ಉತ್ತಮ ಪುಸ್ತಕ ಓದಿನಿಂದ ದೃಢ ವ್ಯಕ್ತಿತ್ವ

Team Udayavani, Aug 11, 2017, 10:04 AM IST

ಕಲಬುರಗಿ: ಸಾಹಿತ್ಯ ವಲಯ ವಿಶಾಲವಾಗಿದ್ದು, ಅಸಂಖ್ಯಾತ ಉತ್ತಮ ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನಾದರೂ
ಓದುವುದರ ಮುಖಾಂತರ ನಮ್ಮ ವ್ಯಕ್ತಿತ್ವ ಹಾಗೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶರಣಬಸವ
ವಿಶ್ವವಿದ್ಯಾಲಯದ ಸಹ ಕುಲಪತಿ ಹಾಗೂ ಶರಣಬಸವೇಶ್ವರ ವಸತಿ (ಎಸ್‌ಬಿಆರ್‌) ಕಾಲೇಜಿನ ಪ್ರಾಚಾರ್ಯ ಡಾ| ಎನ್‌.
ಎಸ್‌. ದೇವರಕಲ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಗುರುವಾರ ನಗರದ ಎಸ್‌ಬಿಆರ್‌ ಶಾಲೆಯಲ್ಲಿ ಷಡಕ್ಷರಿಸ್ವಾಮಿ ಡಿಗ್ಗಾಂವಕರ
ಪ್ರತಿಷ್ಠಾನದ ಶಿವಾಂಶ ಪ್ರಕಾಶನ ವತಿಯಿಂದ ಮನೋವಿಜ್ಞಾನಿ ಡಾ| ಸಿ.ಆರ್‌. ಚಂದ್ರಶೇಖರ ಬರೆದ “ಒಳ್ಳೆಯ ಅಧ್ಯಯನ ವಿಧಾನ ಮತ್ತು ಉತ್ತಮ ನೆನಪಿನ ಶಕ್ತಿ ಹಾಗೂ ಗುಡ್‌ ಸ್ಟಡಿ ಹ್ಯಾಬಿಟ್‌ ಗುಡ್‌ ಮೆಮೋರಿ ಎನ್ನುವ ಎರಡು ಪುಸ್ತಕ ಲೋಕಾರ್ಪಣೆಗೊಳಿಸಿ ಅವರು
ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಓದಿದ್ದನ್ನು ಪುನಃ ಮನನ ಮಾಡಿಕೊಂಡರೆ ಓದಿಕೊಂಡಿದ್ದು ಬಹಳ ದಿನಗಳವರೆಗೆ ಶಾಶ್ವತವಾಗಿ ನೆನೆಪಿನಲ್ಲಿ ಉಳಿಯುತ್ತದೆ. ಲೋಕಾರ್ಪಣೆಗೊಂಡಿರುವ ಎರಡು ಪುಸ್ತಕಗಳು ಬಹಳ ಮಹತ್ವದಿಂದ ಕೂಡಿವೆ. ಕಡಿಮೆ ಬೆಲೆಯಲ್ಲಿ ಅಪಾರ ವಸ್ತು ವಿಷಯಗಳನ್ನು ಈ ಪುಸ್ತಕಗಳು ಹೊಂದಿವೆ ಎಂದು ಹೇಳಿದರು.
ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ. ಜ್ಞಾನ ಯಾವ ಮೂಲೆಯಿಂದಲಾದರೂ ಬರಲಿ, ಅದನ್ನು ಒಮ್ಮನಸ್ಸಿನಿಂದ ಸ್ವೀಕರಿಸಬೇಕು. ಖನ್ನತೆ, ಒತ್ತಡ ನಿವಾರಿಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ಆರೋಗ್ಯಕ್ಕೆ ಒಳ್ಳೆಯದು ಎಂದರು. ಹಿರಿಯ ಪತ್ರಕರ್ತ ಟಿ. ವಿ ಶಿವಾನಂದನ್‌, ನಿವೃತ್ತ ಉಪನ್ಯಾಸಕ ನರೇಂದ್ರ ಬಡಶೇಷಿ, ಶಿವಾಂಶ ಪ್ರಕಾಶನದ ಡಾ| ಎಸ್‌ ಎಸ್‌ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ವಿಶ್ವ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಭಾರತ ಪರಿಹಾರ ಮಾರ್ಗ ಹೊಂದಿದೆಯಲ್ಲದೇ, ನೀರಿಗಾಗಿ ರಾಷ್ಟ್ರಗಳ ಮಧ್ಯೆ ಮುಂಬರುವ ಮೂರನೇ ಮಹಾಯುದ್ಧವನ್ನು...

  • „ಶಿವಕುಮಾರ ಬಿ. ನಿಡಗುಂದಾ ಸೇಡಂ: ಈ ದೇವಾಲಯಕ್ಕಿದೆ 1200 ವರ್ಷಗಳ ಇತಿಹಾಸ. ಈ ದೇವನಿಗೆ ಭಕ್ತಿಯಿಂದ ನಮಿಸಿದರೆ ಸರ್ವ ದುಃಖ ಪರಿಹಾರವಾಗಿ, ಸುಖ-ಶಾಂತಿ ನೆಲೆಸುತ್ತದೆ....

  • ಕಲಬುರಗಿ: ಸರ್ಕಾರಿ ಶಾಲೆಗಳ ಬದಲಿಗೆ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು...

  • „ಪ್ರಹ್ಲಾದಗೌಡ ಗೊಲ್ಲಗೌಡರ ಗದಗ: ಉತ್ತರ ಕರ್ನಾಟಕದ ರಂಗನತಿಟ್ಟು ಎಂದು ಖ್ಯಾತಿ ಪಡೆದಿರುವ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ವಲಸೆ ಪಕ್ಷಿಗಳ ಆಗಮನವಾಗಿದೆ....

  • ಕಲಬುರಗಿ: ಅಪಮೌಲ್ಯಗಳೇ ಮೌಲ್ಯಗಳಾಗಿ ಮಾರ್ಪಾಡಾಗಿ ಸಮಾಜದ ಎಲ್ಲ ವ್ಯವಸ್ಥೆಗಳಲ್ಲಿ ವಿಜೃಂಭಿಸುತ್ತಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ...

ಹೊಸ ಸೇರ್ಪಡೆ