ಚಿಂಚೋಳಿಯಲ್ಲಿ ಬಣಗುಡುತ್ತಿವೆ ವಸತಿ ನಿಲಯ

Team Udayavani, Jun 8, 2022, 2:32 PM IST

12hostel

ಚಿಂಚೋಳಿ: ರಾಜ್ಯ ಸರಕಾರ 2022-23ನೇ ಶೈಕ್ಷಣಿಕ ವರ್ಷದಲ್ಲಿ ಮೇ16ರಿಂದ ಶಾಲೆ ಪ್ರಾರಂಭಿಸಿವೆ. ಆದರೆ ತಾಲೂಕಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಒಳಪಟ್ಟಿರುವ ವಸತಿ ನಿಲಯಗಳನ್ನು ಇನ್ನು ಪ್ರಾರಂಭಿಸದೇ ಇರುವುದರಿಂದ ವಸತಿನಿಲಯಗಳು ಮಕ್ಕಳಿಲ್ಲದೇ ಬಣಗುಡುತ್ತಿವೆ.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 12 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಇಲಾಖೆಯ 9 ವಸತಿ ನಿಲಯಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ 5ವಸತಿ ನಿಲಯ ಮತ್ತು ವಸತಿ ಶಾಲೆಗಳಿವೆ. ಪಟ್ಟಣದ ಚಂದಾಪುರ ನಗರದಲ್ಲಿಯೇ 12 ವಸತಿ ನಿಲಯಗಳಿವೆ. ಮೇ 16ರಿಂದ ಶಾಲೆ ಪ್ರಾರಂಭದಿಂದಲೂ ಇಲ್ಲಿಯ ವರೆಗೆ ವಸತಿ ನಿಲಯಗಳು ಪ್ರಾರಂಭವಾಗದೇ ಇರುವುದರಿಂದ ಹಳೆ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ದಿನನಿತ್ಯ ಬಂದು ಹೋಗುತ್ತಿದ್ದಾರೆ. ಆದರೆ ವಸತಿ ನಿಲಯದಲ್ಲಿ ಊಟ ಮತ್ತು ಉಪಹಾರ ಇಲ್ಲದೇ ಇರುವುದರಿಂದ ಮತ್ತೆ ಮರಳಿ ಮನೆಗೆ ಹೋಗುತ್ತಿದ್ದಾರೆ. ಶಾಲೆ-ಕಾಲೇಜುಗಳು ಪ್ರಾರಂಭವಾಗಿದ್ದು, ಪಾಠಗಳು ನಡೆಯುತ್ತಿದ್ದರೂ ವಿದ್ಯಾರ್ಥಿ ನಿಲಯಗಳ ಬಾಗಿಲು ಮಾತ್ರ ಮುಚ್ಚಿಕೊಂಡಿವೆ.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಚಿಂಚೋಳಿ, ಕುಂಚಾವರಂ, ಸುಲೇಪೇಠ, ಐನಾಪುರ, ಚಿಂಚೋಳಿ, ಗಡಿಕೇಶ್ವಾರ, ಚಂದನಕೇರಾ, ಚಿಂಚೋಳಿ, ವೃತ್ತಿಪರ ಕಾಲೇಜು ವಸತಿ ನಿಲಯ ಚಿಂಚೋಳಿ, ವಂಟಿಚಿಂತಾ, ಪಾಲತ್ಯಾ ತಾಂಡಾ, ವಸತಿ ಶಾಲೆ ಚಿಂಚೋಳಿ,ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ವಸತಿ ನಿಲಯಗಳು ಚಂದಾಪುರ, ಚಿಮ್ಮನಚೋಡ, ಚಂದಾಪುರ, ಕೋಡ್ಲಿ, ರಾಯಕೋಡ, ಸಾಲೇಬೀರನಳ್ಳಿ, ಚಂದಾಪುರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸುಲೇಪೇಟ ಗ್ರಾಮದಲ್ಲಿ 2 ವಸತಿ ನಿಲಯಗಳು ಮತ್ತು ಚಿಂಚೋಳಿ ಪಟ್ಟಣದಲ್ಲಿ 3 ವಸತಿ ನಿಲಯಗಳಿವೆ. ಆದರೆ ವಸತಿ ನಿಲಯಗಳಿಗೆ ಇನ್ನು ಸಿಬ್ಬಂದಿಗಳೇ ಹಾಜರಾಗಿಲ್ಲ. ವಸತಿ ನಿಲಯಗಳಲ್ಲಿ ಸ್ವಚ್ಛತೆಯನ್ನು ಮಾಡಿಲ್ಲ. ವಿದ್ಯುತ್‌ ದೀಪ, ಕುಡಿಯುವ ನೀರು, ಬಿಸಿ ನೀರು, ಫ್ಯಾನ್‌, ಶೌಚಾಲಯ, ಮೂತ್ರಾಲಯಗಳನ್ನು ಇನ್ನು ಶುಚಿತ್ವಗೊಳಿಸಿಲ್ಲ. ವಿದ್ಯಾರ್ಥಿಗಳಿಗೆ ಹೊಸದಾಗಿ ಹಾಸಿಗೆ ಹೊದಿಕೆ ಮತ್ತು ಊಟದ ತಟ್ಟೆ, ಕುಡಿಯಲು ನೀರಿನ ಲೋಟಗಳನ್ನು ಕೂಡಾ ಶುಚಿಗೊಳಿಸಿಲ್ಲ. ಕೂಡಲೇ ವಸತಿನಿಲಯಗಳನ್ನು ಆರಂಭಿಸಬೇಕು ಎಂದು ಮಕ್ಕಳ ಪಾಲಕರು ಆಗ್ರಹಿಸಿದ್ದಾರೆ.

