇವಾ ಭಾರತಿ ಟ್ರಸ್ಟ್‌ . –ರಜನಿ ಕಣ್ಣಿ , ವಿದ್ಯಾರ್ಥಿನಿ

-ಸೂರ್ಯಕಾಂತ ಎಂ.ಜಮಾದಾರ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

crime (2)

Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

Lok Sabha Elections; ಸೋಲಿನ ಭೀತಿಯಿಂದ ಸ್ಪರ್ಧೆ ಮಾಡದ ಖರ್ಗೆ: ಅಗರವಾಲ್‌

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

ಮೊದಲಿನ ಗ್ಯಾರಂಟಿಗಳೇ ಕೊಟ್ಟಿಲ್ಲ, ಈಗೇನು ಕೊಡ್ತಾರೆ: ಕೇಂದ್ರಕ್ಕೆ ಖರ್ಗೆ ಪ್ರಶ್ನೆ

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

Election; ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಸೇರುವ ವಿಚಾರ ಸದ್ಯಕ್ಕಿಲ್ಲ:ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.