ಆಳಂದ ಅನುಭವ ಮಂಟಪದಲ್ಲಿ ಗೋಶಾಲೆ

Team Udayavani, Aug 20, 2019, 11:24 AM IST

ಆಳಂದ: ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ವಿದ್ಯಾಪೀಠದ ನಿವೇಶನದಲ್ಲಿ ಸ್ಥಾಪಿಸಲಾದ ಗೋಶಾಲೆಗೆ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಚಾಲನೆ ನೀಡಿದರು.

ಆಳಂದ: ಪಟ್ಟಣದ ಉಮರಗಾ ಹೆದ್ದಾರಿ ಯಲ್ಲಿರುವ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ, ವಿದ್ಯಾಪೀಠದ ನಿವೇಶನದಲ್ಲಿ ಕಲಬುರಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಪ್ರಾರಂಭಿಸಲಾದ ಗೋಶಾಲೆಗೆ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಸಕರು ಗೋ ಶಾಲೆ ಉದ್ಘಾಟಿಸಬೇಕಾಗಿತ್ತು. ಆದರೆ ಅವರು ಕಾರ್ಯನಿಮಿತ್ತ ಬೆಂಗಳೊರಿಗೆ ಹೋಗಿದ್ದಾರೆ. ಮೊದಲ ದಿನವೇ 67ಕ್ಕೂ ಹೆಚ್ಚು ಜಾನುವಾರುಗಳು ಗೋ ಶಾಲೆಗೆ ದಾಖಲಾಗಿರುವುದನ್ನು ನೋಡಿದರೆ ನೀರು ಮೇವಿನ ಕೊರತೆ ತೀವ್ರತೆ ಕಂಡು ಬರುತ್ತದೆ. ಗೋ ಶಾಲೆಗೆ ದಾಖಲಾಗುವ ಎಲ್ಲಾ ಜಾನುವಾರುಗಳಿಗೆ ಸೌಲಭ್ಯ ಒದಗಿಸಿ ಅನುಕೂಲ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಶು ಪಾಲಕರು ಗೋ ಶಾಲೆ ಲಾಭ ಪಡೆಯಬೇಕು. ಗೋ ಶಾಲೆ ಸೇರಿದಂತೆ ಜನಪರ ಕಾರ್ಯಕ್ಕೆ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಸಹಕಾರಕ್ಕೆ ಮುಂದಾಗಿರುವ ಕಾರ್ಯಶ್ಲಾಘನೀಯ. ಈಗಾಗಲೇ ಅನುಭವ ಮಂಟಪದಿಂದ ಮುಖ್ಯ ಹೆದ್ದಾರಿಗೆ ಸಂಪರ್ಕ ಒದಗಿಸಲು ರಸ್ತೆ ನಿರ್ಮಾಣಕ್ಕೆ ಎಚ್ಕೆಆರ್‌ಡಿಬಿ 10 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಹೇಳಿದರು.

ಹಣಮಂತರಾವ್‌ ಮಲಾಜಿ, ಜಿಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಹಶೀಲ್ದಾರ್‌ ಬಸವರಾಜ ಎಂ. ಬೆಣ್ಣೆಶಿರೂರ, ಕಲಬುರಗಿ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ| ವಿ.ಎಚ್. ಹನುಮಂತರಾವ್‌, ಸಹಾಯಕ ನಿರ್ದೇಶಕ ಡಾ| ಸಂಜಯ ರೆಡ್ಡಿ ಮಾತನಾಡಿದರು.

ಮರಾಠಾ ಸಮಾಜದ ಅಧ್ಯಕ್ಷ ನಾಗನಾಥ ಏಟೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ಗ್ರಾಮ ಲೆಕ್ಕಿಗ ರಮೇಶ ಮಾಳಿ, ಪಶು ವೈದ್ಯಾಧಿಕಾರಿ ಡಾ| ಮಹಾಂತೇಶ ಪಾಟೀಲ, ಜಗನಾಥ ಕುಂಬಾರ ಸೇರಿದಂತೆ ತೆಲಾಕುಣಿ, ಆಳಂದ ವಲಯದ ರೈತರು ಪಾಲ್ಗೊಂಡಿದ್ದರು.

