ಜೆಡಿಎಸ್ ಹಣದಿಂದ ರಾಜಕೀಯ ಮಾಡ್ತಿಲ್ಲ, ಹಣಕ್ಕಿಂತ ಜನ ಮುಖ್ಯ: ದೇವೇಗೌಡ


Team Udayavani, Dec 2, 2022, 2:39 PM IST

ಜೆಡಿಎಸ್ ಹಣದಿಂದ ರಾಜಕೀಯ ಮಾಡ್ತಿಲ್ಲ, ಹಣಕ್ಕಿಂತ ಜನ ಮುಖ್ಯ: ದೇವೇಗೌಡ

ಕಲಬುರಗಿ: ನಾನಾಗಲಿ, ಕುಮಾರಸ್ವಾಮಿ ಅವರಾಗಲಿ ದುಡ್ಡು ನೋಡಿ ರಾಜಕೀಯ ಮಾಡಿಲ್ಲ. ಹಾಗೆ ಮಾಡೋ ಹಾಗಿದ್ದರೆ ಪಂಚರತ್ನ ಯಾತ್ರೆ ನಡೆಯುತ್ತಿತ್ತೇ? ಜನತಾ ಜಲಧಾರೆ ಜನರಿಂದ ನಡೆಯುತ್ತಿದೆ, ಹಣದಿಂದಲ್ಲ. ಹಣದಿಂದ ರಾಜಕೀಯ ಮಾಡುವ ಅವಶ್ಯಕತೆ ನಮಗಿಲ್ಲ. ಹಣಕ್ಕಿಂತ ಜನ ಮುಖ್ಯ ಎಂದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ ಹಣದಿಂದ ಉಳಿದಿಲ್ಲ. ಜನರಿಂದ ಉಳಿದಿದೆ. ಹಣದಿಂದ ನಡೆಯುತ್ತಿದ್ದರೆ, ಪಂಚರತ್ನ, ಜನತಾ ಜಲಧಾರೆ ಸೇರಿದಂತೆ ಇತರೆ ಚಟುವಟಿಕೆಗಳನ್ನು ವರ್ಷಾನುಗಟ್ಟಲೇ ನಡೆಸಲು ಸಾಧ್ಯವಿಲ್ಲ ಯಾರನ್ನು ಹಣ ಕೊಟ್ಟು ಕರೆಯಿಸುತ್ತಿಲ್ಲ ಎಂದ ಅವರು, ವಿರೋಧ ಪಕ್ಷಗಳಿಗೆ ಆರೋಪ ಮಾಡಲಿಕ್ಕೆ ಏನು ಇಲ್ಲ ಇದರಿಂದಾಗಿ ಅವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

ಕಳೆದ ಬಾರಿ ಜನತಾದಳ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿದ್ದು ಜನ ಮತ್ತು ರೈತರ ಹಿತಕ್ಕಾಗಿ ಹಣಕ್ಕಾಗಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ಇದನ್ನೂ ಓದಿ;ಇದು ಪ್ರಧಾನಿ ಮೋದಿಯವರ “ಅತಿದೊಡ್ಡ ಮತ್ತು ಸುದೀರ್ಘ” ರೋಡ್‌ಶೋ

ಬಿಜೆಪಿಯಲ್ಲಿ ರೌಡಿಗಳನ್ನು ಕಾರ್ಯಕತರನ್ನಾಗಿ ಸೇರಿಸಿಕೊಳ್ಳಲಾಗುತ್ತಿಯಲ್ಲಾ ಎಂದು ಕೇಳಿದ ಪ್ರಶ್ನೆಗೆ, ತುಸು ಸಿಡಿಮಿಡಿಗೊಂಡ ಅವರು, ರೌಡಿ ರಾಜಕೀಯ ಕುರಿತು ನನಗೆ ಕೇಳಬೇಡಿ. ಯಾರೂ ಸೇರಿಸಿಕೊಳ್ಳುತ್ತಿದ್ದಾರೋ ಅವರನ್ನೇ ಕೇಳಿ ಎಂದರು.

ಗಡಿ ವಿವಾದ ನಿಲುವು ಬದಲಿಲ್ಲ: ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ವಿಚಾರದಲ್ಲಿ ಜೆಡಿಎಸ್ ಹಿಂದೆ ಆಗಿರುವ ತೀರ್ಮಾನವನ್ನೇ ಬೆಂಬಲಿಸುತ್ತದೆ. ಸರಕಾರ ತನ್ನ ನಿರ್ಧಾರವನ್ನು ಬದಲಿಸುವ ಅಗತ್ಯವಿಲ್ಲ ನಾವು ಅದೇ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದ ಅವರು, ವಿನಾಕಾರಣ ವಿವಾದಗಳನ್ನು ಚುನಾವಣೆ ಮುನ್ನ ಹುಟ್ಟು ಹಾಕುವುದು ಸರಿಯಲ್ಲ ಎಂದರು.

