ಬಂಡವಾಳಶಾಹಿಗಳ ಕೈಯಲ್ಲಿ ಭಾರತ

Team Udayavani, Feb 7, 2019, 9:42 AM IST

gul-2.jpg

ವಾಡಿ: ನೇತಾಜಿ ಸುಭಾಶ್ಚಂದ್ರ ಬೋಸ್‌ ನೇತೃತ್ವದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ನೀಡಿದ್ದರೆ, ಭಾರತ ಶೋಷಣೆ ಮುಕ್ತ ಸಮಾಜವಾದಿ ರಾಷ್ಟ್ರವಾಗಿರುತ್ತಿತ್ತು ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಜಿಲ್ಲಾಧ್ಯಕ್ಷ ಮಲ್ಲಿನಾಥ ಸಿಂಘ ಹೇಳಿದರು.

ಹಳಕರ್ಟಿ ಗ್ರಾಮದಲ್ಲಿ ಆರ್‌ಕೆಎಸ್‌ ರೈತ ಸಂಘಟನೆ, ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 122ನೇ ಜನ್ಮದಿನಾಚರಣೆಯ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಪರಕೀಯರಿಂದ ಮುಕ್ತಿ ಪಡೆದ ಭಾರತ ಸ್ವತಂತ್ರವಾಗಿ ಸ್ವದೇಶಿ ಬಂಡವಾಳಗಾರರ ತೆಕ್ಕೆಗೆ ಸಿಲುಕುವ ಮೂಲಕ ಮತ್ತೆ ಶೋಷಣೆಗೆ ದಾರಿಮಾಡಿಕೊಟ್ಟಂತಾಗಿದೆ. ಭಾರತ ಮತ್ತೆ ಶೋಷಕರ ಕೈಗೆ ಸಿಗಬಾರದು. ರಷ್ಯಾ ಮಾದರಿ ಸಮಾಜವಾದಿ ರಾಷ್ಟ್ರವಾಗಿ ಭಾರತ ನಿರ್ಮಾಣವಾಗುವ ಮೂಲಕ ಎಲ್ಲ ರೀತಿಯ ಶೋಷಣೆಗಳಿಂದ ಬಿಡುಗಡೆಯಾಗಬೇಕು ಎಂಬ ಮಹೋನ್ನತ ಕನಸು ಕಂಡಿದ್ದರು. ಆದರೆ, ಸ್ವಾತಂತ್ರ್ಯ ಸಿಗುವುದಕ್ಕೂ ಮುಂಚೆಯೇ ಬೋಸ್‌ ಹುತಾತ್ಮರಾದ ಕಾರಣ ನಮ್ಮ ದೇಶ ನಮ್ಮದೇ ಬಂಡವಾಳಶಾಹಿ ಶೋಷಕರ ಕೈಗೆ ಸಿಲುಕುವಂತಾಯಿತು ಎಂದು ವಿವರಿಸಿದರು.

