Udayavni Special

ರೈತ ಅನುವುಗಾರರಿಂದ ಅನಿರ್ದಿಷ್ಟ ಧರಣಿ

ಗೌರವಧನ ಹತ್ತು ಸಾವಿರ ರೂ. ಹೆಚ್ಚಳಕ್ಕೆ ಒತ್ತಾಯಸಮಸ್ಯೆಗೆ ಸಿಎಂ-ಕೃಷಿ ಸಚಿವರು ಸ್ಪಂದಿಸಲಿ

Team Udayavani, Feb 26, 2020, 10:55 AM IST

26-February-02

ಕಲಬುರಗಿ: ಕೃಷಿ ಇಲಾಖೆಯಲ್ಲಿ (ರೈತ ಅನುವುಗಾರರು) ತಾಂತ್ರಿಕ ಉತ್ತೇಜಕರಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 6500 ಜನರಿಗೆ ಮಾಸಿಕ 10000ರೂ. ಗೌರವ ಧನ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಆರಂಭವಾಗಿದ್ದು, ಧರಣಿಗೂ ಮುನ್ನ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಎಸ್‌. ಹಿರೇಮಠ ನೇತೃತ್ವದಲ್ಲಿನಗರದ ಸರ್ದಾರ ವಲ್ಲಭಬಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ, ನಂತರ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಗೌರವಧನಕ್ಕೆ ಆಗ್ರಹಿಸಿ ಕಳೆದ ಡಿಸೆಂಬರ್‌ನಲ್ಲಿ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು. ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಅನೇಕ ಬಾರಿ ಭೇಟಿ ಮಾಡಿ ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಟ್ಟರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಕೇವಲ ಹುಸಿ ಭರವಸೆ ಕೊಡುತ್ತಿದೆ. ಮಾ.5ರಂದು ರಾಜ್ಯದ ಬಜೆಟ್‌ ನಲ್ಲಿಯಾದರೂ ಮಾಸಿಕ 10000ರೂ. ಗೌರವ ಧನ ಕೊಡುವ ದಿಸೆಯಲ್ಲಿ ಒತ್ತಡ ಹೇರಲು ಹೋರಾಟ ರೂಪಿಸಲಾಗಿದೆ ಎಂದರು.

ಕೃಷಿ ಇಲಾಖೆಯಲ್ಲಿ ಸದ್ಯ ಯಾವುದೇ ಸಹಾಯಕರ ಹುದ್ದೆ ಇಲ್ಲ. ಈ ಕುರಿತು ಸ್ವತಃ ಕೃಷಿ ಅ ಧಿಕಾರಿಗಳೇ ಪ್ರತಿಭಟನೆ ಮಾಡಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸುಮಾರು 40 ಲಕ್ಷ ರೈತರ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ತಾಂತ್ರಿಕ ಉತ್ತೇಜಕರನ್ನು ಸರ್ಕಾರ ಕೇವಲ ಕಮೀಷನ್‌ ಮೇಲೆ ಕೆಲಸ ತೆಗೆದುಕೊಳ್ಳುತ್ತಿದ್ದು, ಯಾವುದೇ ಭತ್ಯೆ ಹಾಗೂ ಸೌಲಭ್ಯ ಇಲ್ಲದೇ ದುಡಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಅನುವುಗಾರರ (ತಾಂತ್ರಿಕ ಉತ್ತೇಜಕರು) ಕೆಲಸದ ಅವ ಧಿ ಕೇವಲ ಒಂದು ವರ್ಷಕ್ಕೆ ನಿಗದಿಪಡಿಸಿ, ಅವರಿಗೆ ಯಾವುದೇ ಸೌಲಭ್ಯ ಕೊಡದೇ ಕಮೀಷನ್‌ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಿರುವುದರಿಂದ ಅವರೆಲ್ಲ ಶೋಷಣೆಗೆ ಒಳಗಾಗಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಮಸ್ಯೆಗೆ ಸ್ಪಂದಿಸಿಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ದೇವಪ್ಪ ಗುಡ್ಡಾನೋರ, ಮಹಿಬೂಬ್‌ ಬೇವಿನಗಿಡ, ಶೇಖರಪ್ಪ ಅಸೂಟಿ, ಮುಖೇಶ, ಲಕ್ಷ್ಮೀಶ ಎಲ್‌., ಬಸವರಾಜ ಕೆ.ಆರ್‌, ಮಲ್ಲೇಶ, ರಿಯಾಜುದ್ದೀನ್‌ ಮಂಗಲಗಿ, ಗಫ‌ೂರ್‌ ಕೆ. ಮಸಳಿ, ಜಗದೀಶ ಗಿರಕಿ ಮುಂತಾದವರು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

2 ದಿನಗಳಲ್ಲಿ ಅಮಿತ್‌ ಶಾಗೆ ಮತ್ತೂಮ್ಮೆ ಕೋವಿಡ್ ಪರೀಕ್ಷೆ

2 ದಿನಗಳಲ್ಲಿ ಅಮಿತ್‌ ಶಾಗೆ ಮತ್ತೂಮ್ಮೆ ಕೋವಿಡ್ ಪರೀಕ್ಷೆ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೆ ಕೋವಿಡ್ ಪಾಸಿಟಿವ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೆ ಕೋವಿಡ್ ಪಾಸಿಟಿವ್

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಆಕ್ಲೆಂಡ್‌: ರಾಧಾಕೃಷ್ಣ ದೇಗುಲಕ್ಕೆ ನ್ಯೂಜಿಲೆಂಡ್‌ ಪ್ರಧಾನಿ ದಿಢೀರ್‌ ಭೇಟಿ !