ಮೊಮ್ಮಕ್ಕಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸದೆ ಮುನ್ನಡೆದರು.

ಈ ವೇಳೆಯಲ್ಲಿ ಅನಿತಾ ಕುಮಾರಸ್ವಾಮಿ, ನಜೀರ್ ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದರು.

ಟಾಪ್ ನ್ಯೂಸ್

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

“ಆರಗ ಮತ್ತೂಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

‘ಆರಗ ಮತ್ತೊಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

arrest-25

ಅಗರ್ತಲಾ ರೈಲು ನಿಲ್ದಾಣದಲ್ಲಿ 8 ರೋಹಿಂಗ್ಯಾ, 4 ಬಾಂಗ್ಲಾದೇಶಿಗಳ ಬಂಧನ

car

ಸೌದಿಯಲ್ಲಿ ಕಾರು ಅಪಘಾತ ದ.ಕ. ಜಿಲ್ಲೆಯ ಮೂವರ ಸಾವು: ಸೌದಿಯಲ್ಲೇ ಅಂತ್ಯಕ್ರಿಯೆ ನಡೆಸಲು ತಯಾರಿ

ವಜ್ರದ ನೆಕ್ಲೇಸ್ ಕದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಲಿಯ ಕೈಚಳಕ

ವಜ್ರದ ನೆಕ್ಲೇಸ್ ಕದ್ದ ಕಳ್ಳ ‘ಇಲಿ’! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಇಲಿಯ ಕೈಚಳಕ

ಚೀನ ಸೇರಿದಂತೆ ವಿದೇಶಗಳ 232 ಆ್ಯಪ್‌ ಗಳು ಬ್ಲಾಕ್‌

ಚೀನ ಸೇರಿದಂತೆ ವಿದೇಶಗಳ 232 ಆ್ಯಪ್‌ ಗಳು ಬ್ಲಾಕ್‌

ಶಿರ್ವ: ಕುಡಿದ ಮತ್ತಿನಲ್ಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಶಿರ್ವ: ಕುಡಿದ ಮತ್ತಿನಲ್ಲಿ ಬಾವಿಗೆ ಹಾರಿ ಯುವಕ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-siddaramaih

ಯಡಿಯೂರಪ್ಪರನ್ನೆ ಪಂಚರ್ ಮಾಡಿರುವ ಬಿಜೆಪಿ: ಸಿದ್ದರಾಮಯ್ಯ

1-sadsad

ವಾಡಿ: ಡೀಸೆಲ್ ಟ್ಯಾಂಕ್ ಸ್ಪೋಟಗೊಂಡು ಎಸಿಸಿ ಕಾರ್ಮಿಕ ಮೃತ್ಯು

tdy-4

ರಾಜ್ಯಾದ್ಯಂತ ಸಂಭ್ರಮದ 74ನೇ ಗಣರಾಜ್ಯೋತ್ಸವ ಆಚರಣೆ

1-asdsadsad

ಕಲಬುರಗಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನಕ್ಕೆ ವಿರೋಧ; ಕಲ್ಲು ತೂರಾಟ

psiಸಿಐಡಿ ತನಿಖಾಧಿಕಾರಿಗೆ 76 ಲಕ್ಷ ರೂ. ಲಂಚ: ಕಿಂಗ್‌ಪಿನ್‌ ಹೊಸ ಬಾಂಬ್‌

ಸಿಐಡಿ ತನಿಖಾಧಿಕಾರಿಗೆ 76 ಲಕ್ಷ ರೂ. ಲಂಚ: ಕಿಂಗ್‌ಪಿನ್‌ ಹೊಸ ಬಾಂಬ್‌

MUST WATCH

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

ಹೊಸ ಸೇರ್ಪಡೆ

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

ಎನ್‌ಎಸ್‌ಎ ಸಭೆಗೆ ಬಂದ ಬ್ರಿಟನ್‌ ಪಿಎಂ ರಿಷಿ ಸುನಕ್‌

accident

ಶಿರಸಿ: ಬೈಕ್ ಅವಘಡದಲ್ಲಿ ಸವಾರ ಸಾವು, ಸಹಸವಾರ ಗಂಭೀರ

1-ddAS

ಹನುಮಸಾಗರದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ

1-dsadsadsad

ಅದ್ದೂರಿಯಾಗಿ ನೆರೆವೆರಿದ ದಮ್ಮೂರು ವೆಂಕಾವಧೂತ ರಥೋತ್ಸವ

“ಆರಗ ಮತ್ತೂಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

‘ಆರಗ ಮತ್ತೊಮ್ಮೆ’ ಬಾಳೆ ಹಣ್ಣಲ್ಲಿ ಬರೆದು ರಥಕ್ಕೆ ಎಸೆದ ಅಭಿಮಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.