ಭೀಮಾ ತೀರದಲ್ಲಿ ವಿಷಜಂತುಗಳದ್ದೇ ಕಾಟ!

ವಿದ್ಯುತ್‌-ರಸ್ತೆ ಸಂಪರ್ಕ ಕಡಿತ,ರಾತ್ರಿಯಿಡೀ ಕತ್ತಲೆಯಲ್ಲಿ ಕಾಲ ಕಳೆಯುತ್ತಿರುವ ಸಂತ್ರಸ್ತರು

Team Udayavani, Oct 20, 2020, 4:41 PM IST

gb-tdy-1

ಜೇವರ್ಗಿ: ಭೀಮಾನದಿ ಪ್ರವಾಹಕ್ಕೆ ತುತ್ತಾಗಿರುವ ಜೇವರ್ಗಿ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಲ್ಲಿ ವಿಷ ಜಂತುಗಳ ಕಾಟ ಆರಂಭ ಗೊಂಡಿದ್ದು, ಸಂತ್ರಸ್ತರ ನಿದ್ದೆಗೆಡೆಸಿದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚಿನ ನೀರು ಬಿಟ್ಟ ಪರಿಣಾಮ ನದಿ ತೀರದ ಜನರ ಬದುಕು ಬರ್ಬಾದ್‌ ಆಗಿದ್ದು, ಉತ್ತಮ ಬೆಳೆ, ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆಭೀಮಾ ಪ್ರವಾಹ ತಣ್ಣೀರು ಎರಚಿದೆ. ಇಷ್ಟೇ ಅಲ್ಲದೇ ಇದೀಗ ವಿಷ ಜಂತುಗಳಿಂದ ಜನರು ಇನ್ನಷ್ಟು ಭಯಪಡುವಂತಾಗಿದೆ.

ಕೋನಾಹಿಪ್ಪರಗಿ, ಮಂದರವಾಡ, ಕೋಬಾಳ ಗ್ರಾಮಗಳ ಜನರನ್ನು ಸಂಪೂರ್ಣ ಖಾಲಿ ಮಾಡಿಸಿ ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಅರ್ಧದಷ್ಟು ಮುಳುಗಡೆಯಾದ ಇನ್ನೂ ಕೆಲ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ನೀರು ನಿಂತಿರುವುದರಿಂದ ದುರ್ವಾಸನೆಯಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭಯದಲ್ಲಿ ಗ್ರಾಮಸ್ಥರು ಕಾಲ ಕಳೆಯುವಂತಾಗಿದೆ. ಇದರ ಮಧ್ಯೆ ಪ್ರವಾಹದ ನೀರಲ್ಲಿ ವಿಷ ಜಂತುಗಳು ಬಂದು ಮನೆಗಳಿಗೆ ನುಗ್ಗುತ್ತಿವೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಭೀಮಾ ನದಿ ಪ್ರವಾಹದಿಂದ ನಡುಗಡ್ಡೆಯಾದ ಕೆಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕಕಡಿತಗೊಳಿಸಲಾಗಿದೆ. ಗ್ರಾಮದ ಸುತ್ತಲೂ ನೀರುಬಂದಿರುವುದರಿಂದ ವಿದ್ಯುತ್‌ ಕಂಬ, ವಿದ್ಯುತ್‌ ಪರಿವರ್ತಕಗಳು ಮುಳುಗಡೆಯಾಗಿವೆ. ಇದರಿಂದ ಭೀಮಾ ತೀರದ ಜನರು ರಾತ್ರಿವಿಡೀ ಕತ್ತಲೆಯಲ್ಲಿ ವಿಷ ಜಂತುಗಳ ಹಾವಳಿಯಿಂದ ನಿದ್ರೆ ಇಲ್ಲದೇ ರಾತ್ರಿ ಕಳೆಯುತ್ತಿದ್ದಾರೆ.

