ಹ್ಯಾಂಡ್‌ಬಾಲ್‌ ಟೂರ್ನಿ: ಕೊಡಗು-ಮಂಡ್ಯ ತಂಡಗಳಿಗೆ ಪ್ರಶಸ್ತಿ

Team Udayavani, Dec 1, 2018, 10:33 AM IST

ಕಲಬುರಗಿ: ನಗರದ ಚಂದ್ರಶೇಖರ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎರಡು ದಿನಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಹ್ಯಾಂಡ್‌ ಬಾಲ್‌ ಪಂದ್ಯಾವಳಿಯಲ್ಲಿ ಕೊಡಗು ಮತ್ತು ಮಂಡ್ಯ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಚಿಕ್ಕೋಡಿ ಹಾಗೂ ಧಾರವಾಡ ತಂಡಗಳು ರನ್ನರ್‌ಅಪ್‌ ಪ್ರಶಸ್ತಿಗೆ ತೃಪ್ತಿ ಪಟ್ಟಿವೆ ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ಯುವಕರ  ಭಾಗದಲ್ಲಿ ಮಂಡ್ಯ ಮತ್ತು ಧಾರವಾಡ ತಂಡಗಳು, ಯುವತಿಯರ ವಿಭಾಗದಲ್ಲಿ ಕೊಡಗು ಹಾಗೂ ಚಿಕ್ಕೋಡಿ ತಂಡಗಳು ಸೆಣಸಾಟ ನಡೆಸಿದವು.

ಯುವಕರ ವಿಭಾಗದಲ್ಲಿ ಧಾರವಾಡ ತಂಡವನ್ನು ಮಂಡ್ಯ 21-12 ಗೋಲ್‌ ಅಂತರದಿಂದ ಮಣಿಸಿದರೆ, ಯುವತಿಯರ ವಿಭಾಗದಲ್ಲಿ ಚಿಕ್ಕೋಡಿ ತಂಡವನ್ನು 16-04 ಗೋಲ್‌ಗ‌ಳ ಅಂತರದಿಂದ ಗೆದ್ದು ಪ್ರಶಸ್ತಿಗೆ ಭಾಜನವಾಯಿತು. ಯುವಕರ ವಿಭಾಗದಲ್ಲಿ ಹಾವೇರಿ ತಂಡದ ತುಷಾರ ಬೆಸ್ಟ್‌ ಗೋಲ್‌ ಕೀಪರ್‌ ಮತ್ತು 14 ಗೋಲ್‌ಗ‌ಳ ಮೂಲಕ ಧಾರವಾಡ ತಂಡದ ರುದ್ರಪ್ಪ ಬೆಸ್ಟ್‌ ಶೂಟರ್‌ ಪ್ರಶಸ್ತಿಗೆ ಪಾತ್ರರಾದರು. ಅದೇ ರೀತಿ ಯುವತಿಯರ ವಿಭಾಗದಲ್ಲಿ ಧಾರವಾಡ ತಂಡದ ಅರ್ಪಿತಾ ಬೆಸ್ಟ್‌ ಗೋಲ್‌ ಕೀಪರ್‌ ಹಾಗೂ 13 ಗೋಲ್‌ಗ‌ಳ ಮೂಲಕ ಕೊಡಗು ತಂಡದ ಗಾನವಿ ಬೆಸ್ಟ್‌ ಶೂಟರ್‌ ಪ್ರಶಸ್ತಿಗೆ ಪಾತ್ರರಾದರು. ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತದ 28 ಯುವಕರ ತಂಡಗಳು, 26 ಯುವತಿಯರ ತಂಡಗಳು ಪಾಲ್ಗೊಂಡಿದ್ದವು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