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ಹಿಂದಿ ಶ್ರೇಷ್ಠತೆ ವ್ಯಸನ ದಕ್ಷಿಣ ಭಾರತದ ನಾಯಕರ ಅವಕಾಶಗಳನ್ನು ಕಸಿದಿದೆ: ಎಚ್ ಡಿಕೆ ಆಕ್ರೋಶ

ರಾಜ್ಯದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

ರಾಜ್ಯದ ಪ್ರವಾಹ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ

ಸಾಸ್ತಾನ ‘ರುಚಿ’ಸಂಸ್ಥೆಯಲ್ಲಿ ಓವನ್ ಸ್ಪೋಟಗೊಂಡು ಮಾಲೀಕ ರೋಬರ್ಟ್ ಪುಟಾರ್ಡೊ ಸಾವು

ಸಾಸ್ತಾನ ‘ರುಚಿ’ಸಂಸ್ಥೆಯಲ್ಲಿ ಓವನ್ ಸ್ಪೋಟಗೊಂಡು ಮಾಲೀಕ ರೋಬರ್ಟ್ ಪುಟಾರ್ಡೊ ಸಾವು

1000 ಕೋಟಿ ಬೆಲೆಯ 191 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಕಂದಯ ಅಧಿಕಾರಿಗಳು: ಇಬ್ಬರು ವಶಕ್ಕೆ

1000 ಕೋಟಿ ಬೆಲೆಯ 191 ಕೆಜಿ ಹೆರಾಯಿನ್ ವಶಪಡಿಸಿಕೊಂಡ ಕಂದಾಯ ಅಧಿಕಾರಿಗಳು: ಇಬ್ಬರು ವಶಕ್ಕೆ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

ಕೋವಿಡ್ ಗೆ ಯುವ ಜನರೇ ಟಾರ್ಗೆಟ್‌

ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಜಿ. ರಾಮಕೃಷ್ಣ ಇನ್ನಿಲ್ಲ

ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಜಿ. ರಾಮಕೃಷ್ಣ ಇನ್ನಿಲ್ಲ

ನೂರು ದಿನ ಪೂರೈಸಿದ ಡಿಜಿಟಲ್‌ ಕ್ಲಾಸಸ್‌

ನೂರು ದಿನ ಪೂರೈಸಿದ ಡಿಜಿಟಲ್‌ ಕ್ಲಾಸಸ್‌

ಕೋವಿಡ್ ತಡೆಗೆ ಯುನೈಟೆಡ್‌ ಆಸ್ಪತ್ರೆ ಮಹತ್ವದ ಹೆಜ್ಜೆ

ಕೋವಿಡ್ ತಡೆಗೆ ಯುನೈಟೆಡ್‌ ಆಸ್ಪತ್ರೆ ಮಹತ್ವದ ಹೆಜ್ಜೆ

gb-tdy-1

ಬುಡಕಟ್ಟು ಕಲಾವಿದರಿಗೆ ಆಸರೆ ದೊರೆಯಲಿ

MUST WATCH

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani



ಹೊಸ ಸೇರ್ಪಡೆ

2 ದಿನಗಳಲ್ಲಿ ಅಮಿತ್‌ ಶಾಗೆ ಮತ್ತೂಮ್ಮೆ ಕೋವಿಡ್ ಪರೀಕ್ಷೆ

2 ದಿನಗಳಲ್ಲಿ ಅಮಿತ್‌ ಶಾಗೆ ಮತ್ತೂಮ್ಮೆ ಕೋವಿಡ್ ಪರೀಕ್ಷೆ

ಬಳಗಾನೂರು: 30 ಜನರಿಗೆ ಕೋವಿಡ್ ಮಹಾಮಾರಿ

ಬಳಗಾನೂರು: 30 ಜನರಿಗೆ ಕೋವಿಡ್ ಮಹಾಮಾರಿ

ಸಹಕಾರಿ ಕ್ಷೇತ್ರಕ್ಕೆ ಮುರುಗೇಶ ಕೊಡುಗೆ ಸ್ಮರಣೀಯ

ಸಹಕಾರಿ ಕ್ಷೇತ್ರಕ್ಕೆ ಮುರುಗೇಶ ಕೊಡುಗೆ ಸ್ಮರಣೀಯ

ಹಿಂದಿ ಗೊತ್ತಿದ್ದರೆ ಮಾತ್ರವೇ ನಾವು ಭಾರತೀಯರೇ?: ಸಂಸದೆ ಕನ್ನಿಮೋಳಿ ಆರೋಪ

ಹಿಂದಿ ಗೊತ್ತಿದ್ದರೆ ಮಾತ್ರವೇ ನಾವು ಭಾರತೀಯರೇ?: ಸಂಸದೆ ಕನ್ನಿಮೋಳಿ ಆರೋಪ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೆ ಕೋವಿಡ್ ಪಾಸಿಟಿವ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೆ ಕೋವಿಡ್ ಪಾಸಿಟಿವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.