ಕೆಲವು ಗ್ರಾಮಗಳು ನಡುಗಡ್ಡೆಯಾಗಿದ್ದರಿಂದ ಕೋವಿಡ್ ದಿಂದ ತೊಂದರೆ ಅನುಭವಿಸುತ್ತಿರುವ ಈ ಸಮಯದಲ್ಲಿ ಯಾರಿಗಾದರೂ ಯಾವುದೇ ರೋಗದಿಂದ ಹೆಚ್ಚು ಕಡಿಮೆಯಾದರೇ ತಾಲೂಕು ಕೇಂದ್ರದ ಆಸ್ಪತ್ರೆಗೆ ಸಾಗಿಸಲು ಸಹ ಪರದಾಡಬೇಕಾಗಿದೆ. ಅದರ ಜೊತೆ ಜಿಲ್ಲಾ ಕೇಂದ್ರ ಕಲಬುರಗಿ ನಗರಕ್ಕೂ ತೆರಳಲು ಈ ಪ್ರವಾಹ ಅಡ್ಡಿಯುಂಟು ಮಾಡಿದೆ. ಗ್ರಾಮಗಳ ಸಂಪರ್ಕ ರಸ್ತೆ ಸ್ಥಗಿತಗೊಂಡಿದ್ದರಿಂದ ಕಳೆದ ಮೂರ್‍ನಾಲ್ಕು ದಿನಗಳಿಂದ ನಡುಗಡ್ಡೆಯಾಗಿರುವ ಗ್ರಾಮದಲ್ಲಿಯೇ ಭಯದಿಂದ ಬದುಕು ಸಾಗಿಸಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ. ಈಗಾಗಲೇ ಭೀಮಾ ತೀರದ ಗ್ರಾಮಗಳ ಒಟ್ಟು 6,300 ಜನರನ್ನು ಕಾಳಜಿಕೇಂದ್ರದಲ್ಲಿ ಊಟೋಪಚಾರ ಹಾಗೂ ಸೌಲಭ್ಯ ಒದಗಿಸಿಕೊಡಲಾಗಿದೆ. ಇನ್ನೂ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭೀಮಾ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರ ಆತಂಕ ಕೂಡ ಅಧಿಕಗೊಂಡಿದೆ.

 

-ವಿಜಯಕುಮಾರ ಎಸ್‌.ಕಲ್ಲಾ

ಟಾಪ್ ನ್ಯೂಸ್

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

once upon a time in jamaaligudda

ಧನಂಜಯ್‌ ಹೊಸಚಿತ್ರ ‘ಜಮಾಲಿಗುಡ್ಡ’ ರಿಲೀಸ್‌ ಡೇಟ್‌ ಫಿಕ್ಸ್‌

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10PSI

ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?

9dalit

ದಲಿತನ ಕೊಲೆಗೆ ಸಂಘಟನೆಗಳ ಮೌನವೇಕೆ: ಬೆಣ್ಣೂರ

8farmers

ದೇಶಕ್ಕೆ ರೈತರು-ಕಾರ್ಮಿಕರ ಕೊಡುಗೆ ಅಪಾರ

7crop1

ಬೆಳೆವಿಮೆ ರೈತರ ಪ್ರೀಮಿಯಂ ಸರ್ಕಾರವೇ ಭರಿಸಲಿ

6CUK

ಸಿಯುಕೆಗೆ ಕೆನರಾ ಬ್ಯಾಂಕಿಂದ ಟ್ರ್ಯಾಕ್ಟರ್‌ ಟ್ಯಾಂಕರ್‌ ಕೊಡುಗೆ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

13pension

ನೂತನ ಪಿಂಚಣಿ ಯೋಜನೆ ರದ್ದತಿಗೆ ನೌಕರರ ಒಕ್ಕೂಟ ಆಗ್ರಹ

17

ತಿಂಗಳಿಗೆ 4 ಬಾರಿ ಡೀಸಿಗಳ ಭೇಟಿ

freedom-fighters

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೀಯ

12takerl

ಟ್ಯಾಟರಲ್‌ ಕಾಮಗಾರಿ ವಿಳಂಬ ಖಂಡಿಸಿ ಪಾದಯಾತ್ರೆ

1-we-ew-rewr

ಮತ ಮಾರಾಟಕ್ಕಿಲ್ಲ ಎಂದು ಜನಸಂಕಲ್ಪ ಮಾಡಬೇಕು :ಗಣಪತಿ ಸಚ್ಚಿದಾನಂದ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.