Udayavni Special

ಸೋರುತ್ತಿವೆ ಸರ್ಕಾರಿ ಕಚೇರಿ ಮಾಳಿಗೆಗಳು!

ಕಳೆದ ಮೂರು ತಿಂಗಳಿಂದ ಅಬ್ಬರಿಸುತ್ತಿದ್ದಾನೆ ಮಳೆರಾಯ!ಶಿಥಿಲಗೊಂಡ ಕಟ್ಟಡಗಳಲ್ಲಿನ ದಾಖಲೆಗೆ ಹಾನಿ

Team Udayavani, Sep 24, 2020, 6:28 PM IST

ಸೋರುತ್ತಿವೆ ಸರ್ಕಾರಿ ಕಚೇರಿ ಮಾಳಿಗೆಗಳು!

ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಸಿಡಿಲು-ಗುಡುಗು, ಮಿಂಚಿನ ಮತ್ತು ಬಿರುಗಾಳಿಯಿಂದ ಕೂಡಿದ ಅಬ್ಬರದ ಮಳೆಯಿಂದ ಪಟ್ಟಣದ ಅನೇಕ ಸರಕಾರಿ ಇಲಾಖೆ ಕಟ್ಟಡಗಳು ಮಳೆನೀರಿನಿಂದ ಸೋರುತ್ತಿವೆ. ಇದರಿಂದ ಕಚೇರಿಗಳಲ್ಲಿ ಸಿಬ್ಬಂದಿ ಕುಳಿತುಕೊಳ್ಳಲು ತೊಂದರೆಪಡುವಂತಹ ಪರಿಸ್ಥಿತಿ ಉಂಟಾಗಿದೆ.

ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಸರಕಾರಿ ಕಟ್ಟಡಗಳಲ್ಲಿ ಮಳೆನೀರು ಜಿಟಿಜಿಟಿಯಾಗಿ ಹನಿಗಳು ಕೋಣೆಗಳಲ್ಲಿ ಬೀಳುತ್ತಿರುವುದರಿಂದ ಸಿಬ್ಬಂದಿ ಕುಳಿತುಕೊಂಡು ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದೆ. ಚಂದಾಪುರ ಪಟ್ಟಣದಲ್ಲಿರುವ ಪಂಚಾಯತ್‌ ರಾಜ್‌ ಇಂಜನಿಯರಿಂಗ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತಾಪಂ, ಚಂದ್ರಂಪಳ್ಳಿ ನೀರಾವರಿ ಯೋಜನೆ ಕಚೇರಿ, ಜೆಸ್ಕಾಂ ಕಚೇರಿ, ಪಶು ಸಂಗೋಪನಾ ಇಲಾಖೆ, ತಹಸೀಲ್‌ ಕಚೇರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಕಟ್ಟಡ, ವಲಯ ಅರಣ್ಯ ಇಲಾಖೆ ಕಟ್ಟಡ, ಶಿಕ್ಷಣ ಇಲಾಖೆ, ಬಿಆರ್‌ಸಿ ಇಲಾಖೆ ಕಟ್ಟಡಗಳು ಮಳೆಯಿಂದ ಸೋರುತ್ತಿರುವುದರಿಂದ ಕಚೇರಿಯಲ್ಲಿದ್ದ ಅಗತ್ಯ ದಾಖಲೆಗಳು ಮಳೆ ನೀರಿನಿಂದ ನೆನೆದು ಹಾನಿಗೊಂಡಿವೆ.

ಮಾಜಿ ಸಿಎಂ ದಿ| ವೀರೇಂದ್ರ ಪಾಟೀಲರು ಎಸ್‌.ನಿಜಲಿಂಗಪ್ಪನವರ ಸಂಪುಟದಲ್ಲಿ ವಿದ್ಯುತ್‌, ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾಗ 1966-67ರಲ್ಲಿ ನಿರ್ಮಿಸಿದ ಎಲ್ಲ ಕಟ್ಟಡಗಳು ಇದೀಗ ತುಂಬಾ ದುಸ್ಥಿತಿಯಲ್ಲಿವೆ. ತಾಪಂ ಕಚೇರಿ ಪ್ರತಿಯೊಂದು ಕೋಣೆಗಳಲ್ಲಿ ಮಳೆಹನಿಗಳುನಿತ್ಯ ಸೋರುತ್ತಿವೆ. ವಿದ್ಯುತ್‌ ಸಂಪರ್ಕ ತಂತಿಗಳು ಕಡಿದು ಹೋಗುತ್ತಿವೆ. ಆಗಾಗ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಆಗುತ್ತಿವೆ. ಮಳೆ ಸೋರಿಕೆಯಿಂದ ಕಬ್ಬಿಣ ಸಲಾಕೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ದುಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಸಿಬ್ಬಂದಿ ಜೀವದ ಭಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.

ಬಿಇಒ ಕಚೇರಿಯಲ್ಲಿ ಕಪಾಟುಗಳು, ಅಲಮಾರಿಗಳು ತುಕ್ಕು ಹಿಡಿದು ಹೋಗಿವೆ. ತಹಸೀಲ್‌ ಕಚೇರಿಯಲ್ಲಿ ಅನೇಕ ದಾಖಲೆಗಳು ಮಳೆ ನೀರಿನ ಹನಿಗಳಿಂದ ಹಾಳಾಗುತ್ತಿವೆ. ಅಲ್ಲದೇ ತಾಪಂ ಕಚೇರಿ ಸಂಪೂರ್ಣ ದುಸ್ಥಿತಿಯಲ್ಲಿ ಅನೇಕ ವರ್ಷಗಳ ಹಳೆಯ ದಾಖಲೆಗಳು ಸಂಪೂರ್ಣ ಹಾನಿಯಾಗುತ್ತಿವೆ ಎಂದು ಸಿಬ್ಬಂದಿ ಹೇಳುತ್ತಾರೆ. ತಾಲೂಕಿನಲ್ಲಿ ಹಳೆ ಕಟ್ಟಡಗಳಲ್ಲಿಯೇ ಕಳೆದ ನಾಲ್ಕು ದಶಕಗಳಿಂದ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.

