ಲಕ್ಷಾಂತರ ಮೌಲ್ಯದ ಅಕ್ರಮ ಕೆಂಪು ಮರಳು ವಶ

Team Udayavani, Jul 9, 2019, 3:01 PM IST

ಚಿಂಚೋಳಿ: ಹಲಕೋಡ ಗ್ರಾಮದ ಬಳಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಕೆಂಪು ಉಸುಕನ್ನು ತಹಶೀಲ್ದಾರ್‌ ಪಂಡಿತ ಬಿರಾದಾರ ದಾಳಿ ನಡೆಸಿ ವಶಪಡಿಸಿಕೊಂಡರು.

ಚಿಂಚೋಳಿ: ತಾಲೂಕಿನ ಹಲಕೊಡಾ ಗ್ರಾಮದ ಹತ್ತಿರ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿನ ಲಕ್ಷಾಂತರ ರೂ. ಬೆಲೆ ಬಾಳುವ ಕೆಂಪು ಮರಳನ್ನು ಹೊಲವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದನ್ನು ತಹಶೀಲ್ದಾರ ಪಂಡಿತ ಬಿರಾದಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಹಲಕೋಡ ಗ್ರಾಮದ ನದಿಯಲ್ಲಿನ ಕೆಂಪು ಉಸುಕು ಹೆಚ್ಚಿನ ಬೆಲೆ ಬಾಳುವುದಾಗಿದ್ದು, ಅಪಾರ ಬೇಡಿಕೆಯಿದೆ. ಹೀಗಾಗಿ ಮರಳು ದಂಧೆಕೋರರು ಅನೇಕ ವರ್ಷಗಳಿಂದ ನದಿಯಲ್ಲಿನ ಉಸುಕನ್ನು ಯಾವುದೇ ಪರವಾನಗಿ ಪಡೆಯದೇ ಟಿಪ್ಪರ್‌, ಲಾರಿ, ಟ್ರ್ಯಾಕ್ಟರ್‌, ಟಂಟಂ ಮೂಲಕ ತಾಂಡೂರ, ಚಿಂಚೋಳಿ, ಸೇಡಂ, ಹುಮನಾಬಾದ, ಕಲಬುರಗಿ, ಚಿತ್ತಾಪುರ, ಬೀದರ, ಬಸವಕಲ್ಯಾಣ ಮುಂತಾದ ನಗರ ಪ್ರದೇಶಗಳಿಗೆ ರಾತ್ರಿ-ಹಗಲು ಎನ್ನದೇ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದರು.

ಹಲಕೋಡಾ, ಜಟ್ಟೂರ, ಪೋತಂಗಲ್ ಗ್ರಾಮಗಳ ಹತ್ತಿರ ಕೆಂಪು ಉಸುಕನ್ನು ತೆಗೆಯಲು ಲೀಜ್‌ ಮೇಲೆ ಕರ್ನಾಟಕ ಮೂಲಭೂತ ಸೌಕರ್ಯಗಳ ನಿಗಮ ನಿಯಮಿತಕ್ಕೆ ವಹಿಸಿಕೊಡಲಾಗಿದೆ. ಆದರೆ ಸರಕಾರಕ್ಕೆ ಯಾವುದೇ ರಾಯಲ್ಟಿ ತುಂಬದೇ ಮತ್ತು ಲೀಜ್‌ ಪಡೆದುಕೊಳ್ಳದೇ ಅಕ್ರಮವಾಗಿ ಉಸುಕು ಮಾರಾಟ ಮಾಡಲಾಗುತ್ತಿದೆ ಎಂದು ಅನೇಕ ಸಲ ತಹಶೀಲ್ದಾರ್‌ಗೆ, ಪೊಲೀಸರಿಗೆ ಶಸಿರೋಳಿ ತಾಪಂ ಸದಸ್ಯ ವೆಂಕಟರೆಡ್ಡಿ ಪಾಟೀಲ ಜಟ್ಟೂರ ದೂರು ಸಲ್ಲಿಸಿದ್ದರಿಂದ ಈ ದಾಳಿ ನಡೆಸಲಾಗಿದೆ.

