ಮನೆಗೆ ಬೆಂಕಿ: ಲಕ್ಷ ರೂ. ನಗದು, ಗೃಹೋಪಯೋಗಿ ವಸ್ತು ಆಹುತಿ


Team Udayavani, Feb 6, 2021, 12:36 PM IST

incident at kalburgi

ಕಲಬುರಗಿ: ಮನೆಯೊಂದರಲ್ಲಿ ಆಕ್ಮಸಿಕ ಬೆಂಕಿ ಹತ್ತಿ ಒಂದು ಲಕ್ಷ ರೂ. ನಗದು ಮತ್ತು ಬಟ್ಟೆ-ಬರೆ ಸೇರಿದಂತೆ ಗೃಹಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಶುಕ್ರವಾರ ಬೆಳಗ್ಗೆ ನಗರದ ಗುಲಾಬವಾಡಿಯಲ್ಲಿ ನಡೆದಿದೆ. ಸಿದ್ದಪ್ಪ ಪಸ್ತಾಪುರ ಎನ್ನುವವರು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಿಲ್ಲ. ಖಾಸಗಿ ವಾಹನ ಚಾಲಕನಾಗಿರುವ ಸಿದ್ದಪ್ಪ ಕೆಲಸ ನಿಮಿತ್ತ ತೆರಳಿದ್ದರು.

ಪತ್ನಿ ಸಂಗೀತಾ ಮನೆಗೆಲಸ ಮಾಡುತ್ತಿದ್ದು, ಅವರು ಮನೆಯಲ್ಲಿ ಇರಲಿಲ್ಲ. ಮೂವರು ಮಕ್ಕಳು ಶಾಲೆಗೆ ಹೋಗಿದ್ದರು. ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯಲ್ಲಿ ಏಕಾಏಕಿಬೆಂಕಿ ಹೊತ್ತಿಕೊಂಡಿತ್ತು. ಸ್ವಲ್ಪ ದೂರದಲ್ಲೇ ನೀರು ತುಂಬುತ್ತಿದ್ದ ಇತರ ಮಹಿಳೆಯರು ಇದನ್ನು ಗಮನಿಸಿದ್ದರು. ಆಗ ಸ್ಥಳೀಯರೇ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿ, ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದರು.

ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು. ಅಷ್ಟರಲ್ಲೇ ಮನೆಯಲ್ಲಿನ ಬಹುತೇಕ ವಸ್ತುಗಳು ಸುಟ್ಟು ಹಾನಿಯಾಗಿವೆ. ಬೆಂಕಿಯ ಕೆನ್ನಾಲಿಗೆಗೆ ಬಟ್ಟೆಗಳು, ಹಾಸಿಗೆ, ದವಸ-ಧಾನ್ಯಗಳು, ಗೃಹಪಯೋಗಿ ವಸ್ತುಗಳು, ಪಿಠೊಪಕರಣಗಳು ಮತ್ತು ಮಕ್ಕಳ ಪುಸ್ತಕಗಳು ನಾಶವಾಗಿದೆ. ಮನೆಯಲ್ಲಿ ಗ್ಯಾಸ್‌ ಸೋರಿಕೆಯಿಂದ ಬೆಂಕಿ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ. ನಿಧಾನವಾಗಿ ಗ್ಯಾಸ್‌ ಲೀಕ್‌ ಆಗಿದ್ದು, ವಿದ್ಯುತ್‌ ಸ್ಪಾರ್ಕ್‌ ಅಥವಾ ಯಾವುದೋ ಬೆಂಕಿ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪರುಶುರಾಮ ತಿಳಿಸಿದ್ದಾರೆ.

ಇದನ್ನೂ ಓದಿ:ತಲಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಬೆಂಕಿ ಅನಾಹುತದಲ್ಲಿ ಅಲ್ಮಾರಿ ಮತ್ತು ಸೂಟ್‌ಕೇಸ್‌ ಸುಟ್ಟಿವೆ. ಸಂಗೀತಾ ಅವರು ಸ್ವ-ಸಹಾಯ ಸಂಘದಿಂದ ಒಂದು ಲಕ್ಷ ರೂ. ಸಾಲ ಮಾಡಿ ಮನೆಯಲ್ಲಿ ತಂದು ಇಟ್ಟಿದ್ದರು. ಆ ಹಣವೂ ಬೆಂಕಿಗೆ ಆಹುತಿಯಾಗಿವೆ ಎಂದು ಮನೆಯ ಯಜಮಾನ ಸಿದ್ದಪ್ಪ ಪಸ್ತಾಪುರ ಆಳಲು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಕಾಂಗ್ರೆಸ್ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; ಚುನಾವಣಾ ಸಿದ್ದತೆ ಆರಂಭಿಸಿದ ಕೈ ಪಡೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

ಜಿ.ಪಂ-ತಾ.ಪಂ ಚುನಾವಣೆ: ವಿಚಾರಣೆ ಮೇ 23ಕ್ಕೆ ಮುಂದೂಡಿಕೆ

1-fdsfdsfds

ಕಿರುತೆರೆ ನಟಿ ಚೇತನಾ ಸಾವು!: ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆ ಮುಳುವಾಯಿತೇ ?

ಸಾಗರ : ಶಾಲೆಗೆ ಹೋಗುವುದಾಗಿ ಹೇಳಿ ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಸಾಗರ: ಶಾಲೆಗೆ ಹೋಗುತ್ತೇನೆಂದು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ

cm-ibrahim.

ಪರಿಷತ್ ಸ್ಥಾನದ ಮೇಲೆ ಕಣ್ಣಿಟ್ಟ ಸಿ.ಎಂ.ಇಬ್ರಾಹಿಂ; ಜೆಡಿಎಸ್ ನಾಯಕರಿಗೆ ಕಸಿವಿಸಿ

sensex

1,300 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ; 16,200 ಮಟ್ಟವನ್ನು ಮರಳಿ ಪಡೆದ ನಿಫ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13road

ಜೇವರ್ಗಿ: ಸ್ಮಶಾನಕ್ಕೆ ತೆರಳಲು ರಸ್ತೆ ಬಂದ್

12train

ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ಒತ್ತಾಯ

11protest

ಹಲ್ಲೆ ಖಂಡಿಸಿ ವಕೀಲರಿಂದ ಪ್ರತಿಭಟನೆ

10sc

ಎಸ್ಸಿ -ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ 20ರಂದು ಹೋರಾಟ

9report

ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

MUST WATCH

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

ಹೊಸ ಸೇರ್ಪಡೆ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

ಪ್ರತಿಯೊಂದು ಸಮುದಾಯವನ್ನು ಸಂಘಟನೆ ತಲುಪಬೇಕು: ಶಾಸಕ ಸಿದ್ದು ಸವದಿ

Supreme Court

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವು ನಿಖರವಾಗಿ ಎಲ್ಲಿ ಕಂಡುಬಂದಿದೆ ?: ವಿವರ ಕೇಳಿದ ಸುಪ್ರೀಂ

21school

ದೇವದುರ್ಗ ತಾಲೂಕಲ್ಲಿ 193 ಶಿಥಿಲಗೊಂಡ ಕಟ್ಟಡ: ಮಕ್ಕಳಿಗೆ ಬಯಲಲ್ಲೇ ಪಾಠ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ: ಬಸ್‌ಗೆ ಕಾರು ಢಿಕ್ಕಿ; ಎನ್‌ಸಿಪಿ ಶಾಸಕ ಸಂಗ್ರಾಮ್ ಪಾರು

20fever

ಜ್ವರ ಇದ್ದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.