ಸಂಧಾನಪರ ಹೋರಾಟಗಳಿಂದ ಜನರ ಬೇಡಿಕೆಗಳು ಈಡೇರುವುದಿಲ್ಲ. ಸಂಧಾನ ಎಂದರೆ ಅದೊಂದು ರೀತಿಯ ಗುಲಾಮಗಿರಿ ಒಪ್ಪಂದವೇ ಸರಿ. ಭಾರತ ಸ್ವಾತಂತ್ರ್ಯ ಚಳವಳಿಲ್ಲಿಯೂ ಇದೇ ಆಗಿದೆ. ಮಹಾತ್ಮ ಗಾಂಧಿ ನೇತೃತ್ವದಲ್ಲಿ ಸಂಧಾನಪರ ಪಂಥ ಸೃಷ್ಟಿಯಾಗಿ ಬ್ರಿಟಿಷರಿಗೆ ಕೈಮುಗಿದು ಸ್ವಾತಂತ್ರ್ಯ ಕೇಳುವಂತಾಗಿತ್ತು. ಆದರೆ, ನೇತಾಜಿ, ಭಗತಸಿಂಗ್‌, ಚಂದ್ರಶೇಖರ ಆಜಾದ್‌, ಅಶ್ಪಾಖುಲ್ಲಾ ಖಾನ್‌, ಖುದಿರಾಮ ಬೋಸ್‌ ಅವರಂತ ಕ್ರಾಂತಿಕಾರಿಗಳ ತಂಡದ ಸಂಧಾನತೀತ ಪಂಥದ ಹೋರಾಟಕ್ಕೆ ಬ್ರಿಟಿಷರು ಬೆದರಬೇಕಾಯ್ತು. ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳನ್ನು ದೂರವಿಟ್ಟು ಸಂಧಾನಪರ ಪಂಥದ ನಾಯಕರ ಕೈಗೆ ಸ್ವಾತಂತ್ರ್ಯವಿಟ್ಟು ಓಡಿ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.

ಆರ್‌ಕೆಎಸ್‌ ರೈತ ಸಂಘದ ಮುಖಂಡ ರಾಘವೇಂದ್ರ ಅಲ್ಲಿಪುರ, ಮಲ್ಲಿನಾಥ ಹುಂಡೇಕಲ್‌, ಚೌಡಪ್ಪ ಗಂಜಿ, ಶಿವುಕುಮಾರ ಆಂದೋಲಾ, ಶರಣುಕುಮಾರ ದೋಶೆಟ್ಟಿ, ಗೌತಮ ಪರ್ತೂಕರ, ಸಿದ್ದು ಮದ್ರಿ, ನಾಗರಾಜ ಸೂಲಹಳ್ಳಿ, ನಾಗಣ್ಣ ಇಸಬಾ, ದೊಡ್ಡಪ್ಪ ಹೊಸೂರ, ದೇವಿಂದ್ರ ನಾಚವಾರ, ಭೀಮು ಮಾಟ್ನಳ್ಳಿ, ವಿರೇಶ ಮುತ್ತಗಿ, ಅಯ್ಯಪ್ಪ ಹುಳಗೋಳ, ಬಸವರಾಜ ನಾಲವಾರ ಮತ್ತಿತರರು ಇದ್ದರು.

ಏಳು ದಶಕಗಳ ಇತಿಹಾಸ ಇರುವ ಸ್ವಾತಂತ್ರ್ಯ ಭಾರತದಲ್ಲೂ ನಾವಿಂದು ಬಡತನ, ನಿರುದ್ಯೋಗ, ಅಸಮಾನತೆ, ಶೋಷಣೆ, ಜಾತಿಯತೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳು ಜೀವಂತವಾಗಿರುವುದನ್ನು ಕಾಣುತ್ತೇವೆ. ಹೀಗಾಗಿ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರು ಕಂಡ ಕನಸಾಗಿರಲಿಲ್ಲ.
•ಮಲ್ಲಿನಾಥ ಸಿಂಘ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ

ಟಾಪ್ ನ್ಯೂಸ್

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

Vaccine

ವರ್ಷಾಂತ್ಯದಿಂದ ವಿದೇಶಗಳಿಗೆ ಲಸಿಕೆ ರಫ್ತು; ಕೇಂದ್ರ ಸರ್ಕಾರದ ಘೋಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡ ಗೃಹಿಣಿ : ತಾಯಿ-ಮಗಳು ಸಾವು, ಮಗನ ಸ್ಥಿತಿ ಗಂಭೀರ

10lake

ಯಡ್ರಾಮಿ ಸ್ವಚ್ಛತೆಗೆ ಅನುದಾನ ಕೊರತೆಯಂತೆ!

9power

ನಿರಂತರ ವಿದ್ಯುತ್‌ ನೀಡಲು ಮನವಿ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.