ಹಲಕೋಡಾ, ಪೋತಂಗಲ್, ಜಟ್ಟೂರ ಹತ್ತಿರ ಉಸುಕು ಸಾಗಿಸುವ ಟಿಪ್ಪರ್‌, ಲಾರಿಗಳ ಮೇಲೆ ನಿಗಾ ವಹಿಸಲು ಕಂದಾಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಅಕ್ರಮ ಉಸುಕು ಸಂಗ್ರಹ ಮಾಡಿದ ಮಾಲೀಕರ ವಿರುದ್ಧ ಸುಲೇಪೇಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ನಿರೀಕ್ಷಕ ಸುಭಾಷ ಸುಲೇಪೇಟ, ಜೆಇ ಗಿರಿರಾಜ ಸಜ್ಜನಶೆಟ್ಟಿ ಇನ್ನಿತರರಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಅಫಜಲಪುರ: ತಾಲೂಕಿನ 5 ಮರಳು ಸಾಗಟ ಕೇಂದ್ರಗಳಿಂದ ಅಕ್ರಮ ಮರಳು ಸಾಗಾಟ ತಡೆಗಾಗಿ ಮರಳು ಸಮಿತಿ ರಚನೆ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ರಾಮಚಂದ್ರ ಗಡದೆ ಹೇಳಿದರು. ಪಟ್ಟಣದ...

  • ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದ ಬಾಲಕಿ ಹಾಗೂ ಹೈದ್ರಾಬಾದನ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರರಕಣಗಳನ್ನು ಖಂಡಿಸಿ ನಗರದಲ್ಲಿ...

  • „ಮಡಿವಾಳಪ್ಪಹೇರೂರ ವಾಡಿ: ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷದಿಂದ ಐತಿಹಾಸಿಕ ಬೌದ್ಧ ತಾಣ ಸನ್ನತಿಯಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. 2009ರಲ್ಲಿ...

  • ಕಲಬುರಗಿ: ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ಎರಡನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ದಾರುಣ ಘಟನೆಯನ್ನು ವಿವಿಧ ಸಂಘಟನೆಗಳು ತೀವ್ರವಾಗಿ...

  • ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು 6 ಜಿಲ್ಲೆಗಳ 33 ತಾಲೂಕು ಕೇಂದ್ರಗಳಲ್ಲಿ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಯ ನೇಮಕಾತಿಗೆ ಪೂರ್ವಭಾವಿಯಾಗಿ...

ಹೊಸ ಸೇರ್ಪಡೆ

  • ಕುಂದಾಪುರ: ರಾಜ್ಯದ ನಿರ್ವಸಿತ ಮೀನುಗಾರರಿಗೆ ಆಶ್ರಯ ಕಲ್ಪಿಸುವ ಮತ್ಸ್ಯಾಶ್ರಯ ಯೋಜನೆಯನ್ನು ಮೀನುಗಾರರ ಬೇಡಿಕೆಯಂತೆ ರಾಜೀವ್‌ ಗಾಂಧಿ ವಸತಿ ನಿಗಮದ ಬದಲು ಮತ್ತೆ...

  • ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ...

  • ನಗದು ರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವರ ಪ್ರಮಾಣ ಹೆಚ್ಚುತ್ತಿದ್ದು,ಹಣ ವರ್ಗಾವಣೆ, ಬಿಲ್‌ ಪಾವತಿ ಗಳನ್ನು ಕಾರ್ಡ್‌ ಅಥವಾ ಆ್ಯಪ್‌ಗ್ಳ ಮೂಲಕ ಮಾಡುತ್ತಿದ್ದಾರೆ....

  • ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ...

  • ದರ್ಶನ್‌ ನಾಯಕರಾಗಿ ನಟಿಸಿರುವ "ಒಡೆಯ' ಚಿತ್ರದ ಹಾಡು, ಟ್ರೇಲರ್‌ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಿಡುಗಡೆಯ ಹಂತದಲ್ಲಿರುವ "ಒಡೆಯ' ಬಗ್ಗೆ...