
ಅಕ್ರಮ ಮರಳುಗಾರಿಕೆ: ಲೋಕಾಯುಕ್ತ ಬಲೆಗೆ ಪೊಲೀಸರು
Team Udayavani, Sep 23, 2022, 3:01 PM IST

ಕಲಬುರಗಿ: ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುವ ನಿಟ್ಟಿನಲ್ಲಿ ಲಂಚ ಪಡೆಯುತ್ತಿದ್ದಾಗ ಜೇವರ್ಗಿ ಸಿಪಿಐ ಮತ್ತು ಇಬ್ಬರು ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಲೋಕಾಯುಕ್ತ ಎಸ್ಪಿ ಕರ್ನೂಲ್, ಡಿವೈಎಸ್‌ಪಿ ಸಿದ್ದಣ್ಣಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ದೃವತಾರಾ, ಸಿಬ್ಬಂದಿ ಪ್ರದೀಪ್, ಸಿದ್ದಲಿಂಗ ದಾಳಿ ನಡೆಸಿದ್ದಾರೆ. 30 ಸಾವಿರ ಲಂಚ ಪಡೆಯುತ್ತಿದ್ದ ಜೇವರ್ಗಿ ಸಿಪಿಐ ಶಿವಪ್ರಸಾದ ಮಠದ್ ಮತ್ತುಎಸ್‌ಪಿ ಕರ್ತವ್ಯ ಮಾಡುವ ಪೊಲೀಸ್ ಪೇದೆ ಶಿವರಾಯ, ಸಿಪಿಐ ವಾಹನ ಚಾಲಕ ಅವ್ವಣ್ಣ ಎಸಿಬಿ ಬಲೆಗೆ ಬಿದ್ದವರು. ಮರಳು ಸಾಗಿಸಲು ಅನುಮತಿ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಖೀಲ್ ಎಂಬುವವರು ಹಣ ಕೊಡಲು ನಂದಿಕೂರ ಬಳಿ ಬಂದಾಗ ದಾಳಿ ನಡೆಸಿ, ಮೂವರನ್ನು ವಶಕ್ಕೆ ಪಡೆದಿದ್ದು, ಜೇವರ್ಗಿ ಸರ್ಕ್ಯೂಟ್ ಹೌಸ್‌ನಲ್ಲಿ ವಿಚಾರಣೆ ನಡೆಸಿದ್ದಾರೆ. ಜೇವರ್ಗಿ ಠಾಣೆಯ ಎಸ್‌ಬಿ ಸಿಬ್ಬಂದಿ ಶಿವರಾಯ ಮರುಳು ಮಾಫಿಯಾದಿಂದ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದು, ಈ ಹಣ ಸಿಪಿಐಗೆ ಕೊಡಲು ಪಡೆದಿದ್ದಾಗಿ ತಿಳಿದಿದೆ.
ನಂತರ ಲೋಕಾಯುಕ್ತ ಅಧಿಕಾರಿಗಳು, ಶಿವರಾಯನಿಂದ ಸಿಪಿಐ ಶಿವಪ್ರಸಾದ ಮಠದ ಅವರಿಗೆ ಫೋನ್ ಮೂಲಕ ಮಾತನಾಡಿಸಿದ್ದಾರೆ. ಈ ವೇಳೆ ಹಣ ತೆಗೆದುಕೊಳ್ಳಲು ಬರುವಂತೆ ಸೂಚಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಸಿಪಿಐ ಹಾಗೂ ವಾಹನ ಚಾಲಕ ಅವಣ್ಣ ತೆರಳುತ್ತಿದ್ದಾಗ ನಂದಿಕೂರ ಬಳಿ ಅವರನ್ನು ಲೋಕಾಯುಕ್ತ ಪೊಲೀಸ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