ಜಿಪಂ (1982), ಸಣ್ಣ ನೀರಾವರಿ (1992), ತಾಪಂ ಕಚೇರಿ (1966), ಚಂದ್ರಂಪಳ್ಳಿ ಯೋಜನೆ ವಿಭಾಗ (1966), ಲೋಇ (1966), ಜೆಸ್ಕಾಂ (1967), ಪಶು ಇಲಾಖೆ (1967), ತಹಸೀಲ ಕಚೇರಿ (1993) ಕಟ್ಟಡಗಳು ಪ್ರಾರಂಭಿಸಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ಇಲಾಖೆಯ ಹೊಸ ಕಟ್ಟಡ ಇನ್ನುವರೆಗೆನಿರ್ಮಿಸಿಲ್ಲವೆಂದು ಹೇಳಲಾಗುತ್ತಿದೆ. ಚುನಾಯಿತ

ಜನಪ್ರತಿನಿಧಿ ಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಟ್ಟಡವು ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆ ಮೇಲಿನ ಎಲ್ಲ ಮಳೆನೀರು ಕಚೇರಿಯೊಳಗೆ ಬರುತ್ತದೆ. ಕಟ್ಟಡವು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ದಾಖಲೆಗಳು ಇಟ್ಟಿಕೊಳ್ಳಲು ತೊಂದರೆ ಆಗಿದೆ. ಹೊಸ ಕಟ್ಟಡ ಅವಶ್ಯಕತೆ ಇದೆ. –ಮಹ್ಮದ ಅಹೆಮದ ಹುಸೇನ, ಜಿಪಂ ಎಇಇ

 

ಶಾಮರಾವ ಚಿಂಚೋಳಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಉಪ ಚುನಾವಣೆ ಫ‌ಲಿತಾಂಶದ ಬಳಿಕ ಹುಲಿಯಾ ಕಾಡಿಗೆ, ಬಂಡೆ ಛಿದ್ರ: ನಳಿನ್‌

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

ಡ್ರಗ್ಸ್‌ ಪ್ರಕರಣ : ನಿರ್ಮಾಪಕ ಜಗದೀಶ್‌ ದಂಪತಿ, ಉದ್ಯಮಿ ವಿಚಾರಣೆ

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

“ಚೇತರಿಕೆಯತ್ತ ಅರ್ಥ ವ್ಯವಸ್ಥೆ’

ನಾಯಕರಿಗೇಕೆ 2 ಕ್ಯಾಪ್‌?

ಐಪಿಎಲ್‌ 2020: ತಂಡದ ನಾಯಕರಿಗೇಕೆ 2 ಕ್ಯಾಪ್‌?

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ

IPLIPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

IPL 2020 : ಸಿಡಿದು ನಿಂತ ಸಿರಾಜ್‌; ಆರ್‌ಸಿಬಿ ಜಯಭೇರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gb-tdy-3

15 ವಾರಿಯರ್ಸ್‌ ಸಾವು; ಮೂವರಿಗಷ್ಟೇ ಪರಿಹಾರ

gb-tdy-2

ನಿರಂತರ ಮಳೆಗೆ ಕೊಚ್ಚಿ ಹೋಯಿತು ಬದುಕು!

gb-tdy-1

ಒಂಬತ್ತು ವರ್ಷಗಳ ನಂತರ “ಆಸರೆ’ಗೆ ತೆರಳಿದ ಸಂತ್ರಸ್ತರು

ಕಲಬುರ್ಗಿ ವಿಮಾನ ನಿಲ್ದಾಣ ಮುಂದೆ ಬಿಜೆಪಿ ಎಂಎಲ್ಸಿ – ಪೊಲೀಸರ ನಡುವೆ ಚಕಮಕಿ

ಕಲಬುರ್ಗಿ ವಿಮಾನ ನಿಲ್ದಾಣದ ಮುಂದೆ ಬಿಜೆಪಿ ಎಂಎಲ್ ಸಿ – ಪೊಲೀಸರ ನಡುವೆ ಮಾತಿನ ಚಕಮಕಿ

——-1

ಕ್ಷೇತ್ರದಾದ್ಯಂತ ಸುತ್ತಿದ ಶಾಸಕ ಮತ್ತಿಮಡು

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

ಪೊಲೀಸರ ಕೆಲಸ ಶ್ಲಾಘನೀಯ ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಪೊಲೀಸರ ಕೆಲಸ ಶ್ಲಾಘನೀಯ; ಮಂಗಳೂರಿನಲ್ಲಿ ಐಜಿಪಿ ದೇವಜ್ಯೋತಿ ರೇ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಕೇರಳಕ್ಕೆ ಬರಲು ನೋಂದಣಿ ಅಗತ್ಯ ; ಕಾಸರಗೋಡು ಗಡಿಗಳಲ್ಲಿ ಮತ್ತೆ ತಪಾಸಣೆ

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಎಲೆಕ್ಷನ್‌ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

ಪೊಲೀಸರ ಕಾರ್ಯ ಅವಿಸ್ಮರಣೀಯ: ಮುಖ್ಯಮಂತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.