ಚಿಂಚೋಳಿ ತಾಲೂಕಿನಲ್ಲಿ ವಸತಿ ನಿಲಯಗಳು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಊಟ ಉಪಹಾರ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಅನೇಕ ಗ್ರಾಮಗಳಲ್ಲಿ ವಸತಿನಿಲಯಗಳ ಬಾಗಿಲು ಬಂದ್‌ ಇರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದಾರೆ. ಎಲ್ಲ ವಸತಿ ನಿಲಯಗಳಿಗೆ ಭೇಟಿ (ಬುಧವಾರ)ನೀಡಿ ಪರಿಶೀಲಿಸುತ್ತೇನೆ. -ಅನಿಲಕುಮಾರ ರಾಠೊಡ, ತಾಪಂ ಇಒ

ತಾಲೂಕಿನಲ್ಲಿ ಶಾಲೆ ಕಾಲೇಜು ಪ್ರಾರಂಭವಾಗಿವೆ. ಆದರೆ ವಸತಿ ನಿಲಯಗಳಲ್ಲಿ ಹಳೆ ವಿದ್ಯಾರ್ಥಿಗಳಿಗೆ ಊಟ ಉಪಹಾರ ಕೊಡುತ್ತಿಲ್ಲವೆಂದು ತಿಳಿದು ಬಂದಿದೆ. ಬುಧವಾರ ಎಲ್ಲ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. -ಅಂಜುಮ ತಬಸುಮ, ತಹಶೀಲ್ದಾರ

-ಶಾಮರಾವ ಚಿಂಚೋಳಿ

ಟಾಪ್ ನ್ಯೂಸ್

7-1

ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ; ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

arun-singh

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್

6

ಸಾಗರ: ನಾಲ್ಕು ತಿಂಗಳಿಂದ ಕೆಟ್ಟು ನಿಂತ ಲಾಂಚ್

ನಿಮಗೆ ತಾಕತ್ತಿದ್ರೆ ಬಿಹಾರದಲ್ಲಿ ಆರ್ ಎಸ್ ಎಸ್ ನಿಷೇಧಿಸಿ: ಲಾಲೂಗೆ ಕೇಂದ್ರ ಸಚಿವ ಸವಾಲು

ನಿಮಗೆ ತಾಕತ್ತಿದ್ರೆ ಬಿಹಾರದಲ್ಲಿ ಆರ್ ಎಸ್ ಎಸ್ ನಿಷೇಧಿಸಿ: ಲಾಲೂಗೆ ಕೇಂದ್ರ ಸಚಿವ ಸವಾಲು

ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

ಪಿಎಫ್ಐ ಬ್ಯಾನ್ ಮಾಡುವಂತೆ ಅಸೆಂಬ್ಲಿಯಲ್ಲಿ ಕೂಗಾಡಿದ್ದೇ ಕಾಂಗ್ರೆಸ್ ನವರು; ಸಿಎಂ ಬೊಮ್ಮಾಯಿ

ವಿವಾಹಿತ / ಅವಿವಾಹಿತ ಸೇರಿ ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ

ವಿವಾಹಿತ / ಅವಿವಾಹಿತ ಸೇರಿ ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಿಯಾಂಕ್‌ ಸೋಲಿಸಲು ಬಿಜೆಪಿ ಹೆಣೆಯುತ್ತಿದೆ ತಂತ್ರ; ಸವದಿ ಸಮ್ಮುಖ ಗುಪ್ತ ಸಭೆ