ಮೊದಲ ದಿನವೇ ಎತ್ತುಗಳು, ಎಮ್ಮೆ, ಕರ ಹೋರಿ ಹಸುಗಳು ಸೇರಿ 67 ಜಾನುವಾರುಗಳು ದಾಖಲೆಯಾಗಿವೆ. ಗೋ ಶಾಲೆಯಲ್ಲಿ ಪಶುಗಳಿಗೆ ನೆರಳಿನ ಹೊದಿಕೆ, ಪಶುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ತಾತ್ಕಾಲಿಕ ಪಶು ಚಿಕಿತ್ಸಾಲಯ, ಜಾನುವಾರುಗಳಿಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಕಣಕಿ ಹಾಗೂ ಚುನ್ನಿ ವಿತರಿಸಲಾಗುತ್ತಿದೆ. ಗೋ ಶಾಲೆಗೆ ದಾಖಲಾಗುವ ಪಶುಗಳಿಗೆ ಸ್ಥಳದಲ್ಲೇ ಉಚಿತವಾಗಿ ಮೇವು, ನೀರು, ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಇನ್ಮುಂದೆ ಆಯುಷ್ಮಾನ್‌ ಕಾರ್ಡುದಾರರಿಗೂ ಉತೃಷ್ಟ ವೈದ್ಯಕೀಯ...

  • ವಾಡಿ: 'ಕಲ್ಯಾಣ ಕರ್ನಾಟಕ' ಭಾಗದ ಹಿಂದೂ-ಮುಸ್ಲಿಂ ಭಾವೈಕ್ಯ ತಾಣವಾದ ಪ್ರಸಿದ್ಧ ಹಳಕರ್ಟಿ ದರ್ಗಾ ಶರೀಫ್‌ ಎಂದೇ ಕರೆಯಿಸಿಕೊಳ್ಳುವ ಸೈಯ್ಯದ್‌ ಮಹ್ಮದ್‌ ಬಾದಶಹಾ...

  • ಕಲಬುರಗಿ: ಕೇಂದ್ರ ಸರ್ಕಾರ ದೇಶಾದ್ಯಂತ 'ಹಿಂದಿ ದಿವಸ್‌' ಆಚರಿಸುವುದನ್ನು ಖಂಡಿಸಿ ಮತ್ತು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಸಮಾನ ಸ್ಥಾನಮಾನ ನೀಡಿ ಭಾರತದ ಭಾಷಾ...

  • •ಕೆ.ನಿಂಗಜ್ಜ ಗಂಗಾವತಿ: ರೋಗ ನಿರೋಧಕ ಮತ್ತು ಅಧಿಕ ಇಳುವರಿ ನೀಡುವ ಸುಧಾರಿತ ಸೋನಾ ಮಸೂರಿ(ಆರ್‌ಪಿ ಬಯೋ-226) ಭತ್ತದ ತಳಿಯನ್ನು ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ...

  • ಕಲಬುರಗಿ: ಕೇಂದ್ರ ಸರ್ಕಾರದ ಮೋಟಾರ್‌ ವಾಹನ ತಿದ್ದುಪಡಿ ಕಾಯ್ದೆಯ 'ದಂಡಂ ದಶಗುಣಂ' ಪದ್ಧತಿಯಿಂದ ಮಾಲಿನ್ಯ ತಪಾಸಣೆ (ಎಮಿಷನ್‌ ಟೆಸ್ಟ್‌)ಕೇಂದ್ರಗಳತ್ತ ಓಡುವರ ಸಂಖ್ಯೆ...

ಹೊಸ ಸೇರ್ಪಡೆ