ಪ್ರಿಯಾಂಕ್‌ ಸೋಲಿಸಲು ಬಿಜೆಪಿ ಹೆಣೆಯುತ್ತಿದೆ ತಂತ್ರ; ಸವದಿ ಸಮ್ಮುಖ ಗುಪ್ತ ಸಭೆ

ಬೇಂದ್ರೆ ಸಾಹಿತ್ಯ ನೋವಿನಲ್ಲಿ ಬೆಂದಿದ್ದು: ಡಾ|ಪಂಡಿತ್‌

ಬೇಂದ್ರೆ ಸಾಹಿತ್ಯ ನೋವಿನಲ್ಲಿ ಬೆಂದಿದ್ದು: ಡಾ|ಪಂಡಿತ್‌

ಪ್ರಿಯಾಂಕ್ ಕ್ಷೇತ್ರದ ಪುರಸಭೆಯಲ್ಲಿ ಭ್ರಷ್ಟಾಚಾರ: ಬಿಜೆಪಿ ಪ್ರತಿಭಟನೆ

ಪ್ರಿಯಾಂಕ್ ಕ್ಷೇತ್ರದ ಪುರಸಭೆಯಲ್ಲಿ ಭ್ರಷ್ಟಾಚಾರ: ಬಿಜೆಪಿ ಪ್ರತಿಭಟನೆ

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ಭ್ರಷ್ಟಾಚಾರ, ಹಗರಣಗಳು ಅತೀ ಹೆಚ್ಚು ನಡೆದಿರುವುದೇ ಸಿದ್ದರಾಮಯ್ಯ ಸರಕಾರದಲ್ಲಿ : ಅರುಣ್ ಸಿಂಗ್

ಪಿಎಸ್ಐ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ರಾಜೇಶ್ ಗೆ ಜಾಮೀನು

ಪಿಎಸ್ಐ ಅಕ್ರಮ ಪ್ರಕರಣ: ದಿವ್ಯಾ ಹಾಗರಗಿ ಪತಿ ರಾಜೇಶ್ ಗೆ ಜಾಮೀನು

MUST WATCH

udayavani youtube

ದಿನ 4| ಕೂಷ್ಮಾಂಡ ದೇವಿ

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

ಹೊಸ ಸೇರ್ಪಡೆ

7-1

ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ; ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಪೊಲೀಸ್ ವಶಕ್ಕೆ

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

ಮೊದಲು ನಳಿನ್ ಕುಮಾರ್ ಕಟೀಲ್ ಮಂಪರು ಪರೀಕ್ಷೆ ಮಾಡಿ: ಹರಿಪ್ರಸಾದ್

arun-singh

ಪೇಸಿಎಂ ಎಂಬುದು ಸಜ್ಜನ, ಸಾಮಾನ್ಯರ ಸಿಎಂ ಗೆ ಮಾಡುವ ಅಪಮಾನ: ಅರುಣ್ ಸಿಂಗ್

6

ಸಾಗರ: ನಾಲ್ಕು ತಿಂಗಳಿಂದ ಕೆಟ್ಟು ನಿಂತ ಲಾಂಚ್

ನಿಮಗೆ ತಾಕತ್ತಿದ್ರೆ ಬಿಹಾರದಲ್ಲಿ ಆರ್ ಎಸ್ ಎಸ್ ನಿಷೇಧಿಸಿ: ಲಾಲೂಗೆ ಕೇಂದ್ರ ಸಚಿವ ಸವಾಲು

ನಿಮಗೆ ತಾಕತ್ತಿದ್ರೆ ಬಿಹಾರದಲ್ಲಿ ಆರ್ ಎಸ್ ಎಸ್ ನಿಷೇಧಿಸಿ: ಲಾಲೂಗೆ ಕೇಂದ್ರ ಸಚಿವ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.